ಹುಬ್ಬಳ್ಳಿ: ಮಹದಾಯಿ ಯೋಜನೆಯ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು. ವರೂರಿನ ಜೈನ ತೀರ್ಥಂಕರ ಮಹಾಮಸ್ತಕಾಭಿಷೇಕದ ಕೊನೆಯ ದಿನದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಅವರು, ಕಳಸಾ ಬಂಡೂರಿ ಮಹದಾಯಿ ಕಾಮಗಾರಿ ವಿಳಂಬ ವಿಚಾರದ ಕುರಿತ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದೇನೆ. ಈ ಐತಿಹಾಸಿಕ ಕಾರ್ಯಕ್ರಮದ ಮೂಲಕ ಮುನಿಗಳ ಆಶೀರ್ವಾದ ಪಡೆದಿದ್ದೇನೆ ಎಂದರು.ಇದಕ್ಕೂ ಮೊದಲು ಸಿಎಂ ಪ್ರಮೋದ್ ಸಾವಂತ್ ವರೂರು ಕ್ಷೇತ್ರಕ್ಕೆ ಭೇಟಿ ನೀಡಿ ಜೈನಮುನಿ ಗುಣಧರ ನಂದಿ ಮಹಾರಾಜರ ಆಶೀರ್ವಾದ ಪಡೆದರು. ನಂತರ ದೇಶದ ಅತೀ ಎತ್ತರದ ಸುಮೇರು ಪರ್ವತದ ದರ್ಶನ ಮಾಡಿದರು.
Laxmi News 24×7