ಹುಬ್ಬಳ್ಳಿಯಲ್ಲಿ ಸೈಕೋಪಾತಕಿಯಿಂದ ಹೇಯ್ ಕೃತ್ಯ, ಐದು ವರ್ಷದ ಬಾಲಕಿ ಸಾವು…. ಅತ್ಯಾಚಾರಕ್ಕೆ ಯತ್ನಿಸಿ ಮಗು ಕೊಲೆ ಮಾಡಿದ ಕಿರಾತಕನ ವಿರುದ್ಧ ಜನಾಕ್ರೋಶ.

ಐದು ವರ್ಷದ ಮಗುವನ್ನು ಸ್ವೀಟ್ ಕೋಡೋ ಆಸೆ ತೋರಿಸಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ, ಮಗು ಕಿರುಚಾಟದಿಂದ ಭಯ ಬಿದ್ದು ಮಗುವನ್ನೇ ಹತ್ಯೆ ಮಾಡಿರುವ ಹೇಯ್ ಕೃತ್ಯ ಹುಬ್ಬಳ್ಳಿಯಲ್ಲಿಂದು ನಡೆದಿದ್ದು, ಆರೋಪಿಯ ವಿರುದ್ಧ ಹುಬ್ಬಳ್ಳಿಗರು ಠಾಣೆಗೆ ಮತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಿರಾತಕ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಮಗುವಿನ ತಂದೆ ತಾಯಿ ಮೂಲತ ಕೊಪ್ಪಳ ಜಿಲ್ಲೆಯವರಾಗಿದ್ದ ಹುಬ್ಬಳ್ಳಿಯಲ್ಲಿ ಬೇರೆ ಬೇರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮಗು ಮನೆಯ ಕಂಪೌಂಡ ಒಳಗಡೆ ಆಟವಾಡುತ್ತಿದ್ದ ವೇಳೆ ಬಂದ ಕಿರಾತಕ ಮಗುವಿಗೆ ಸ್ವೀಟ್ ಆಸೆ ತೋರಿಸಿ ಕಂಪೌಂಡನಿಂದ ಎತ್ತಿಕೊಂಡು, ಹತ್ತಿರದ ತಗಡಿನ ಶೆಡ್ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಇನ್ನೂ ಬಿಹಾರ ಮೂಲದ ಸೈಕೋಪಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಮಗು ಭಯಗೊಂಡು ಕಿರುಚಾಟ ಮಾಡಲಾರಂಭಿಸಿದೆ. ಅಷ್ಟರಲ್ಲಿ ಅಕ್ಕಪಕ್ಕದವರು ಮಗು ಅಳುವುದನ್ನು ಕೇಳಿ, ಶೆಡ್ಗೆ ಬರಲಾರಂಭಿಸುವ ಸೂಚನೆ ಸಿಗುತ್ತಿದಂತೆ. ಆರೋಪಿ ಸೈಕೋಪಾತ್ ಮಗುವ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ಜನರಿಗೆ ವಿಶೇಷ ತಿಳಿಯಿತ್ತಿದಂತೆ ಹುಬ್ಬಳ್ಳಿಲ್ಲಿ ಸೈಕೋಪಾತ್ ಕೃತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದ್ದು, ಅಶೋಕ ನಗರ ಪೊಲೀಸ್ ಠಾಣೆಗೆ ಜನ ಮುತ್ತಿಗೆ ಹಾಕಿ ಆರೋಪಿ ವಿರುದ್ಧ ಹಿಡಿಶಾಪ ಹಾಕಿ ನಮ್ಮಗೆ ಒಪ್ಪಿಸಿ ಎಂದು ಘೋಷಣೆ ಕೂಗಿ ಕಿಡಿಕಾರಿದರು. ಘಟನೆಯ ವಿಷಯ ತಿಳಿದು ಠಾಣೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆ ಕುರಿತು ಅಧಿಕಾರಿಗಳಿಗೆ ಮಾಹಿತಿ ಪಡೆದುಕೊಂಡರು. ಬಳಿಕ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.
ಆದರೆ ಸೈಕೋಪಾತಕಿ ಮೇಲೆ ಗರಂ ಆಗಿರೋ ಸ್ಥಳೀಯರು ಪ್ರತಿಭಟನೆಯಿಂದ ಹಿಂದೆ ಸರಿಯದೇ ಆರೋಪಿ ಒಪ್ಪಿಸಲು ಪಟ್ಟ ಹಿಡಿದು ಪ್ರತಿಭಟನೆ ಮುಂದುವರೆಸಿದರು.
Laxmi News 24×7