Breaking News

‘ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್​ನಲ್ಲಿ ಸರ್ಕಾರ ಯಾರನ್ನೋ ರಕ್ಷಿಸುತ್ತಿದೆ’: ಪ್ರಲ್ಹಾದ್ ಜೋಶಿ

Spread the love

ಹುಬ್ಬಳ್ಳಿ : ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಯಾರನ್ನೋ ರಕ್ಷಣೆ ಮಾಡಲು ಹೊರಟಿರೋದು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ‌ಅವರು, ಪ್ರಕರಣದ ಹಿಂದೆ ರಾಜಕಾರಣಿಗಳಿದ್ದಾರೆ ಅನ್ನೋ ವರದಿಗಳು ಬರುತ್ತಿವೆ. ಇದು ದೇಶದ್ರೋಹದ ಕೆಲಸ. ಚಿನ್ನ ಎಲ್ಲಿಗೆ ಹೋಗುತ್ತಿದೆ? ಅಲ್ಲಿಂದ ಬರೋ ಹಣ ಎಲ್ಲಿ ಹೋಗುತ್ತೆ? ಅನ್ನೋದು ಯಾರಿಗೂ ಗೊತ್ತಿಲ್ಲ. ದೇಶವಿರೋಧಿ ಕೃತ್ಯಕ್ಕೆ ಹಣ ಬಳಕೆಯಾಗುತ್ತಿದೆಯೇ? ಯಾವುದೂ ಗೊತ್ತಿಲ್ಲ. ಯಾರನ್ನು ರಕ್ಷಣೆ ಮಾಡಲು ಹೊರಟಿದ್ದೀರಿ?. ಒಬ್ಬರು ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದಾರೆ ಅಂತಾರೆ. ಒಬ್ಬರು ಕೊಟ್ಡಿಲ್ಲ ಅಂತಾರೆ. ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪರಮೇಶ್ವರ್​ ಅವರೇ ಜವಾಬ್ದಾರಿಯಿಂದ ಮಾತನಾಡಿ. ಒತ್ತಡದಲ್ಲಿ ಹೇಳಿಕೆ ಕೊಡಬೇಡಿ. ನೀವು ಜಂಟಲ್​ಮ್ಯಾನ್​​ ಪೊಲಿಟಿಶಿಯನ್​​. ಈ ಪ್ರಕರಣವನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಂಪೂರ್ಣ ತನಿಖೆ ನಡೆಯಬೇಕೆಂದರು.ಇನ್ನೂ, ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ. ಜನವರಿ, ಫೆಬ್ರವರಿ ಗೃಹಲಕ್ಷ್ಮಿ ಹಣ ಬಾಕಿಯಿದೆ. ಸಚಿವರೋರ್ವರು ಅದೇನು ಸಂಬಳವೇ ಅಂತಾ ಕೇಳುತ್ತಾರೆ. ಗ್ಯಾರಂಟಿ ಸಮಿತಿಯ 31 ಜಿಲ್ಲೆಯ ಅಧ್ಯಕ್ಷರಿಗೆ 50 ಸಾವಿರ ಕೊಡುತ್ತಿದ್ದಾರೆ. ಸಮಿತಿಗೆ ತಿಂಗಳಿಗೆ 30 ಲಕ್ಷ ಕೊಡುತ್ತಿದ್ದಾರೆ. ಕೇವಲ ಜಿಲ್ಲಾ ಸಮಿತಿಯವರಿಗೆ ಕೊಡುತ್ತಿದ್ದಾರೆ. 3 ಕೋಟಿ 60 ಲಕ್ಷ ರೂ. ಆಗುತ್ತದೆ. ಒಂದು ವರ್ಷಕ್ಕೆ ತಾಲೂಕು ಸಮಿತಿ ಅಧ್ಯಕ್ಷರಿಗೆ 25 ಸಾವಿರ. 225 ತಾಲೂಕಿಗೆ 56 ಲಕ್ಷ ರೂ. ಖರ್ಚು. ಸದಸ್ಯರಿಗೆ ತಲಾ 1,000ರೂ. ಇವರು ಗ್ಯಾರಂಟಿ ಸಮಿತಿಗೆ 13 ಕೋಟಿ ರೂ. ಭತ್ಯೆ ಕೊಡುತ್ತಿದ್ದಾರೆ. ಲೆಕ್ಕ ತೆಗೆದರೆ ಇದನ್ನು ಕೊಡಲು ಹಣ ಎಲ್ಲಿಂದ ಬರುತ್ತದೆ. ನಿಮ್ಮ ಅಧಿಕಾರಿಗಳು ಏನು ಮಾಡುತ್ತಾರೆ. ಶಾಸಕರು, ಸಚಿವರು ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ