Breaking News

ಹೊರ ರಾಜ್ಯದ ಪುಂಡರಿಂದ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹಲ್ಲೆ……..

Spread the love

ವಿಜಯಪುರ: ಕೊರೊನಾ ವಾರೊಯರ್ಸ್‍ಗಳಂತೆಯೇ ಕೆಲಸ ಮಾಡುತ್ತಿರುವ ಕ್ವಾರಂಟೈನ್ ಕೇಂದ್ರದ ಅಡುಗೆ ಕೆಲಸದವನ ಮೇಲೆ ಹೊರ ರಾಜ್ಯದ ಪುಂಡರು ಹಲ್ಲೆ ಮಾಡಿದ್ದಾರೆ.

ಜಿಲ್ಲೆಯ ಸಿಂದಗಿಪಟ್ಟಣದ ಸರ್ಕಾರಿ ಶಾಲೆ, ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಅಡುಗೆ ಕೆಲಸ ಮಾಡುತ್ತಿದ್ದ ಮೈಬೂಬಸಾಬ ಬನ್ನೆಟ್ಟಿ(60) ಅವರ ಮೇಲೆ ಯುವಕರಾದ ದೇವರನಾವದಗಿಯ ಅರುಣ ರಾಠೋಡ್ ಹಾಗೂ ರಾಹುಲ್ ರಾಠೋಡ್ ಹಲ್ಲೆ ನಡೆಸಿದ್ದಾರೆ. ಯುವಕರಿಬ್ಬರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೊರೊನಾ ವೈರಸ್ ಹಿನ್ನೆಲೆ ಹೊರ ರಾಜ್ಯದಿಂದ ಬಂದಿದ್ದ ಕೂಲಿ ಕಾರ್ಮಿಕರನ್ನು ಸಂಸ್ಥಾ ಕ್ವಾರಂಟೈನ್‍ನಲ್ಲಿ ಇಡಲಾಗಿತ್ತು. ಈ ವೇಳೆ ಯುವಕರು ಪುಂಡಾಟ ಮೆರೆದಿದ್ದು, ನಮಗೆ ಮೊದಲು ಊಟ ಕೊಡು, ಸರತಿ ಸಾಲಿನಲ್ಲಿ ನಿಲ್ಲು ಎಂದು ನಮಗೇ ಹೇಳ್ತೀಯಾ ಎಂದು ಸಿಮೆಂಟ್ ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡಿರುವ ಮೈಬೂಬ ಸಾಬರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಸಾಲದ ಹಣಕ್ಕಾಗಿ ವ್ಯಕ್ತಿಯನ್ನ ಒತ್ತೆ ಇಟ್ಟುಕೊಂಡ ಸಾಲಗಾರ

Spread the loveವಿಜಯಪುರ, ಜೂನ್​​ 27: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಸಾಲದ (Debt) ಹಣ (money) ವಸೂಲಿ ಮಾಡುವ ನೆಪದಲ್ಲಿ ವ್ಯಕ್ತಿಯನ್ನು ಒತ್ತೆಯಾಗಿಟ್ಟುಕೊಂಡಿರೋ ಗಂಭೀರ ಆರೋಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ