ಮಹಿಳೆಯರಿಗೆ ತುಡಿತ-ಮಿಡಿತಕ್ಕೆ 12ನೇ ಶತಮಾನದಲ್ಲೇ ವೇದಿಕೆ ಕಲ್ಪಿಸಿದ ಶರಣರನ್ನು ಎಷ್ಟು ನೆನೆದರೂ ಸಾಲದು…; ಡಾ. ಗುರುದೇವಿ ಹುಲ್ಲೆಪ್ಪನ್ನವರಮಠ
ಬೆಳಗಾವಿಯಲ್ಲಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿ
ಮಹಿಳೆಯರು ವ್ಯಕ್ತವಾಗಲು ವೇದಿಕೆಯನ್ನು ಕಲ್ಪಿಸಿ, ಇಂದು ಮಹಿಳೆಯರು ಮುಖ್ಯವಾಹಿನಿಗೆ ಬರಲು 12ನೇ ಶತಮಾನದಲ್ಲಿ ಶರಣರು ನೀಡಿದ ಅವಕಾಶವೇ ಕಾರಣವೆಂದು ಡಾ. ಗುರುದೇವಿ ಹುಲ್ಲೆಪ್ಪನ್ನವರಮಠ ಹೇಳಿದರು. ಇಂದು ಬೆಳಗಾವಿಯಲ್ಲಿ ಜಿಲ್ಲಾ ಮಹಿಳಾ ಸಂಘಟನೆಗಳ ಒಕ್ಕೂಟ ಧಾರಿಣಿ ಹಾಗೂ ಕನ್ನಡ ಭವನದ ಸಂಯುಕ್ತಾಶ್ರಯದಲ್ಲಿ ಶಿವಶರಣೆ ಅಕ್ಕಮಹಾದೇವಿಯ ಜಯಂತಿಯನ್ನು ಆಚರಿಸಲಾಯಿತು.
ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅವರು ವಹಿಸಿದ್ದರು. ಶಿವಶರಣೆ ಅಕ್ಕಮಹಾದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಗಣ್ಯರು ಜಯಂತ್ಯೋತ್ಸವಕ್ಕೆ ಚಾಲನೆಯನ್ನು ನೀಡಿದರು.
ನಂತರ ಸಾಧಕಿಯರಾದ ಶೈಲಜಾ ಭಿಂಗೆ ಮತ್ತು ರತ್ನಕ್ಕ ಬೆಲ್ಲದ ಅವರನ್ನು ಸತ್ಕರಿಸಲಾಯಿತು. ತದ ನಂತರ ಮಾಸ್ಟರ್ ರಿನೌನ್ಸರ್, ಹಾಲು ಹನಿಗಳು, ಶರಣರ ನೆನೆದರ ಸರಗಿಯ ಇಟ್ಟಂಗ, ಕಾವ್ಯಪ್ರಭ ಇನ್ನುಳಿದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಡಾ. ಗುರುದೇವಿ ಹುಲ್ಲೆಪ್ಪನ್ನವರಮಠ ಅವರು, ಮಹಿಳೆಯರಿಗೆ ತುಳಿತ, ಮಿಡಿತಗಳಿಗೆ ಇಡೀ ಜಗತ್ತಿನಲ್ಲೇ ವೇದಿಕೆ ಒದಗಿಸಿಕೊಟ್ಟವರು 12ನೇ ಶತಮಾನದ ಶರಣರು. ನಾಲ್ಕು ಗೋಡೆಯ ಮಧ್ಯದಲ್ಲಿರುತ್ತಿದ್ದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸರಿಸಮಾನವಾದ ಹಕ್ಕನ್ನು ಅವರು ನೀಡಿದರು. ಸಲಹೆಗಿಂತ ಸಬಲೀಕರಣ ಅವಶ್ಯಕತೆ ಎಂಬುದನ್ನು ಅವರು ತಿಳಿಸಿಕೊಟ್ಟು, ಹೆಣ್ಣಿಗೆ ದೇವತೆಯ ಸ್ಥಾನವನ್ನು ನೀಡಿದರು ಎಂದರು.
ನಂತರ ಶಿವನಾದ ನೃತ್ಯ ಕಾರ್ಯಕ್ರಮ ನಡೆಯಿತು. ಮೊದಲಿಗೆ ಹೇಮಾ ಸೊನೊಳ್ಳಿ ಅವರು ಪ್ರಾಸ್ತಾವಿಕ ಮಾಡಿದರು. ಈ ವೇಳೆ ಸಮತಾ ಹೊಸಪೇಟೆ, ಆಶಾ ಯಮಕನಮರ್ಡಿ, ಪ್ರಭಾ ಪಾಟೀಲ್, ಸುಧಾ ಪಾಟೀಲ್, ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ, ಅನ್ನಪೂರ್ಣಾ ಪಾಟೀಲ್ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7