Breaking News

ಬೆಳಗಾವಿ ನಗರದಲ್ಲಿ ಗೋಮಾಂಸ ಸಾಗಾಟ…

Spread the love

ಬೆಳಗಾವಿ ನಗರದಲ್ಲಿ ಗೋಮಾಂಸ ಸಾಗಾಟ…
ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಶ್ರೀರಾಮಸೇನೆ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು…
ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೆಳಗಾವಿ ನಗರದಲ್ಲಿ ಗೋಮಾಂಸವನ್ನು ಸಾಗಾಟ ಮಾಡುತ್ತಿದ್ದ ವಾಹನ ಮತ್ತು ಚಾಲಕನನ್ನು ಶ್ರೀರಾಮಸೇನೆ & ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರ್ಯಕರ್ತರು ಹಿಡಿದು ಎಪಿಎಂಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಮಧ್ಯಾನ್ಹ ನಡೆದಿದೆ.
ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದ ಸಿಗ್ನಲ್’ನಲ್ಲಿ ಬೋಲೆರೋ ಟೆಂಪೋ ವಾಹನ ನಿಂತುಕೊಂಡಿತ್ತು. ಅದರಿಂದ ಬೀರುವ ವಾಸನೆಯಿಂದ ಸಂಶಯಗೊಂಡು, ಅದನ್ನ ತಡೆಹಿಡಿದು ಪರಿಶೀಲಿಸಿದಾಗ, ಅದರಲ್ಲಿ ಗೋಮಾಂಸವಿರುವುದು ಕಂಡು ಬಂದಿದೆ.
ಕೂಡಲೇ ಈ ವಿಷಯವನ್ನು ಎಪಿಎಂಸಿ ಪೊಲೀಸರ ಗಮನಕ್ಕೆ ತರಲಾಯಿತು. ಚಾಲಕನನ್ನು ವಿಚಾರಿಸಿದಾಗ ಕ್ಯಾಂಪನಿಂದ ಗೋಮಾಂಸವನ್ನು ಬೇರೆಡೆ ಸಾಗಿಸಲಾಗುತ್ತಿತ್ತೆಂದು ತಿಳಿದು ಬಂದಿದೆ. ಸರ್ಕಾರ ಗೋಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಾದ ರವಿಕುಮಾರ್ ಕೋಕಿತಕರ ಆಗ್ರಹಿಸಿದರು.
ಈ ವೇಳೆ ಶ್ರೀರಾಮಸೇನೆ & ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರ್ಯಕರ್ತರು ಭಾಗಿಯಾಗಿದ್ಧರು. ಸದ್ಯ ವಾಹನ ಚಾಲಕ ಮತ್ತು ವಾಹನವನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ