Breaking News

ಮದುವೆಯಾಗುವುದಾಗಿ ನಂಬಿಸಿ ₹ 1.69 ಲಕ್ಷ ವಂಚನೆ

Spread the love

ಧಾರವಾಡ: ಸಂಗೀತಾ ಎಂಬುವರು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆಯಪ್‌ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ₹1.69 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ‘ಸೆನ್‌’ (ಸೈಬರ್‌, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕುಂದಗೋಳದ ಕುಶಾಲ್‌ ಅವರು ದೂರು ನೀಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಂಗೀತಾ ಮತ್ತು ಶಿವರಾಜಕುಮಾರ ವಿರುದ್ಧ ದೂರು ನೀಡಿದ್ಧಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (2008), ವಂಚನೆ (ಐಪಿಸಿ 419 ಹಾಗೂ 420) ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?: ‘2023ರ ಡಿಸೆಂಬರ್‌ 31ರಂದು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆಯಪ್‌ ಮೂಲಕ ಸಂಗೀತಾ ಎಂಬವರು ಪರಿಚಯವಾದರು. ಮದುವೆಯಾಗುವುದಾಗಿ ನಂಬಿಸಿದರು. ಸಹೋದರ ಶಿವರಾಜಕುಮಾರ ಎಂಬವರನ್ನು ಪರಿಚಯಿಸಿದರು. ಸಹೋದರಿಯನ್ನು ಮದುವೆ ಮಾಡಿಕೊಡುವುದಾಗಿ ಆತನೂ ನನ್ನನ್ನು ನಂಬಿಸಿದರು. ಸಲುಗೆಯಿಂದ ಮಾತನಾಡಿದರು. ನಂತರ ದೊಡ್ಡಮ್ಮಗೆ ಹೃದಯ ಶಸ್ತ್ರಚಿಕಿತ್ಸೆಗೆ ಹಣ ಬೇಕಾಗಿದೆ’ ಎಂದು ಹೇಳಿದರು.

‘ಹಂತಹಂತವಾಗಿ 2024 ಮೇ 31ರವರೆಗೆ ಫೋನ್‌ ಪೇ ಮೂಲಕ ₹ 1.69 ಲಕ್ಷವನ್ನು ನನ್ನಿಂದ ವರ್ಗಾಯಿಸಿಕೊಂಡು ಮೋಸ ಮಾಡಿದ್ಧಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಹಣ ವರ್ಗಾವಣೆ, ಪಾವತಿಸಿರುವ ವಿವರ ಪರಿಶೀಲಿಸಲಾಗುವುದು. ವಂಚಕರ ಜಾಡು ಪತ್ತೆ ನಿಟ್ಟಿನಲ್ಲಿ ಬಲೆ ಬೀಸಲಾಗಿದೆ’ ಎಂದು ಸೆನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ