ಸಿಎಂ ಸ್ಥಾನ ಕಾಯ್ದುಕೊಳ್ಳಲು ಸಿದ್ಧರಾಮಯ್ಯ ಜಾತಿಗಣತಿ ವರದಿ ಜಾರಿಗೊಳಿಸಿ ಬೆಂಕಿ ಹಚ್ಚಲು ಹೊರಟಿದ್ದಾರೆ…
ಕಾಂಗ್ರೆಸ್ಸಿಗರನ್ನು ಜನರು ಬಡಿಗೆಯಿಂದ ಹೊಡೆಯುವ ದಿನಗಳು ದೂರ ಉಳಿದಿಲ್ಲ; ಬಿ.ವೈ ವಿಜಯೇಂದ್ರ
ಸಿಎಂ ಸ್ಥಾನ ಕೈತಪ್ಪಿ ಹೋಗುತ್ತಿದೆ ಎಂಬ ಕಾರಣಕ್ಕೆ ಸಿದ್ಧರಾಮಯ್ಯ ಕಾಲ ಮಿತಿ ಮೀರಿ ಹೋದ ಜಾತಿ ಗಣತಿ ವರದಿ ಜಾರಿ ಮಾಡಿ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಕಳಕಳಿಯಿದ್ದರೇ ಹಿಂದೆಯೇ ಈ ವರದಿಯನ್ನು ಯಾಕೆ ಜಾರಿಗೊಳಿಸಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಪ್ರಶ್ನಿಸಿದರು.
ಅವರು ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ಹಿಂದುಳಿದ ಸಮುದಾಯಗಳಿಗೆ, ಶೋಷಿತ-ಪೀಡಿತ ಸಮುದಾಯಗಳಿಗೆ ನ್ಯಾಯ ಕೊಡಿಸುವ ಬದ್ಧತೆ ಭಾರತೀಯ ಜನತಾ ಪಕ್ಷಕ್ಕಿದ್ದು, ಸಿಎಂ ಸಿದ್ಧರಾಮಯ್ಯ ತಮ್ಮ ರಾಜಕೀಯ ಭದ್ರತೆಗಾಗಿ ಷಡ್ಯಂತ್ರವನ್ನು ರಚಿಸುತ್ತಿದ್ದಾರೆ. ಅವರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಕಳಕಳಿಯಿಲ್ಲ. 2015 ರಲ್ಲಿಯೇ ಜಾತಿಗಣತಿ ವರದಿ ಬಂದಿತ್ತು. 4 ವರ್ಷಗಳ ಹಿಂದೆ ಯಾಕೆ ಜಾರಿಗೊಳಿಸಲಿಲ್ಲ. ಸಿಎಂ ರಾಜೀನಾಮೆ ಕೊಡುವ ದಿನಗಳು ಹತ್ತಿರ ಬಂದ ಹಿನ್ನೆಲೆ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಇನ್ನು ಜಾತಿಗಣತಿ ವರದಿಯನ್ನು ಅನುಷ್ಠಾನ ಮಾಡುವುದು ಇಲ್ಲ. ಕಾಂಗ್ರೆಸ್ ಸರ್ಕಾರದಿಂದ ಇದು ಸಾಧ್ಯವು ಆಗುವುದಿಲ್ಲ. ವರದಿಯ ಕಾಲಮಿತಿ ಮುಗಿದು ಹೋಗಿದೆ. ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಯಶಸ್ವಿಯಾಗಿ ಜನಾಕ್ರೋಶ ಯಾತ್ರೆಯನ್ನು ಆರಂಭಿಸಿದೆ. ಜನರು ರಾಜ್ಯ ಸರ್ಕಾರವನ್ನು ಉಗಿಯುತ್ತಿದ್ದು, ಬಡಿಗೆಯಿಂದ ಹೊಡೆಯುವ ದಿನಗಳು ಹತ್ತಿರವಾಗುತ್ತಿವೆ. ಆದರೇ ಸಿಎಂ ಜನರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೂಡ ಇಲ್ಲ ಎಂದರು.
ಈ ಸಂದರ್ಭದಲ್ಲಿ ವಿಧಾನ ಸಭೆಯ ಪ್ರತಿಪಕ್ಷ ನಾಯಕರಾದ ಆರ್. ಅಶೋಕ, ರಾಜ್ಯ ಉಪಾಧ್ಯಕ್ಷರಾದ ಅನೀಲ ಬೆನಕೆ, ಬಿಜೆಪಿ ನಗರಾಧ್ಯಕ್ಷೆ ಗೀತಾ ಸುತಾರ್, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7