Breaking News

ಗಾಂಜಾ ವಶ: ಮೂವರ ಬಂಧನ

Spread the love

ಕಾಗವಾಡ: ಪಟ್ಟಣದಿಂದ ಚಿತ್ರದುರ್ಗದ ಕಡೆಗೆ ಹೊರಟಿದ್ದ ಕಾರಿನಲ್ಲಿದ್ದ 3 ಕೆಜಿ 75 ಗ್ರಾಂ ಗಾಂಜಾ, ಕಾರನ್ನು ಇಲ್ಲಿನ ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಟ್ಟಣದ ಚನ್ನಮ್ಮಾ ವೃತ್ತದ ಸಮೀಪ ಸೋಮವಾರ ಪೊಲೀಸರು ಕಾರ್ಯಾಚರಣೆ ನಡೆಸಿದರು.

 

ಚಿತ್ರದುರ್ಗ ನಗರದ ನಿವಾಸಿಗಳಾದ ಫೈರೋಜ್ ನುಸರತ್, ಮಹ್ಮದಕಲಂದರ ಇಮ್ತಿಯಾಜ್‌ಶರೀಫ್, ತಂಜೀಂ ನೌಶಾಧ ಆರೋಪಿಗಳು.

ಪಿಎಸ್‌ಐ ಎಂ.ಬಿ. ಬಿರಾದಾರ, ಪಿಎಸ್‌ಐ (ಅಪರಾಧ) ಆರ್.ಎಚ್. ಬಗಲಿ ನೇತೃತ್ವದಲ್ಲಿ ಕಾಗವಾಡ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ಯಲ್ಲಾಲಿಂಗ ಲಾಳಿ, ಸುರೇಶ ನಂದಿವಾಲೆ, ಬೀರಪ್ಪಾ ವ್ಯಾಪಾರಿ, ಅಶೋಕ ಬಾಳಿಗೇರಿ, ಅಣ್ಣಪ್ಪಾ ಹಡಪದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಉಪತಹಶೀಲ್ದಾರ್ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜೀವಕುಮಾರ ಸದಲಗೆ, ಗ್ರಾಮ ಲೆಕ್ಕಾಧಿಕಾರಿ ಪ್ರಭುಕುಮಾರ ಹೊನರಡ್ಡಿ ಇದ್ದರು


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ