ಹೊಸಪೇಟೆ : ಹುಲಿ-ಸಿಂಹಗಳ ಸಫಾರಿಯಂತೆ ಇನ್ಮುಂದೆ ಕರಡಿ ಸಫಾರಿ ಮಾಡುವ ಮೂಲಕ ಪ್ರವಾಸಿಗರು ಕರಡಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಹೌದು! ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು, ತಾಲ್ಲೂಕಿನ ಕಮಲಾಪುರ ಸಮೀಪದ ದರೋಜಿ ಕರಡಿಧಾಮಕ್ಕೆ ಭೇಟಿ ನೀಡಿ, ಸಫಾರಿ ಮೂಲಕ ಕರಡಿಗಳ ಚಲನವಲನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಏಷ್ಯಾ ಖಂಡದ ಮೊಟ್ಟಮೊದಲ ಕರಡಿಧಾಮದತ್ತ ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಹೊಸ ಪ್ರಯತ್ನ ನಡೆಸಿ. ಕರಡಿ ಸಫಾರಿ ಯೋಜನೆ ತಯಾರು ಮಾಡಿದೆ. ಹಂಪಿ …
Read More »Daily Archives: ಆಗಷ್ಟ್ 27, 2021
ಲವ್ ಯೂ ರಚ್ಚು’ ದುರಂತ: ಅಜಯ್ ರಾವ್ ಸೇರಿ ಚಿತ್ರತಂಡದ 6 ಮಂದಿಗೆ ಜಾಮೀನು
ರಾಮನಗರ: ‘ಲವ್ ಯೂ ರಚ್ಚು’ ಚಿತ್ರ ತಂಡದ ಆರು ಮಂದಿಗೆ ಇಲ್ಲಿನ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು. ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ನಾಯಕ ಅಜಯ್ ರಾವ್, ಸಾಹಸ ನಿರ್ದೇಶಕ ವಿನೋದ್‌ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್ ಹಾಗೂ ಕ್ರೇನ್ ಚಾಲಕ ಮಹದೇವ ಅವರಿಗೆ ನ್ಯಾಯಾಧೀಶ ಸಿದ್ಧಲಿಂಗಪ್ರಭು ಜಾಮೀನು ನೀಡಿ ಆದೇಶಿಸಿದರು. ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ …
Read More »ಎಸ್‌ಐ ಮೂತ್ರ ನೆಕ್ಕಿಸಿದ ಪ್ರಕರಣ ನಿರೀಕ್ಷಣ ಜಾಮೀನು ನಿರಾಕರಣೆ
ಬೆಂಗಳೂರು: ಪ್ರಕರಣವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದಲ್ಲದೆ, ಮೂತ್ರ ನೆಕ್ಕಿಸಿದ ಆರೋಪ ಹೊತ್ತಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಅರ್ಜುನ್‌ಗೆ ನಿರೀಕ್ಷಣ ಜಾಮೀನು ನೀಡಲು ಹೈಕೋರ್ಟಿನ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರ ಏಕ ಸದಸ್ಯ ನ್ಯಾಯಪೀಠ ನಿರಾಕರಿಸಿತು. ಆರೋಪಿಯ ಕೃತ್ಯ ಹೀನಾಯ ವಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ. ಎಸ್‌ಐ ವಿರುದ್ಧ …
Read More »ಸೆಪ್ಟಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಚುನಾವಣೆಗೆ ಒಟ್ಟೂ 385 ಜನರು ಕಣದಲ್ಲಿ
ಬೆಳಗಾವಿ – ಸೆಪ್ಟಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಚುನಾವಣೆಗೆ ಒಟ್ಟೂ 385 ಜನರು ಕಣದಲ್ಲಿದ್ದಾರೆ. ಬಿಜೆಪಿ 55, ಕಾಂಗ್ರೆಸ್ 45, ಜೆಡಿಎಸ್ 11, ಆಮ್ ಆದ್ಮಿ 27, ಎಐಎಂಐಎಂ 7, ಉತ್ತಮ ಪ್ರಜಾಕೀಯ ಪಾರ್ಟಿ 1, ಎಸ್ ಡಿ ಪಿಐ 1 ಮತ್ತು ಪಕ್ಷೇತರರು 238 ಜನರು ಕಣದಲ್ಲಿದ್ದಾರೆ. for more details click the link New-doc-Aug-26-2021-9.12-PM
Read More »