Breaking News

Yearly Archives: 2026

ಜೂ.1 ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ – ಮುಖ್ಯಮಂತ್ರಿಗಳಿಂದ ಚಾಲನೆ

ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು ಹಾಗೂ ಡಿಡಿಪಿಐ, ಡಿಡಿಪಿಯು, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು. ಮುಂಬರುವ ಜೂ.1 ರಂದು ರಾಜ್ಯಾದ್ಯಂತ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಿದ್ದಾರೆ ಎಂದು …

Read More »

ತಮಿಳುನಾಡು ನೂತನ ಸಚಿವರಿಗೆ ಖಾತೆ ಹಂಚಿಕೆ – ಹಣಕಾಸು ಬಿಟ್ಟು 16 ಇಲಾಖೆ ತನ್ನಲ್ಲೇ ಇಟ್ಟುಕೊಂಡ ದಳಪತಿ

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿ. ಜೋಸೆಫ್ ವಿಜಯ್  ಅವರಿಂದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಮೇ 10 ರಂದು ಮುಖ್ಯಮಂತ್ರಿಗಳೊಂದಿಗೆ ಪ್ರಮಾಣ ಸ್ವೀಕರಿಸಿದ್ದ ಸಚಿವರುಗಳಿಗೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಖಾತೆಗಳ ಹಂಚಿಕೆಗೆ ಅನುಮೋದನೆ ನೀಡಿದ್ದು, ಈ ಕುರಿತು ಲೋಕ ಭವನದಿಂದ ಮೇ 16 ರಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಆಡಳಿತದ ಮೇಲೆ ಬಿಗಿ …

Read More »

ಮುಷ್ಕರಕ್ಕೂ ಮುನ್ನವೇ BMTC ನೌಕರರಿಗೆ ಗುಡ್‌ನ್ಯೂಸ್‌ – 11 ತಿಂಗಳ ಹಿಂಬಾಕಿ ವೇತನ ರಿಲೀಸ್‌

ಬೆಂಗಳೂರು: ಸರ್ಕಾರ ಮತ್ತು ಸಾರಿಗೆ ನೌಕರರ ವೇತನ  ಹೆಚ್ಚಳದ ವಿಚಾರದ ಫೈಟ್ ಮುಂದುವರೆದಿದ್ದು, ಮೇ 20 ರಿಂದ ಅನಿರ್ಧಿಷ್ಟಾವದಿ ಮುಷ್ಕರದ ತಯಾರಿ ಜೊತೆಗೆ ಸರ್ಕಾರದ ಸಾಧನ ಸಮಾವೇಶಕ್ಕೂ ಹೋರಾಟದ ಬಿಸಿ ಮುಟ್ಟಿಸಲು ನೌಕರರು ಮುಂದಾಗಿದ್ದಾರೆ. ಈ ಹೊತ್ತಿನಲ್ಲೇ ಸಾರಿಗೆ ನೌಕರರಿಗೆ ಬಿಎಂಟಿಸಿ  ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. 11 ತಿಂಗಳ ಹಿಂಬಾಕಿ (ಅರಿಯರ್ಸ್‌) ವೇತನವನ್ನು ಬಿಎಂಟಿಸಿ ನೌಕರರ ಖಾತೆಗೆ ಸಾರಿಗೆ ಇಲಾಖೆ ಜಮೆ ಮಾಡಿದೆ. ರಾಜ್ಯ ಸರ್ಕಾರ 4 ನಿಗಮಗಳ ಸಾರಿಗೆ …

Read More »

0 ಲಕ್ಷಕ್ಕೆ NEET ಪ್ರಶ್ನೆಪತ್ರಿಕೆ ಖರೀದಿಸಿದ್ದ ತಂದೆ – ಮಗ ಗಳಿಸಿದ್ದು 720ಕ್ಕೆ 107 ಅಂಕ

ಜೈಪುರ: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್  ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮತ್ತೊಂದು ರೋಚಕ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಹೊಣೆ ಹೊತ್ತಿರುವ ಕೇಂದ್ರೀಯ ತನಿಖಾ ದಳ ಒಬ್ಬೊಬ್ಬರೇ ವಂಚಕರನ್ನ ಸಮಾಜದ ಮುಂದೆ ತರುತ್ತಿದೆ.‌ ಈ ಮಧ್ಯೆ ಬಂಧಿತ ಸಹೋದರರಾದ ದಿನೇಶ್ ಬಿವಾಲ್‌, ಮಂಗಿಲಾಲ್ ಬಿವಾಲ್ ಮತ್ತು ಮಂಗಿಲಾಲ್ ಅವರ ಹಿರಿಯ ಮಗ ವಿಕಾಸ್ ಮೂವರು ಪ್ರಶ್ನೆಪತ್ರಿಕೆಗಳನ್ನ ಪಡೆದುಕೊಂಡಿದ್ದಲ್ಲದೇ, ತರಬೇತಿ ಕೇಂದ್ರಗಳಿಗೆ ಪೂರೈಸಿದ್ದರು ಎಂಬುದು ಗೊತ್ತಾಗಿದೆ. ಸದ್ಯ ಮಂಗಿಲಾಲ್‌, ಆರೋಪಿ ದಿನೇಶ್‌ …

Read More »

ಬಡ ಹಿಂದೂ ಮಹಿಳೆ ಪರ ನೆರವು ಕೇಳಿದ ಮುಸ್ಲಿಂ ಮಹಿಳೆಯರು – ಉಡುಪಿಯಲ್ಲಿ ಅಪರೂಪದ ಘಟನೆ

ಉಡುಪಿ: 35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದಾಗಿ ಮನೆ ಕಟ್ಟಲಾಗದೇ ದಿಕ್ಕೆಟ್ಟು ಹೋಗಿದ್ದ ಹಿಂದೂ ವಿಧವಾ ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ದನಿ ಎತ್ತಿದ ಅಪರೂಪದ ಪ್ರಸಂಗ ಉಡುಪಿಯಲ್ಲಿ ನಡೆದಿದೆ. ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನ ಭೇಟಿಯಾಗಿ ಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದೂ – ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ. ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ …

Read More »

ಕೋಲ್ಕತ್ತಾ ʻಅಲೆʼನ್‌ ಆರ್ಭಟಕ್ಕೆ ಗುಜರಾತ್‌ ಥಂಡಾ – KKR ಗೆ 29 ರನ್‌ಗಳ ಅಮೋಘ ಜಯ

ಕೋಲ್ಕತ್ತಾ: ಫಿನ್‌ ಅಲೆನ್‌, ಅಂಗ್‌ಕ್ರಿಶ್ ರಘುವಂಶಿ ಹಾಗೂ ಕ್ಯಾಮರೂನ್‌ ಗ್ರೀನ್‌ ಬ್ಯಾಟಿಂಗ್‌ ಆರ್ಭಟ, ಬೌಲರ್‌ಗಳ ಕೈಚಳಕದಿಂದ ಕೋಲ್ಕತ್ತಾ ನೈಟ್‌ರೈಡರ್ಸ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ 29 ರನ್‌ಗಳ ಅಮೋಘ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟಕ್ಕೆ 247 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಬೃಹತ್‌ …

Read More »

ಶಿವಂ ಹಗರಣ ಸಿಐಡಿಗೆ: ಶಿವಾನಂದ ನೀಲಣ್ಣವರ್ ಸಂಗ್ರಹಿಸಿದ ಹಣವೆಷ್ಟು? ಜಿಲ್ಲಾಧಿಕಾರಿ ಹೇಳಿದ್ದೇನು?

ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ಎಸ್ ನೀಲಣ್ಣವರ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಕಳೆದ 24 ಗಂಟೆಯಲ್ಲಿ ಬೆಳಗಾವಿ ಎಸಿ ನೇತೃತ್ವದ ಅಧಿಕಾರಿಗಳ ತಂಡ ಶಿವಾನಂದ ನೀಲಣ್ಣವರ್ ಸಾಮ್ರಾಜ್ಯವನ್ನು ಜಾಲಾಡಿದ್ದು ಇವತ್ತು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಜಂಟಿ ಸುದ್ದಿಗೋಷ್ಠಿ ಮಾಡಿ ಈವರೆಗಿನ ತನಿಖೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಆದಾಯದ ಬಗ್ಗೆ ನಿನ್ನೆ ಸಂಪೂರ್ಣವಾಗಿ ಬೆಳಗಾವಿ ಎಸಿ ಶ್ರವಣ್ಕುಮಾರ್ ಅವರ ನೇತೃತ್ವದಲ್ಲಿ …

Read More »

3ನೇ ಮಗು ಹುಟ್ಟಿದ್ರೆ 30,000, 4ನೇ ಮಗು ಹುಟ್ಟಿದ್ರೆ 40,000 ರೂ. ಗಿಫ್ಟ್‌ – ಚಂದ್ರಬಾಬು ನಾಯ್ಡು ಘೋಷಣೆ

ಅಮರಾವತಿ: ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಿಸಲು, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು  ಹೊಸ ಯೋಜನೆಯೊಂದನ್ನ ಘೋಷಿಸಿದ್ದಾರೆ. 3ನೇ ಮಗು ಹುಟ್ಟಿದ್ರೆ 30,000 ರೂ. ಮತ್ತು 4ನೇ ಮಗು ಹುಟ್ಟಿದ್ರೆ 40,000 ರೂ. ಪ್ರೋತ್ಸಾಹ ಧನ  ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣ ಆಂಧ್ರ, ಸ್ವಚ್ಛ ಆಂಧ್ರ’ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3ನೇ ಮತ್ತು 4ನೇ ಮಗು ಹುಟ್ಟಿದ್ರೆ ಆರ್ಥಿಕ ಪ್ರೋತ್ಸಾಹಧನ ನೀಡುವುದಾಗಿ ತಿಳಿಸಿದರು. ಜನನ …

Read More »

82 ಕೋಟಿ ಮೌಲ್ಯದ ʻಜಿಹಾದಿ ಡ್ರಗ್‌ʼ ಜಪ್ತಿ – ಅಮಿತ್‌ ಶಾ

ನವದೆಹಲಿ: ʻಆಪರೇಷನ್ ರೇಜ್‌ಪಿಲ್ʼ  ವಿಶೇಷ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಘಟಕವು ಸುಮಾರು 182 ಕೋಟಿ ರೂ. ಮೌಲ್ಯದ ʻಜಿಹಾದಿ ಡ್ರಗ್‌ʼ ಅನ್ನು ವಶಪಡಿಸಿಕೊಂಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ  ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ  ನೇತೃತ್ವದ ಸರ್ಕಾರ ʻಡ್ರಗ್‌ ಮುಕ್ತ ಭಾರತʼ ನಿರ್ಮಾಣ ಮಾಡಲು ಸಂಕಲ್ಪ ಮಾಡಿದೆ ಎಂದು ಹೇಳಿದ್ದಾರೆ. ಆಪರೇಷನ್‌ ರೇಜ್‌ಪಿಲ್‌ ಮೂಲಕ ನಮ್ಮ ಏಜೆನ್ಸಿಗಳು …

Read More »

ನೀಟ್ ರದ್ಧತಿಗೆ ಮನನೊಂದು ಸರಣಿ ಆತ್ಮಹತ್ಯೆ – ನಾಲ್ವರು ಆಕಾಂಕ್ಷಿಗಳು ಸೂಸೈಡ್

ನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಸ್ಥಾನದ ಸೀಕರ್ ಮೂಲದ ಪ್ರದೀಪ್ ಮೇಘವಾಲ್, ಉತ್ತರ ಪ್ರದೇಶ ರಿತಿಕ್ ಮಿಶ್ರಾ, ದೆಹಲಿಯ ಆಜಾದ್‌ಪುರದ ಅನಿಷ್ಕಾ ಪಾಂಡೆ ಹಾಗೂ ದಕ್ಷಿಣ ಗೋವಾದ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.  650 ಅಂಕಗಳ ನಿರೀಕ್ಷೆಯಲ್ಲಿದ್ದ ರಾಜಸ್ಥಾನದ ಪ್ರದೀಪ್: ಮೃತ ಪ್ರದೀಪ್ ಕಳೆದ ಮೂರು ವರ್ಷಗಳಿಂದ ತನ್ನ ಇಬ್ಬರು ಸಹೋದರಿಯರೊಂದಿಗೆ ಸೀಕರ್‌ನಲ್ಲಿ ವಾಸಿಸುತ್ತಿದ್ದು, …

Read More »