Breaking News

ಕುಡಿತದ ಚಟಕ್ಕೆ ದಾಸನಾಗಿ, ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಕೊಲೆ ಮಾಡಿರುವ ಮಗ

Spread the love

ಕಲಬುರಗಿ, : ಕುಡಿತದ ಚಟಕ್ಕೆ ದಾಸನಾಗಿ, ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ರಾಜು ಗಾಯಕವಾಡ (43) ಕೊಲೆಯಾದ ವ್ಯಕ್ತಿ. ರಾಜು ಗಾಯಕವಾಡ ಕಲಬುರಗಿ ಹೊರ ವಲಯ ಶಾಹಬಾದ್ ರಸ್ತೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ರಾಜು, ಮನೆಯಲ್ಲಿ ಮಾತ್ರ ಅಕ್ಷರಶಃ ಖಳನಾಯಕನ ರೀತಿ ಆಗಿದ್ದರು. ವಿಜಯಪುರ (Vijayapura) ಜಿಲ್ಲೆಯ ಇಂಡಿ (Indi) ಮೂಲದ ರಾಜು ಗಾಯಕವಾಡ ಕುಟುಂಬ ಕಳೆದ 20 ವರ್ಷಗಳಿಂದ ಕಲಬುರಗಿಯಲ್ಲಿ ವಾಸವಿದ್ದು, ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ರಾಜು ಕುಡಿತ ಜಾಸ್ತಿ ಆಗಿತ್ತು‌ ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದರು. ಕೊನೆಗೆ ಹಣ ಕಿತ್ತುಕೊಂಡು ಹೋಗಿ ಕುಡಿದು ಬಂದು ಅವರನ್ನೇ ಹೊಡೆಯುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ಮಾರ್ಚ 17 ರಂದು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ.

ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ‌. ಸಾಕ್ಷಿ ನಾಶಪಡಿಸಲು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ರಾಜು ಅವರ ಮೃತದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಶಾಹಬಾದ್ ಮುಖ್ಯರಸ್ತೆಯಲ್ಲಿ ಎಸೆದು, ತಲೆ ಮೇಲೆ ಕಲ್ಲು ಹಾಕಿದ್ದಾರೆ. ಅಪಘಾತ ಎನ್ನೋರೀತಿ ಬಿಂಬಿಸಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ