Breaking News

ನೀರಿನ ಕಾಲುವೆಗೆ ಕೆಮಿಕಲ್ ಮಿಶ್ರಿತ ಆಯಸಿಡ್​ ಕಪ್ಪು ಬಣ್ಣಕ್ಕೆ ತಿರುಗಿದ‌ ಬೆಳೆ

Spread the love

ದಾವಣಗೆರೆ : ಅವರು ಮೂಲತಃ ಆಂಧ್ರದಿಂದ ಆಗಮಿಸಿ ದಾವಣಗೆರೆಯ ಸುತ್ತಮುತ್ತ ಕೃಷಿ ಚಟುವಟಿಕೆ ಮಾಡ್ತಾ ಜೀವನ ಸಾಗಿಸುತ್ತಿದ್ದವರು. ಯಾರೋ ದುರುಳರು ಬಂದು ಆ ರೈತನ ಹೊಲಕ್ಕೆ ನೀರು ಕಟ್ಟುವ ಕಾಲುವೆಯ ನೀರಿಗೆ ಟ್ಯಾಂಕರ್ ಮೂಲಕ ರಾಸಾಯನಿಕ ತ್ಯಾಜ್ಯ (ಕೆಮಿಕಲ್) ಸುರಿದ ಬೆನ್ನಲ್ಲೇ ಅವರ ಬದುಕು ಬರ್ಬಾದ್ ಆಗಿದೆ. ನೀರಿನಲ್ಲಿ ರಾಸಾಯನಿಕ ಹರಿದುಬಂದು ಹೊಲ ಸೇರಿದ್ದರಿಂದ‌ ಇಡೀ ಭತ್ತದ ಪೈರು ಕಪ್ಪು ಬಣ್ಣಕ್ಕೆ ತಿರುಗಿ ಸುಟ್ಟಿರುವ ರೀತಿ ಭಾಸವಾಗುತ್ತಿದೆ. ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ನೆಲಕಚ್ಚಿದ್ದರಿಂದ‌ ಅನ್ನದಾತ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ.

ದಾವಣಗೆರೆಯ ಹೊರವಲಯದ ಬಾತಿ ಕೆರೆ ಕಾಲುವೆಯ ಕೂಗಳತೆಯಲ್ಲಿ ಭತ್ತ ಬೆಳೆಯುವ ರೈತನ ಬದುಕು ಕೆಮಿಕಲ್ ರಾಸಾಯನಿಕದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ಮಹಾಮಾರಿ ಕೆಮಿಕಲ್​ನಿಂದಾಗಿ ರೈತ ಬೆಳೆದಿದ್ದ ಭತ್ತದ ಬೆಳೆ ಸುಟ್ಟು ಹೋಗುತ್ತಿದೆ. ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ರೈತ ವಾಸು ಎನ್ನುವರು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದು, ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದೆ.

ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನೆಲೆ ಬೆಳೆಯುವ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಈ ಜಮೀನಿಗೆ ಹಾಯಿಸುವ ನೀರು ಭದ್ರ ಚಾನಲ್​ನಿಂದ ಬರುತ್ತಿದ್ದು, ಆ ಕೆನಾಲ್​ಗೆ ಆಸಿಡ್ ಮಿಶ್ರಿತ ಕೆಮಿಕಲ್ ಅನ್ನು ಟ್ಯಾಂಕರ್ ಮೂಲಕ ದುಷ್ಕರ್ಮಿಗಳು ರಾತ್ರೋರಾತ್ರಿ ಸುರಿದಿದ್ದರಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಇದರಿಂದ ಭದ್ರ ಕೆನಾಲ್​ ನೀರು ಸಂಪೂರ್ಣ ಕಲುಷಿತವಾಗಿದೆ‌. ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ‌.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ