ಬೆಳಗಾವಿಯಲ್ಲಿ ಅಕ್ಕಮಹಾದೇವಿ ಜಯಂತಿ
ಶ್ರೀಶೈಲ ಶಿವ ಶರಣರ ಸ್ವರ್ಗ… ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು
ಶ್ರೀಶೈಲ ಪೀಠಕ್ಕೂ ಶಿವ ಶರಣರಿಗೂ ಅವಿನಾಭಾವ ಸಂಬಂಧ. ಅದಕ್ಕೆ ಶ್ರೀಶೈಲವನ್ನು ಶಿವ ಶರಣರ ಸ್ವರ್ಗ ಎಂದು ಕರೆದುಕೊಂಡು ಬಂದಿದ್ದಾರೆ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸೋಮವಾರ ಸಂಜೆ ಕನ್ನಡ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹುತೇಕ ಶಿವ ಶರಣರು, ಸಂತರು ಹಾಗೂ ಮಹಾಂತರು ಶ್ರೀಶೈಲವನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಸಾಧನೆಯನ್ನು ತಲುಪಿದವರು. ಕೆಲವರು ಸಾಧನೆಯ ಕೊನೆಯ ಹಂತದಲ್ಲಿ ಶ್ರೀಶೈಲ ತಲುಪಿದರೆ ಇನ್ನೂ ಕೆಲವರು ಶ್ರೀಶೈಲದಿಂದಲೇ ತಮ್ಮ ಸಾಧನೆಯನ್ನು ಪ್ರಾರಂಭ ಮಾಡಿದರು. ಪ್ರಾರಂಭ ಹಾಗೂ ಅಂತ್ಯ ಶ್ರೀಶೈಲವೆ ಕೇಂದ್ರವಾಗಿತ್ತು ನಾವು ಮರೆಯಲು ಸಾಧ್ಯವಿಲ್ಲ ಎಂದರು.
ದೇವರ ದಾಸಿಮಯ್ಯರು, ಶಿವಯೋಗಿ ಸಿದ್ಧರಾಮೇಶ್ವರರು ಶ್ರಿ ಶೈಲದಿಂದ ಸಾಧನೆ ಪ್ರಾರಂಭ ಮಾಡಿದರೆ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಮಲ್ಲಿಕಾರ್ಜುನನಲ್ಲಿ ಐಕ್ಯರಾದರು ಎಂದು ಅವರ ಇತಿಹಾಸದಿಂದ ಕೇಳುಕೊಂಡು ಬಂದಿದ್ದೇವೆ ಎಂದರು.
ಭಕ್ತಿಗೆ ಸಾಕಷ್ಟು ಶಾಸ್ತ್ರ, ಗ್ರಂಥಗಳಲ್ಲಿ ಸಿಗುತ್ತವೆ. ನಿಜಗುಣ ಶಿವಯೋಗಿಗಳು ಬರೆದಿದ್ದಾರೆ. ಸಾಮಾನ್ಯವಾಗಿ ನಾವು ಎಲ್ಲರಿಗಿಂತಲೂ ಹೆಚ್ಚಾಗಿ ನಾವು ತಾಯಿಯನ್ನು ಪ್ರೀತಿ ಮಾಡುತ್ತಾರೆ. ಸ್ವಲ್ಪ ದಿನ ಹೋದ ಮೇಲೆ ಬದಲಾಗುತ್ತ ಹೋಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ತನನ್ನೇ ತಾನು ಪ್ರೀತಿ ಮಾಡುತ್ತಾರೆ. ಇದು ಸರ್ವೆ ಸಾಮಾನ್ಯ ಎಂದರು.ಬೆಳಗಾವಿಯಲ್ಲಿ ಅಕ್ಕಮಹಾದೇವಿ ಜಯಂತಿಯನ್ನು ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ವೈಭವ ಪೂರ್ಣವಾಗಿ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7