Breaking News

ಎನ್ ಎಸ್ ಎಸ್ ದಿಂದ ಸೇವಾಮನೋಭಾವ ಅಭಿವೃದ್ದಿ

Spread the love

ಎನ್ ಎಸ್ ಎಸ್ ದಿಂದ ಸೇವಾಮನೋಭಾವ ಅಭಿವೃದ್ದಿ
ಅಥಣಿ : ಎನ್ ಎಸ್ ಎಸ್ ಶಿಬಿರದಿಂದ ಸೇವಾ ಮನೋಭಾವನೆ ಮತ್ತು ಸಹಭಾಗಿತ್ವ ಬೆಳೆಯುತ್ತದೆ ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಶಿಬಿರಗಳು ಉತ್ತಮ ವೇದಿಕೆ ಎಂದು ಜೆ ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ ಅವರು ಹೇಳಿದರು.
ಅವರು ಗುಂಡೇವಾಡಿ ಗ್ರಾಮದಲ್ಲಿ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದದ ಎನ್.ಎಸ್.ಎಸ್ ಘಟಕದ ವತಿಯಿಂದ ದತ್ತುಗ್ರಾಮ ಗುಂಡೇವಾಡಿಯಲ್ಲಿ ಹಮ್ಮಿಕೊಂಡ ಎನ್ ಎಸ್ ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಮಾಜ ಸೇವೆಯನ್ನು ಮಾಡುವ ಕೌಶಲ್ಯವನ್ನು ಉತ್ತಮವಾಗಿಸುತ್ತೆ ಎಂದರು.
ಅನಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅರ್ ಬಿ ದೇಶಪಾಂಡೆ ಅವರು ಗ್ರಾಮ ನೈರ್ಮಲ್ಯ, ಹಳೆ ಸ್ಮಾರಕಗಳ ಸಂರಕ್ಷಣೆ, ಸಾಯಯುವ ಕೃಷಿ ಬಗ್ಗೆ ಮಾಹಿತಿಯನ್ನು ಹಂಚಲು ಎನ್ ಎಸ್ ಎಸ್ ಘಟಕವು ಈ ಗುಂಡೇವಾಡಿ ಗ್ರಾಮವನ್ನು ದತ್ತು ಪಡೆದಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಅನಂತರ ಎಸ್ ಜಿ ಕುಲಕರ್ಣಿ ಅವರು ಮಾತನಾಡಿದರು, ಈ ವೇಳೆ ಶಿವಾನಂದ ಗೊಲಬಾವಿ, ಕಾಡೇಶ ಅಡಹಳ್ಳಿ, ಮಹಾದೇವ ಗುಂಜಿಗಾವಿ, ಬಿಸಲಪ್ಪ ನಾಯಿಕ, ರಾವಸಾಬ ಕಾರಜನಗಿ, ಎನ್.‌ಎಸ್.ಎಸ್ ಅಧಿಕಾರಿಗಳಾದ ಆರ್ ಎ ನಾಯಿಕ, ಆರ್ ಆರ್ ಪವಾರದೇಸಾಯಿ, ಪೂರ್ಣಿಮಾ ಕಾಂಬಳೆ, ಎಸ್ ಎಸ್ ಕಟಗೇರಿ ಸೇರಿದಂತೆ ಸ್ವಯಂ ಸೇವಕರು ಹಾಗೂ ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ