Breaking News

ವಿಶ್ವಕಪ್​ ಕ್ರಿಕೆಟ್​: ಕಮರಿದ ಶ್ರೀಲಂಕಾ ಸೆಮೀಸ್​ ಕನಸು.. ಬಾಂಗ್ಲಾಕ್ಕೆ 3 ವಿಕೆಟ್​ ಜಯ​

Spread the love

ನವದೆಹಲಿ: ಲಂಕಾಗೆ ದೆಹಲಿಯ ಫಿರೋಜ್​ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಅದೃಷ್ಟವಶಾತ್ ಸೆಮೀಸ್​ಗೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಅವಕಾಶ ಇತ್ತು.

ಆದರೆ, ಬಾಂಗ್ಲಾ ಟೈಗರ್ಸ್​ ಸಿಂಹಳೀಯರ ಈ ಕನಸನ್ನು ಭಗ್ನ ಮಾಡಿದ್ದಾರೆ. ಶ್ರೀಲಂಕಾ ನೀಡಿದ್ದ 279 ರನ್​ಗಳ ಗುರಿಯನ್ನು ಬಾಂಗ್ಲಾದೇಶ 41.1 ಓವರ್​ಗೆ 3 ವಿಕೆಟ್​ ಉಳಿಸಿಕೊಂಡು ಜಯ ದಾಖಲಿಸಿದೆ.

ವಿಶ್ವಕಪ್​​ನಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಶ್ರೀಲಂಕಾವನ್ನು ಮಣಿಸಿ ಅವರನ್ನು ವಿಶ್ವಕಪ್​ ಸೆಮೀಸ್​ ರೇಸ್​ನಿಂದ ಹೊರಕ್ಕೆ ತಂದಿದೆ. ಇದರಿಂದ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಅಲಂಕರಿಸಿದ್ದು, 2025ರ ಚಾಂಪಿಯನ್ಸ್​ ​ಟ್ರೋಫಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

 

 

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಶ್ರೀಲಂಕಾ ಬಾಂಗ್ಲಾ ಬೌಲರ್​ಗಳ ಮುಂದೆ ಬ್ಯಾಟಿಂಗ್​ ಪಿಚ್​ನಲ್ಲಿ ಕಷ್ಟಪಟ್ಟು ಆಡಿತ್ತು. ಚರಿತ್ ಅಸಲಂಕಾ ಶತಕ ಮತ್ತು ಪಾತುಮ್ ನಿಸ್ಸಾಂಕ (41), ಸದೀರ ಸಮರವಿಕ್ರಮ (41) ಇನ್ನಿಂಗ್ಸ್​ ಬಲದಿಂದ ತಂಡ 49.3 ಓವರ್​ಗೆ ಆಲ್​ಔಟ್​ಗೆ ಶರಣಾಗಿ 280 ರನ್​ಗಳ ಗುರಿಯನ್ನು ನೀಡಿತ್ತು. ಬೆನ್ನಟ್ಟಿದ ಬಾಂಗ್ಲಾದೇಶ ಮೊದಲ ವಿಕೆಟ್​ನ್ನು ಬೇಗ ಕಳೆದುಕೊಂಡರೂ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ ಇನ್ನಿಂಗ್ಸ್​ ಬಲದಿಂದ 3 ವಿಕೆಟ್​ಗಳ ಜಯ ದಾಖಲಿಸಿತ್ತು.

ತಂಜಿದ್ ಹಸನ್ ದಿಲ್ಶನ್ ಮಧುಶಂಕ ಬೌಲಿಂಗ್​ನಲ್ಲಿ ವಿಕೆಟ್​ ಕೊಟ್ಟರು. ಇದರಿಂದ 17 ರನ್​ಗೆ ಬಾಂಗ್ಲಾ ತನ್ನ ಮೊದಲ ವಿಕೆಟ್​ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (23) ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ವಿಫಲರಾದರು. ಆದರೆ, ಮೂರನೇ ವಿಕೆಟ್​ಗೆ ಒಂದಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ 169 ರನ್​ ಜೊತೆಯಾಟ ನೀಡಿದ್ದರು. ಇವರ ಪಾಲುದಾರಿಕೆಯಿಂದ ತಂಡ ಗೆಲುವು ಹೆಚ್ಚು ಕಡಿಮೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂತು. ​

ಇಬ್ಬರೂ ಆಟಗಾರರು ಶತಕದ ಅಂಚಿನಲ್ಲಿ ಎಡವಿರು. 65 ಬಾಲ್​ ಆಡಿ 12 ಬೌಂಡರಿ ಮತ್ತು 2 ಸಿಕ್ಸ್​ನಿಂದ 85 ರನ್​ ಗಳಿಸಿ ನಾಯಕ ಶಕೀಬ್​ ಅಲ್ ಹಸನ್​ ಔಟ್ ಆದರು. 15 ರನ್​ನಿಂದ ಹಸನ್​ ಶತಕ ವಂಚಿತರಾದರು, ಅವರಂತೆ ಶಾಂಟೊ ಸಹ 10 ರನ್​ನಿಂದ ಶತಕ ಮಾಡುವ ಅವಕಾಶ ಕಳೆದುಕೊಂಡರು. ನಜ್ಮುಲ್ ಹೊಸೈನ್ ಶಾಂಟೊ ಇನ್ನಿಂಗ್ಸ್​ನಲ್ಲಿ 101 ಬಾಲ್ ಆಡಿ 12 ಬೌಂಡರಿಯಿಂದ 90 ರನ್​ ಗಳಿಸಿ ವಿಕೆಟ್​ ಕೊಟ್ಟರು.

 

 

ಈ ಎರಡು ವಿಕೆಟ್​ ನಂತರ ಮುಶ್ಫಿಕರ್ ರಹೀಮ್ (10), ಮಹಮ್ಮದುಲ್ಲಾ (22), ಮೆಹಿದಿ ಹಸನ್ ಮಿರಾಜ್ (3) ಔಟ್​ ಆದರೆ, ತೌಹಿದ್ ಹೃದಯೊಯ್ (15*) ಮತ್ತು ತನ್ಜಿಮ್ ಹಸನ್ ಸಾಕಿಬ್ (5*) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯದರು. ಇದರಿಂದ 41.1 ಓವರ್​ಗೆ 7 ವಿಕೆಟ್​ ಕಳೆದುಕೊಂಡು ಬಾಂಗ್ಲಾ 282 ರನ್​ ಗಳಿಸಿ ಪಂದ್ಯ ಗೆದ್ದುಕೊಂಡಿತು. ಲಂಕಾ ಪರ ದಿಲ್ಶನ್ ಮಧುಶಂಕ 3, ಏಂಜೆಲೊ ಮ್ಯಾಥ್ಯೂಸ್ ಮತ್ತು ಮಹೇಶ್ ತೀಕ್ಷ್ಣ ತಲಾ ಎರಡು ವಿಕೆಟ್​ ಪಡೆದರು.


Spread the love

About Laxminews 24x7

Check Also

ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ

Spread the love ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಜಾಗೃತ ಫಾತಿಮಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ