Breaking News

Yearly Archives: 2026

ಶಿಶುಗೀತೆ ರಚಿಸಿದ 6ನೇ ತರಗತಿ ವಿದ್ಯಾರ್ಥಿನಿ

ಬೆಳಗಾವಿ : ನಗರದ ಬಿರ್ಲಾ ಇಂಟರ್‌ನ್ಯಾಷನಲ್ ಸ್ಕೂಲ್‌ನ 6ನೇ ತರಗತಿ ವಿದ್ಯಾರ್ಥಿನಿ 12 ವರ್ಷದ ಲಾವಣ್ಯ ಪೃಥ್ವಿರಾಜ ಕಮ್ಮಾರ ಭಾರತೀಯ ಸಂಸ್ಕೃತಿ, ವೀರ ನಾಯಕರು, ಮಹಿಳೆಯರು ಹಾಗೂ ವಿವಿಧ ಆದರ್ಶ ವ್ಯಕ್ತಿತ್ವಗಳನ್ನು ಆಧರಿಸಿ ಶಿಶುಗೀತೆ(ರೇಮ್ಸ್)ಗಳನ್ನು ರಚಿಸಿದ್ದು ’ದಿ ಶ್ಯಾಡೋ ಆಫ್ ಇನೋಸೆನ್ಸ್ ಆ್ಯಂಡ್ ಇಮ್ಯಾಜಿನೇಷನ್’ ಎಂಬ ಶೀರ್ಷಿಕೆಯ ಕೃತಿ ಬಿಡುಗಡೆಗೆ ಸಜ್ಜಾಗಿದೆ. ತನ್ನ ಚೊಚ್ಚಲ ಕವನ ಸಂಕಲನ ಸಾಹಿತ್ಯ ಲೋಕಕ್ಕೆ ಪದಾರ್ಪಣೆಗೊಳ್ಳುತ್ತಿರುವ ಹಿನ್ನೆಲೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತನ್ನ ಕೃತಿಯನ್ನು ಪ್ರದರ್ಶಿಸಿ ಮಾತನಾಡಿದ …

Read More »

ನರ್ಸಿಂಗ್ ಎಂದರೆ ಉದ್ಯೋಗವಲ್ಲ ಅದು ಸೇವಾ ಧರ್ಮ

ಬೆಳಗಾವಿ :  ನರ್ಸಿಂಗ್ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಅದು ಒಂದು ಸೇವಾ ಧರ್ಮ.  ನರ್ಸ್ ಗಳು ಹೃದಯ ಶ್ರೀಮಂತರು. ಅವರ ಒಂದು ನಗು, ಒಂದು ಧೈರ್ಯದ ಮಾತು, ಒಂದು ಮಮತೆಯ ಸ್ಪರ್ಶ ರೋಗಿಗೆ ಅರ್ಧ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿಯ ಬಿಮ್ಸ್ (BIMS) ಕಟ್ಟಡದ ಹೊಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನರ್ಸಿಂಗ್ ಶಾಲೆಯ 109ನೇ ಬ್ಯಾಚ್ ವಿದ್ಯಾರ್ಥಿಗಳ …

Read More »

ಶ್ರೀರಂಗಪಟ್ಟಣ ತಾಲೂಕಿನ ಗ್ರಾಪಂನಲ್ಲಿ 2 ಕೋಟಿಗೂ ಅಧಿಕ ಅಕ್ರಮ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ 21 ಗ್ರಾಮ ಪಂಚಾಯಿತಿಗಳು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣದಲ್ಲಿ 2,83,34,944 ರೂ. ಹಣವನ್ನು ಗ್ರಾಮ ಪಂಚಾಯಿತಿ ನಿಧಿಗೆ ಜಮೆ ಮಾಡದೇ ಅಧಿಕಾರಿಗಳೇ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಲೋಕಾಯುಕ್ತ ತನಿಖೆಯಿಂದ ಬಹಿರಂಗೊಂಡಿದೆ. 1994-95ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಸ್ಥಳೀಯ ಲೆಕ್ಕ ಪರಿಶೋಧನಾ ವರದಿಗಳ ಪ್ರಕಾರ ಗ್ರಾಮ ಪಂಚಾಯಿತಿಗಳು ಜನರಿಂದ ಪಡೆದ ತೆರಿಗೆ ಹಣವನ್ನು ಗ್ರಾಮ ಪಂಚಾಯಿತಿ ನಿಧಿಗೆ ಜಮಾ ಮಾಡದಿರುವುದು ಕಂಡುಬಂದಿದೆ. ಈ ಹಣವನ್ನು ಅಧಿಕಾರಿಗಳೇ ದುರ್ಬಳಕೆ …

Read More »

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡೋದ್ರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪವರ್ ಫೈಟ್, ದಾವಣಗೆರೆ ಬೈ ಎಲೆಕ್ಷನ್ ಜಟಾಪಟಿ ನಡುವೆ ಹಿರಿಯ ಶಾಸಕರು ಮಿನಿಸ್ಟರ್ ಗಾದಿಗಾಗಿ ಡೆಲ್ಲಿ ಪರೇಡ್ ಮಾಡ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ಬೆಂಗಳೂರಿನಿಂದ ದೆಹಲಿಗೆ ತೆರಳಿದ್ರು. ಸುಮಾರು 30 ಜನ ಕಾಂಗ್ರೆಸ್ ಹಿರಿಯ ಶಾಸಕರು ದೆಹಲಿ ವಿಮಾನ ಹತ್ತಿದ್ದಾರೆ. …

Read More »

ಸಮಾನತೆ ಇರಬಾರದು ಅನ್ನೋ ಕಾರಣಕ್ಕೆ ಸಂವಿಧಾನ ಮುಗಿಸುವುದು RSS, ಬಿಜೆಪಿಯ ಮುಖ್ಯ ಉದ್ದೇಶ: ರಾಗಾ ಕಿಡಿ

ನವದೆಹಲಿ: ಭಾರತದಲ್ಲಿ ಸಮಾನತೆ ಇರಬಾರದು ಎಂಬ ಕಾರಣಕ್ಕೆ ಸಂವಿಧಾನವನ್ನು ಮುಗಿಸುವುದೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಮುಖ್ಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಏಪ್ರಿಲ್ 14ರಂದು ನಡೆಯಲಿರುವ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂಬೇಡ್ಕರ್ ಹಾದಿಯಲ್ಲಿ ನಡಿಗೆ, ಸಂವಿಧಾನಕ್ಕಾಗಿ ನಡಿಗೆ ಮ್ಯಾರಾಥಾನ್ ಚಾಲನೆ ನೀಡಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಸಂವಿಧಾನ ಭಾರತದ ಅಡಿಪಾಯವಾಗಿದೆ. ಸಂವಿಧಾನವಿಲ್ಲದಿದ್ದರೆ ಇಂದು ನಾವು ಭಾರತ ಎಂದು …

Read More »

ಬೆಳಗಾವಿ ಉದ್ಯಮಿಗೆ ಡಿಜಿಟಲ್‌ ಅರೆಸ್ಟ್‌ – 15 ಕೋಟಿ ವಂಚಿಸಿದ್ದ ಇಬ್ಬರು ಅರೆಸ್ಟ್‌

ಬೆಳಗಾವಿ: ಇಲ್ಲಿನ ಉದ್ಯಮಿಯೊಬ್ಬರನ್ನ ಡಿಜಿಟಲ್ ಅರೆಸ್ಟ್ ಮಾಡಿ 15.45 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರನ್ನ ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರಿಗೆ ಫೆಬ್ರವರಿ 7 ರಿಂದ ಮಾರ್ಚ್ 9 ರ ವರೆಗೆ ಡಿಜಿಟಲ್ ಅರೆಸ್ಟ್ ಮಾಡಲಾಗಿತ್ತು. ಈ ಅವಧಿಯಲ್ಲಿ, ಹಂತ ಹಂತವಾಗಿ ಬರೋಬ್ಬರಿ 15.45 ಕೋಟಿ ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಯಿಂದ ವಂಚಕರು ವರ್ಗಾಯಿಸಿಕೊಂಡಿದ್ದರು. ಈ ಕುರಿತು ಬೆಳಗಾವಿ ಸೈಬರ್ ಕ್ರೈಮ್ ಠಾಣೆಯಲ್ಲಿ …

Read More »

ಬೆಳಗಾವಿಯಲ್ಲಿ ಕ್ರಾಂತಿಸೂರ್ಯ ಮಹಾತ್ಮ ಫುಲೆ ಅವರ 200ನೇ ಜಯಂತಿ ಸಂಭ್ರಮ: ಸಮಾನತೆಯ ಸಂದೇಶ ಸಾರಿದ ಗಣ್ಯರು

ಬೆಳಗಾವಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಇಂದು ಮಹಾತ್ಮ ಜ್ಯೋತಿರಾವ್ ಫುಲೆ ಅವರ 200ನೇ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು. ಸಾಮಾಜಿಕ ಸಮಾನತೆ ಮತ್ತು ಸ್ತ್ರೀ ಶಿಕ್ಷಣದ ಹರಿಕಾರನಿಗೆ ನಗರದ ಗಣ್ಯರು ಪುಷ್ಪ ನಮನ ಸಲ್ಲಿಸಿ, ಅವರ ವಿಚಾರಧಾರೆಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಾಯುಕ್ತರಾದ ಉದಯಕುಮಾರ್ ತಳವಾರ್ ಅವರು ಮಹಾತ್ಮ ಫುಲೆ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂದು ಸಾವಿತ್ರಿಬಾಯಿ …

Read More »

ಬೆಳಗಾವಿ: ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅಕ್ರಮದ ಆರೋಪ; ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಕರ ಮತದಾರರ ಪಟ್ಟಿ ಮತ್ತು ಚುನಾವಣಾ ಅಧಿಕಾರಿ ಲಭ್ಯವಿಲ್ಲದ ಕಾರಣ ಚುನಾವಣೆಗೆ ತಡೆ ನೀಡಬೇಕು ಎಂದು ಶಿಕ್ಷಕರು ಶನಿವಾರ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದರು. ಅವಧಿ ಮತದಾರರ ಯಾದಿಯನ್ನು ಸಾಮಾನ್ಯ ಶಿಕ್ಷರಾದ ನಮಗೆ ಏ.14ರವರೆಗೂ ಒದಗಿಸಿರುವುದಿಲ್ಲ ಹಾಗೂ ಚುನಾವಣಾ ದಿನಾಂಕ ಪ್ರಕಟವಾದರೂ ಕೂಡ ಸಾಮಾನ್ಯ ಶಿಕ್ಷಕರಿಗೆ ತಿಳಿಸದೆಯೇ ಚುನಾವಣೆಯ ದಿನಾಂಕ 19 ರಂದು ನಡೆಸುವುದಾಗಿ ಪ್ರಕಟಿಸಿ ಗೊಂದಲ ಸೃಷ್ಟಿ ಮಾಡಿದ್ದಾರೆ …

Read More »

ಬೆಳಗಾವಿ:ಬಾಯ್ ಪ್ರೇಂಡ್ ಜೊತೆಗೆ ಸೇರಿ ಪತಿಯ ಭೀಕರ ಹತ್ಯೆ ಮಾಡಿಸಿದ ಪತ್ನಿ

ಬೆಳಗಾವಿಯ ಟಿಳಕವಾಡಿ ಪೊಲೀಸರಿಂದ ರೋಚಕ ಪ್ರಕರಣ ಬಯಲು ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ ಸೂಪ್ಪಣ್ಣವರ (40) ಕೊಲೆ ಮೂರು ಸ್ಟ್ರಿಪ್ ನಿದ್ರೆ ಮಾತ್ರೆ ತಂಪು ಪಾನೀಯದಲ್ಲಿ ಹಾಕಿದ್ದ ಹಂತಕ ಕುಸಿದು ಬೀಳ್ತಿದ್ದಂತೆ ತುಂಬಿದ ಸಿಲಿಂಡರ್ ಥೆರಪಿಸ್ಟ್ ತಲೆ ಮೇಲೆ ಹಾಕಿ ಕೊಲೆ ಪ್ರಕರಣದಡಿ ಅವಿನಾಶ ಪತ್ನಿ ಲಕ್ಷ್ಮಿ ಸೂಪಣ್ಣವರ, ಬಾಯ್ ಪ್ರೇಂಡ್ ಕೈಲಾಶ್ ಅಚ್ಚಿತಾಲ್ ಬಂಧನ ಟಿಳಕವಾಡಿ ಪೊಲೀಸರಿಂದ ಇಬ್ಬರನ್ನು ಬಂಧಿಸಿ ಜೈಲಿಗೆ ರವಾನೆ ಥೆರಪಿಸ್ಟ್ ಕೊಲೆಗೆ ಕಾರಣವಾಯಿತು …

Read More »

ಬೆಳಗಾವಿ ಭಕ್ತರಿಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಭಾಗ್ಯ: ಏಪ್ರಿಲ್ 12 ರಿಂದ ಮೂರು ದಿನ ಸಂಚಾರ

ಏ.12 ರಿಂದ 14ರವರೆಗೆ ಬೆಳಗಾವಿ ನಗರದಲ್ಲಿ ಸೋಮನಾಥ ಜ್ಯೋರ್ತಿಲಿಂಗ ಭಕ್ತರಿಗೆ ದರ್ಶನ ಕೊಡಲಿದೆ ಎಂದು ರವಿ ಶಂಕರ ಗುರೂಜಿ ಮಠದ ಮಹೇಶ್ ಕೇರಕರ್ ಹೇಳಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೂರಾರು ವರ್ಷಗಳ ಹಿಂದಿನ ಧಾರ್ಮಿಕ ಜ್ಯೋರ್ತಿಲಿಂಗ ಬೆಳಗಾವಿಯ ಭಕ್ತರಿಗೆ ದರ್ಶನ ಕೊಡಲು ಮೂರು ದಿನಗಳ ಕಾಲ ಸಂಚರಿಸಲಿದೆ. ಶಂಕರಾಚಾರ್ಯರು ರವಿ ಶಂಕರ ಗುರೂಜಿ ಅವರಿಗೆ ಜ್ಯೋರ್ತಿಲಿಂಗ ಸೇರಬೇಕು ಎಂಬ ಉಲ್ಲೇಖ ಮಾಡಿದ ಹಿನ್ನೆಲೆಯಲ್ಲಿ ಅರು ಇವರ ಬಳಿ ಬಂದಿದೆ …

Read More »