ಏಪ್ರೀಲ್ 29 ರಂದು ಬೆಳಗಾವಿಯಲ್ಲಿ ಶಿವಜಯಂತಿ…ಮೇ. 1 ರಂದು ರೂಪಕಗಳ ಮೆರವಣಿಗೆ
ಮಧ್ಯವರ್ತಿ ಶಿವಜಯಂತಿ ಉತ್ಸವ ಮಂಡಳದ ಸಭೆಯಲ್ಲಿ ಮಾಹಿತಿ
ಹಿಂದವಿ ಸ್ವರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ಯ ಮೇ 1 ರಂದು ಬೆಳಗಾವಿ ನಗರದಲ್ಲಿ ಐತಿಹಾಸಿಕ ಶಿವ ಜಯಂತಿ ರೂಪಕಗಳ ಮೆರವಣಿಗೆಯನ್ನು ನಡೆಸುವ ನಿರ್ಧಾರವನ್ನು ಮಧ್ಯವರ್ತಿ ಶಿವ ಜಯಂತಿ ಉತ್ಸವ ಮಂಡಳದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಬೆಳಗಾವಿಯ ಶ್ರೀ ಜತ್ತಿಮಠ ದೇವಸ್ಥಾನದಲ್ಲಿ ಶಿವಜಯಂತಿಯ ಪೂರ್ವಸಿದ್ಧತಾ ಸಭೆಯನ್ನು ಕರೆಯಲಾಗಿತ್ತು. ಮಂಗಳವಾರ ಏಪ್ರಿಲ್ 29 ಮಂಗಳವಾರರಂದು ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ನಗರದ ನರಗುಂದಕರ್ ಭಾವೆ ಚೌಕದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಶಿವಜಯಂತಿ ಉತ್ಸವವನ್ನು ಉದ್ಘಾಟಿಸಲಾಗುವುದು. ಅದಾದ ಬಳಿಕ ಬೆಳಿಗ್ಗೆ 10 ಗಂಟೆಗೆ, ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆಯನ್ನು ಸಲ್ಲಿಸಲಾಗುವುದು.
ನಂತರ, ವಿವಿಧ ಭಾಗಗಳಿಂದ ಆಗಮಿಸುವ ಶಿವ ಜ್ಯೋತಿಗಳನ್ನು ಮಧ್ಯವರ್ತಿ ಶಿವ ಜಯಂತಿ ಉತ್ಸವ ಮಂಡಳವು ಸ್ವಾಗತಿಸಲಿದೆ. ಮೇ 1 ರಂದು ಬೆಳಗಾವಿ ನಗರದ ಶಿವ ಜಯಂತಿ ರೂಪಕಗಳ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಪಲ್ಲಕ್ಕಿಯು ಮಾರುತಿ ಗಲ್ಲಿಯ ಮಾರುತಿ ಮಂದಿರದಿಂದ ನರಗುಂದಕರ್ ಭಾವೆ ಚೌಕಗೆ ತಲುಪಿ ಅಲ್ಲಿ ಪೂಜೆ ಸಲ್ಲಿಸಿ, ಚಿತ್ರರಥ ಮೆರವಣಿಗೆ ಆರಂಭವಾಗಲಿದೆ. ಈ ಕುರಿತು ಸಭೆಯಲ್ಲಿ ಸಲಹೆ ಸೂಚನೆಗಳನ್ನು ಪಡೆಯಲಾಯಿತು.
ಮೇ 4 ರಂದು ರಾಜಹಂಸಗಡದಲ್ಲಿ ಮಧ್ಯವರ್ತಿ ಶಿವ ಜಯಂತಿ ಉತ್ಸವ ಮಂಡಳದ ವತಿಯಿಂದ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ಮಂಡಳವನ್ನು ಸಂಪರ್ಕಿಸಬಹುದಾಗಿದೆ. ಈ ಕುರಿತು ಮಾಜಿ ಮಹಾಪೌರರಾದ ಮಾಲೋಜಿರಾವ್ ಅಷ್ಟೇಕರ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಪ್ರಕಾಶ ಮರಗಾಳೆ, ರಂಜಿತ್ ಚವ್ಹಾಣ ಪಾಟೀಲ, ನೇತಾಜಿರಾವ್ ಜಾಧವ, ಗಂಗಾರಾಮ್ ಪಾವಲೆ, ದತ್ತಾ ಜಾಧವ, ಶಿವರಾಜ್ ಪಾಟೀಲ್, ವಿಕಾಸ ಕಲಘಟಗಿ, ಮದನ್ ಬಾಮನೆ, ವಿಜಯ ಪಾಟೀಲ, ಸಾಗರ ಪಾಟೀಲ, ಬಾಬು ಕೋಲೆ, ಅನಿಲ ಅಮರೋಳೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
Laxmi News 24×7