Breaking News

Daily Archives: ಸೆಪ್ಟೆಂಬರ್ 4, 2026

ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ನನ್ನ ಜತೆ ಚರ್ಚೆಗೆ ಬರಲಿ – ಚೆಲುವರಾಯಸ್ವಾಮಿ ಸವಾಲ್

ಬೆಂಗಳೂರು: ಕುಮಾರಸ್ವಾಮಿಗೆ  ಗುಂಡಿಗೆ ಇದ್ದರೆ ಯಾರ ಮನೆ ಬಾಗಿಲು ಯಾರು ತಟ್ಟಿದರು ಅಂತ ಚರ್ಚೆಗೆ ನನ್ನ ಜೊತೆ ಬರಲು ಅಂತ ಸಚಿವ ಚೆಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ. ರಾತ್ರಿ 9 ಗಂಟೆಗೆ ಹೋಗಿ ಯಾರ ಮನೆ ಬಾಗಿಲು ಬಡಿದರು ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಗೆ ಗುಂಡಿಗೆ ಇದ್ದರೆ ನನ್ನ ಜತೆ ಕುಮಾರಸ್ವಾಮಿ ಚರ್ಚೆಗೆ ಬರಲಿ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎರಡು ದಿನ ಎಲ್ಲಿಗೆ ಹೋಗಿದ್ರು? …

Read More »

ಕಾರವಾರ ಕದಂಬ ನೌಕಾನೆಲೆಯ ಸಿಬ್ಬಂದಿ ನಾಪತ್ತೆ – ಪ್ರಕರಣದ ಸುತ್ತ ಹಲವು ಅನುಮಾನ

ಕಾರವಾರ: ಕದಂಬ ನೌಕಾನೆಲೆಯಲ್ಲಿ  ಸೇಲರ್  ಆಗಿ ಕರ್ತವ್ಯ ನಿರ್ವಹಿಸುತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಆಂದ್ರಪ್ರದೇಶದ ಅನಂತಪುರದ ಕುಂಟಿಮಡ್ಡಿ ಗ್ರಾಮದ ದಿನೇಶ್ ಕುಮಾರ್ (28) ಕಾಣೆಯಾದ‌ ಸಿಬ್ಬಂದಿ. ಅ.27 ರಂದು ಕದಂಬ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ವೇಳೆ ಮಧ್ಯಾಹ್ನ 2 ಗಂಟೆ ವೇಳೆಗೆ ಅವರು ನಾಪತ್ತೆಯಾಗಿದ್ದರು. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದಿನಿಂದಲೂ ಪಾಕಿಸ್ತಾನದ ಬೇಹುಗಾರಿಕಾ ತಂಡ ಹನಿಟ್ರ್ಯಾಪ್ …

Read More »

ಸಾರಿಗೆ ಬಸ್, ಪಿಕಪ್ ವಾಹನದ ನಡುವೆ ಭೀಕರ ಅಪಘಾತ – ಓರ್ವ ಸಾವು, ನಾಲ್ವರಿಗೆ ಗಾಯ

ಹಾಸನ: ಸಾರಿಗೆ ಬಸ್ ಹಾಗೂ ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ  ಜಿಲ್ಲೆ, ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದಿದೆ. ದಿನೇಶ್ (38) ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿ. ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಹಾಗೂ ದುರ್ಗಾಪ್ರಸಾದ್ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಬೊಲೆರೋ ಪಿಕಪ್ ವಾಹನ ಎಟಿಎಂಗಳಿಗೆ ಹಣ ತುಂಬಲು ಬರುತ್ತಿತ್ತು. ಈ ವೇಳೆ ಮಂಗಳೂರಿನಿಂದ …

Read More »

‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲಾಗುತ್ತಿಲ್ಲ: ರಾಗಾ ವಿರುದ್ಧ ಅಶೋಕ್ ಟೀಕೆ

ಬೆಂಗಳೂರು: ಭಾರತಕ್ಕೆ ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿಯನ್ನು ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಕುಸಿತ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಕರ್ನಾಟಕದ ಖಟಾಖಟ್ ರೂಫ್ ಶಾಲೆಯಲ್ಲಿ `ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸುವ ಬಗ್ಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ನೀವು ನ್ಯಾಯದ …

Read More »

KPSC Scam: ಕನ್ನಾಳೆ ಮನೆಯಲ್ಲಿ 15 ಗ್ರೂಪ್ ಬಿ ಹಾಲ್ ಟಿಕೆಟ್ ಪತ್ತೆ

ಬೆಂಗಳೂರು: ಕೆಪಿಎಸ್‌ಸಿ ಭ್ರಷ್ಟಾಚಾರ (KPSC Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿದ ವೇಳೆ 15 ಗ್ರೂಪ್ ಬಿ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ. ಪ್ರಕರಣದ ಸಂಬಂಧ ಸಿಐಡಿ ಅಧಿಕಾರಿಗಳು, ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳನ್ನು ನೋಡಿ ದಂಗಾಗಿದ್ದಾರೆ. ಶೋಧದ ವೇಳೆ ಬಸವರಾಜ್ ಮನೆಯಲ್ಲಿ ಬರೋಬ್ಬರಿ 15 ಪರೀಕ್ಷೆಗಳ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ. ಕೇವಲ ಪಶು ವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಬಿ-ಗ್ರೂಪ್ ಹುದ್ದೆಗಳು ಹಾಗೂ ಕೆಎಎಸ್‌ …

Read More »

ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ

ಬೆಂಗಳೂರು: ನಾಡಿನಲ್ಲೆಡೆ ಇಂದು ಬೃಂದಾವನದ ನಂದನ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ. ಬೆಂಗಳೂರಿನ ವೇಣು ಮಾದವನ ದೇವಾಲಯಗಳಲ್ಲಿ ಶ್ರೀಕೃಷ್ಣಾಷ್ಟಮಿಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಇದರೊಂದಿಗೆ ರಾಜ್ಯದ ವಿವಿಧ ಶ್ರೀಕೃಷ್ಣನ ಸನ್ನಿಧಿಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ದಿನ ಬೃಂದಾವನದ ಟೀಮ್‌ನಿಂದ ಮುಖ್ಯ ಮಂದಿರದಲ್ಲಿ ನವಿಲಿನ ಅಲಂಕಾರ ಮಾಡಲಾಗಿದೆ. ರಂಗ ಮಂದಿರದಲ್ಲಿ ವಿಶೇಷವಾಗಿ ರಾಧ – ಕೃಷ್ಣ ಉತ್ಸವ …

Read More »

ನೈತಿಕ ಮೌಲ್ಯಗಳು ಹಾಗೂ ಮಾನವೀಯತೆ ಬದುಕಿಗೆ ಆಧಾರ: ಗುರುಪಾದ ಶಿವಾಚಾರ್ಯರು

ಬಾಗಲಕೋಟೆ: ನೈತಿಕ ಮೌಲ್ಯಗಳು ಹಾಗೂ ಮಾನವೀಯ ಗುಣಗಳು ಮನುಷ್ಯನ ಜೀವನದ ಆಧಾರಸ್ತಂಭಗಳಾಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಸತ್ಯ, ಪ್ರಾಮಾಣಿಕತೆ, ಸಹಾನುಭೂತಿ, ಸೇವಾ ಮನೋಭಾವ ಹಾಗೂ ಪರಸ್ಪರ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕಲ್ಮಠ, ಬೀಳಗಿಯ ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯರು ಹೇಳಿದರು. ಬಿ.ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ಸಾಂಸ್ಕೃತಿಕ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮ.ನಿ.ಪ್ರ. ಬೀಳೂರು ಗುರುಬಸವ …

Read More »

ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಬಾಗಲಕೋಟೆಯಲ್ಲಿ ೭ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿ: ೧೦ ತಂಡಗಳು ಬಾಗಿ

ಹಾಕಿಯತ್ತ ಯುವಶಕ್ತಿ ಆಸಕ್ತಿ ವಹಿಸಲಿ :ಡಾ.ವೀರಣ್ಣ ಚರಂತಿಮಠ ಬಾಗಲಕೋಟೆ: ದೇಶೀಯ ಕ್ರೀಡೆಯಾದ ಹಾಕಿಯತ್ತ ಇಂದಿನ ಯುವಶಕ್ತಿ ಹೆಚ್ಚಿನ ಆಸಕ್ತಿ ವಹಿಸಿ, ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹೇಳಿದರು. ಅವರು ನಗರದ ಬಿವಿವಿ ಸಂಘದ ಆಟದ ಮೈದಾನದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಹಾಕಿ ದಿಗ್ಗಜ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಗುರುವಾರ ಬಿವಿವಿ ಸಂಘದ ಸಂಯುಕ್ತ ಆಶ್ರಯದಲ್ಲಿ, ಹಾಕಿ ಹೀರೋಸ್ ಫ್ಯಾನ್ …

Read More »

ಬೆಳಗಾವಿಯ ಮಾನವೀಯತೆಗೆ ದಾಖಲೆ ಸ್ಪಂದನೆ!

ಬೆಳಗಾವಿ:ನಮ್ಮ ರಕ್ತ ಮತ್ತೊಬ್ಬರ ಬದುಕಿಗೆ ಬೆಳಕಾಗಲಿ ಎಂಬ ಮಾನವೀಯ ಸಂದೇಶದೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ನಡೆದ ಬೃಹತ ಸ್ವಯಂಪ್ರೇರಿತ ರಕ್ತದಾನ ಅಭಿಯಾನಕ್ಕೆ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಶಿಕ್ಷಕರ ದಿನ ಅಂಗವಾಗಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಈ ವಿಶಿಷ್ಟ ಅಭಿಯಾನದಲ್ಲಿ ಜಿಲ್ಲೆಯ 23 ಕೇಂದ್ರಗಳಲ್ಲಿ ಏಕಕಾಲಕ್ಕೆ ರಕ್ತದಾನ ಶಿಬಿರಗಳು ನಡೆದವು. ಒಂದೇ ದಿನದಲ್ಲಿ 9,123 ಮಂದಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು 4,634 ಯುನಿಟ್ ರಕ್ತವನ್ನು …

Read More »

ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಕಾರ್ಯ ಶ್ಲಾಘನೀಯ

ಬೆಳಗಾವಿ : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಬಲಿಷ್ಠ ಸಂಪರ್ಕ ಜಾಲದಿಂದಾಗಿ ತುರ್ತು ಪರಿಸ್ಥಿತಿಯ ಸುವರ್ಣ ಗಳಿಗೆಯಲ್ಲಿಯೇ ತ್ವರಿತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿದೆ. ಈ ಕಾರ್ಯದಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಕರ್ನಾಟಕ ಆರೋಗ್ಯ ಸಂಜೀವಿನಿ (ಕೆಎಎಸ್‌ಎಸ್) ಹಾಗೂ ಪಿಎಂ ರಾಹತ್ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ …

Read More »