Breaking News

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ

Spread the love

ವಿಜಯಪುರದಲ್ಲಿ ಮೆಚ್ಚಿನ ಅಪ್ಪುವಿನ ಜನ್ಮದಿನಾಚರಣೆ:ಪ್ರಸಾದ ವಿತರಣಾ ಕಾರ್ಯದಲ್ಲಿ ಅಪ್ಪುಗೆ ನಮನ
ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 50ನೇ ವರ್ಷದ ಜನ್ಮದಿನ ಹಿನ್ನಲೆಯಲ್ಲಿ ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿನ ಗಜಾನನ ಮಹಾಮಂಡಳದ ವತಿಯಿಂದ ಜನ್ಮದಿನವನ್ನು ಆಚರಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆಯುವ ಮಹಾಮಂಡಳದಿಂದ ಪ್ರತಿ ಸೋಮವಾರ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಬಡವರಿಗೆ ಅನ್ನ ಪ್ರಸಾದ ವಿತರಿಸಲಾಗುತ್ತದೆ.
ಈ ಸೋಮವಾರ ನಟ ದಿವಂಗತ ಪುನೀತ ರಾಜಕುಮಾರ ಇವರ 50 ನೇ ಜನ್ಮದಿನವನ್ನು ಆಚರಿಸಲಾಯಿತು. ವಿಜಯಪುರ ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಇವರು ಪುನೀತ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನೆಚ್ಚಿನ ನಟನ ಗುಣಗಾನ ಮಾಡಿದರು. ಇದೇ ವೇಳೆ ಕೇಕ್ ಕತ್ತರಿಸಿ ವಿತರಿಸಲಾಯಿತು. ಗ್ರಾಮೀಣ ಡಿವೈಎಸ್ಪಿ ತುಳಜಪ್ಪ ಸುಲ್ಪಿ ಹಾಗೂ ಗುರುಲಿಂಗಪ್ಪ ಅಂಗಡಿ ಇವರನ್ನು ಮಹಾಮಂಡಳದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಲು ಹರನಾಳ, ಈರಣ್ಣ ಪಟ್ಟಣಶೆಟ್ಟಿ, ಜಗದೀಶ‌ ಮುಚ್ಚಂಡಿ, ಬಾಬು ಜಗದಾಳೆ, ಅಖಿಲ ಶೀಲವಂತ, ಸಚಿನ್ ಅಡಕಿ, ಸಂತೋಷ ಕವಲ್ದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ