Breaking News

Yearly Archives: 2021

ಬೆಂಗಳೂರಿನಲ್ಲಿ ಮಳೆ ಅಬ್ಬರ: ಮನೆಗೆ ತೆರಳಲಾಗದೆ ಜನರ ಪರದಾಟ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಹಲವೆಡೆ ಈಗಲೂ ಮಳೆ ಸುರಿಯುತ್ತಿದ್ದು , ಬೆಂಗಳೂರು ಏರ್‌ಪೋರ್ಟ್ ಮುಖ್ಯರಸ್ತೆಗಳು ಜಲಾವೃತಗೊಂಡಿವೆ. ಏರ್‌ಪೋರ್ಟ್ ತಲುಪಲು ಪ್ರಯಾಣಿಕರು ಒದ್ದಾಡಿದ್ದು, ಎಷ್ಟೋ ಮಂದಿ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಏರ್‌ಪೋರ್ಟ್ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು, ಜನ ತೊಂದರೆ ಅನುಭವಿಸಬೇಕಾಯ್ತು. ಬೆಂಗಳೂರಿನ ಬಹುತೇಕ ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. …

Read More »

ಗೋಕಾಕ ತಾಲೂಕಿನ ಮಿನಿ ವಿಧಾನಸೌಧ ಎಷ್ಟು ವೈಜ್ಞಾನಿಕವಾಗಿ ಕಟ್ಟಿದ್ದಾರೆಂದರೆ. ಮಳೆ ಬಂದರೆ ಸಾಕು ಕಾರಿಡಾರ, ಮೆಟ್ಟಿಲು, ಟೈಲ್ಸ್ ಎಲ್ಲ ಮಳೆರಾಯ ಸ್ವಚ್ಛ ಮಾಡತಾನೆ.

ಗೋಕಾಕ: ಗೋಕಾಕ ಅಂದ್ರೇನೆ ಪವರ್ಫುಲ್ ಅನ್ನೋದು ಎಲ್ಲಾಜನರಿಗೆ ಗೊತ್ತು, ಹೇಗೆ ಕರದಂಟು ಫೇಮಸ್ ಇದೆಯೋ ಹಾಗೆ ಅಲ್ಲಿನ ರಾಜಕೀಯ ಕೂಡ ಹಾಗೆ ಇದೆ ಆದ್ರೆ ಇಲ್ಲೊಂದು ನಿನ್ನೆಯ ಮಳೆಯ ಆಗಮನಕ್ಕೆ ನಡೆದ ಘಟನೆ ವಿಚಿತ್ರ ವಾದರು ನಿಜ ನಮ್ಮ ಗೋಕಾಕ ತಾಲೂಕಿನ ಮಿನಿ ವಿಧಾನಸೌಧ ಎಷ್ಟು ವೈಜ್ಞಾನಿಕವಾಗಿ ಕಟ್ಟಿದ್ದಾರೆಂದರೆ. ಮಳೆ ಬಂದರೆ ಸಾಕು ಕಾರಿಡಾರ, ಮೆಟ್ಟಿಲು, ಟೈಲ್ಸ್ ಎಲ್ಲ ಮಳೆರಾಯ ಸ್ವಚ್ಛ ಮಾಡತಾನೆ. ಕೆಲಸದ ಗುಣಮಟ್ಟದ ಮೇಲೆ ಗಮನ ಇರದೆ, …

Read More »

ರವಿಚಂದ್ರನ್ ನನ್ನ ಪಾಲಿಗೆ ಲಕ್ಕಿ..; ಮಿಸ್ ನಂದಿನಿ ಮುಹೂರ್ತದಲ್ಲಿ ಪ್ರಿಯಾಂಕಾ

ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ …’ ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ …

Read More »

ಬೆಲ್ಟಿನಲ್ಲಿ 804 ಗ್ರಾಂ ಚಿನ್ನ ಅಡಗಿಸಿಕೊಂಡು ಬಂದ ಭೂಪನನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು!

ಹುಬ್ಬಳ್ಳಿ: ದೇಹದ ಯಾವ್ಯಾವುದೋ ಭಾಗದಲ್ಲಿ ಅಡಗಿಸಿಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನ ಕದ್ದು ತರೋದನ್ನು ನೋಡಿದ್ದೇವೆ. ಹುಬ್ಬಳ್ಳಿಯಲ್ಲೊಬ್ಬ ಬೆಲ್ಟ್ ನಲ್ಲಿ ಚಿನ್ನದ ಗಟ್ಟಿಗಳನ್ನು (Gold Smuggling) ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹತ್ತಿರ ಹತ್ತಿರ ಒಂದು ಕೆ.ಜಿ.ಯಷ್ಟು ತೂಕದ ಎರಡು ಚಿನ್ನದ ಗಟ್ಟಿಗಳನ್ನು ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸೋ ವೇಳೆ ಪೊಲೀಸರ (Hubballi Police) ಬಲೆಗೆ ಬಿದ್ದಿದ್ದಾನೆ. ಗಾಂಜಾ ಮಾರಾಟ ಪ್ರಕರಣದಿಂದ ತೀವ್ರ ಚರ್ಚೆಗೆ …

Read More »

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಅಮೀರಾ ಎಂಬುವವರು ಆತ್ಮಹತ್ಯೆ,ಪತಿ ಅರೆಸ್ಟ್

ಕೊಡಗು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಅಮೀರಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರುಬೈಸ್​ನನ್ನ ಪೊಲೀಸರು ಬಂಧಿಸಿದ್ದಾರೆ. ಕೊಡಗಿನ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಗೃಹಿಣಿ ಅಮೀರಾ(21) ಸಾವನ್ನಪ್ಪಿದ್ದರು. ಅಮಿರಾಳಿಗೆ ವಾಟ್ಸ್ ಆಯಪ್​ನಲ್ಲೇ ಪತಿ ರುಬೈಸ್ ತಲಾಖ್ ಹೇಳಿದ್ದ ಎನ್ನಲಾಗಿದೆ. ಸದ್ಯ ರುಬೈಸ್​ನನ್ನ ದಕ್ಷಿಣ ಕನ್ನಡ ‌ಜಿಲ್ಲೆಯಲ್ಲಿ ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಗಳ ಸಾವಿನ ಬಳಿಕ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ರುಬೈಸ್​ನ ತಂದೆ ತಾಯಿ …

Read More »

ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಏರ್​ಪೋರ್ಟ್​ಗೆ ಹೋಗಲು ಟ್ರ್ಯಾಕ್ಟರ್​ ಮೊರೆಹೋದ ಪ್ಯಾಸೆಂಜರ್ಸ್

ಬೆಂಗಳೂರು: ಹಲವು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಬೆಂಗಳೂರಿಗರನ್ನ ಕಂಗೆಡಿಸಿದೆ. ಇಂದು ಕೂಡ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇತ್ತ ದೇವನಹಳ್ಳಿ ಏರ್​ಪೋರ್ಟ್ ಬಳಿಯೂ ಭಾರೀ ಮಳೆಯಾಗಿದ್ದು ಏರ್​​ಪೋರ್ಟ್ ಅರೈವಲ್ ಮತ್ತು ಡಿಪಾರ್ಚರ್ ವೇ, ಪಾರ್ಕಿಂಗ್ ಬಳಿಯೂ ಕೆರೆಯಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.   ಇತ್ತ ಏರ್​ಪೋರ್ಟ್​ಗೆ ಹೋಗುವ ಪ್ಯಾಸೆಂಜರ್​ಗಳು ಏರ್​​ಪೋರ್ಟ್​ಗೆ ತೆರಳಬೇಕಿದ್ದ ಬಸ್ ಸಿಗದೇ ಪರದಾಡುವಂತಾಗಿದೆ. ಈ ವೇಳೆ ದೇವರಂತೆ ಬಂದ ಟ್ರ್ಯಾಕ್ಟರ್ ಚಾಲಕನೋರ್ವ ಏರ್​ಪೋರ್ಟ್​ಗೆ ಹೋಗಲು …

Read More »

ಬೆಳಗಾವಿ ಬೂಡಾದಲ್ಲಿ ಇನ್ನೂ ಇದೆ ಕೆಜೆಪಿ v/s ಬಿಜೆಪಿ ಸಮರ;

ಬೆಳಗಾವಿ (ಅಕ್ಟೋಬರ್. 11)- ಬೆಳಗಾವಿ ‌ಜಿಲ್ಲೆಯ ರಾಜಕೀಯ ಪೈಪೋಟಿ, ಪರಸ್ಪರ ಹೋರಾಟಕ್ಕೆ ಹೆಸರಾಗಿದೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಥಾಪನೆ ಮಾಡಿದ ಕೆಜೆಪಿ ಪಕ್ಷದಲ್ಲಿ ‌ವಿಲೀನಗೊಂಡು ವರ್ಷಗಳೇ ಉರುಳಿದೆ. ಆದರೆ ಇನ್ನೂ ಕೆಜೆಪಿ, ಬಿಜೆಪಿ ನಡುವೆ ಮಾತ್ರ ಇನ್ನೂ ಮುಸುಕಿನ ಗುದ್ದಾಟ ಇದೆ. ಇದಕ್ಕೆ ಸಾಕ್ಷಿ ಎಂಬತೆ ಇದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಿರಿ ಹುದ್ದೆ. ಹಾಲಿ ಅಧ್ಯಕ್ಷ ಘೂಳಪ್ಪ ಹೊಸಮನಿ‌ ವಿರುದ್ಧ ಬಿಜೆಪಿ ಶಾಸಕರು ಅಸಹಕಾರ ಆರಂಭಿಸಿದ್ದಾರೆ. …

Read More »

ಎಚ್​.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಗಳ ಇನ್ನೂ ನಿಂತಿಲ್ಲ.

ಬೆಂಗಳೂರು: ರಾಜ್ಯ ವಿಧಾನಸಭಾ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ತಾರಕಕ್ಕೇರಿದ್ದ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಜಗಳ ಇನ್ನೂ ನಿಂತಿಲ್ಲ. ಹಾನಗಲ್​​ ಮತ್ತು ಸಿಂದಗಿ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್​ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದ ಮೇಲಂತೂ ಸಿದ್ದರಾಮಯ್ಯ ಎಚ್​​ಡಿಕೆ ಮೇಲೆ ಕೆಂಡಕಾರಿದ್ದರು. ಈಗ ಇದು ತಾತ್ಕಾಲಿಕ ಕದನ ವಿರಾಮವೋ, ಮಾತಿನ ಸಮರವೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು, ಈ ಪ್ರಶ್ನೆ ಹುಟ್ಟಿಕೊಂಡಿದ್ದೇ ತಡ ದಿಢೀರನೇ ಸಿದ್ದರಾಮಯ್ಯ ತಾತ್ಕಾಲಿಕ …

Read More »

ಪ್ರಧಾನಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು: ರಾಮಲಿಂಗಾರೆಡ್ಡಿ

ಅ.11: ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದ ರೈತರಿಗೂ ನ್ಯಾಯ ಸಿಗಲ್ಲ. ಸಾಮಾನ್ಯ ಜನರಿಗೂ ನ್ಯಾಯ ಸಿಗಲ್ಲ. ಹಾಗಾಗಿ ಅವರು ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು. ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ರೈತ ವಿರೋಧಿ ಕೃಷಿ ಕಾನೂನುಗಳು …

Read More »

ಪೊಲೀಸ್​​ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ; ಯಾಕೆ?

ಹಾವೇರಿ: ಪೊಲೀಸ್​​​ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಸಿಎಂ ಬಸವರಾಜ್​​ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿ ತಾಲೂಕು ಗಡಿ ಭಾಗದ ತರ್ಲಘಟ್ಟ ಗ್ರಾಮದಲ್ಲಿ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೈತರು ಭೂಮಿಯಲ್ಲಿ ಸಾಗುವಳಿ ಮಾಡಲು ಮುಂದಾದ ವಿಷಯ ತಿಳಿದು ದುಂಡಸಿ ಅರಣ್ಯ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ತಡಸ ಠಾಣೆಯ ಪೊಲೀಸ್​​ ಸಬ್​​ ಇನ್ಸ್​ಪೆಕ್ಟರ್​​​ ಕೂಡ ಸ್ಥಳಕ್ಕೆ ಹೋಗಿ …

Read More »