ಸದಾಶಿವ ನಗರದ ಗಣಾಚಾರಿ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿ
• ಗಣಾಚಾರಿ ರುದ್ರಭೂಮಿಯಲ್ಲಿ ಸಸಿ ನೆಡುವ ಅಭಿಯಾನ
• ಪರಿಸರ ಸಂರಕ್ಷಣೆಗೆ ಆರ್‌ಎಫ್‌ಒ ಕರೆ
• ರುದ್ರಭೂಮಿ ಆವರಣದಲ್ಲಿ ಸ್ವಚ್ಛತಾ ಕಾಯಕ ಯಶಸ್ವಿ
• ಸಮಾಜದ ಹಲವು ಪ್ರಮುಖರ ಸಕ್ರಿಯ ಭಾಗಿ
ಬೆಳಗಾವಿಯ ಸದಾಶಿವ ನಗರದ ಗಣಾಚಾರಿ ರುದ್ರಭೂಮಿಯಲ್ಲಿ ವೀರಶೈವ ಸಮಾಜ ಸೇವಾ ಸಮಿತಿ, ಪಾಹಿ ಫೌಂಡೇಶನ್ ಹಾಗೂ ಕರ್ನಾಟಕ ಸರ್ಕಾರದ ವಲಯ ಅರಣ್ಯ ಇಲಾಖೆಯ ಜಂಟಿ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಈ ಮುನ್ನ ರುದ್ರಭೂಮಿ ಆವರಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಬಳಿಕ ಗಿಡಗಳನ್ನು ನೆಡುವ ಮೂಲಕ ಹಸಿರು ಸಂದೇಶ ಸಾರಲಾಯಿತು.
ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬೆಳಗಾವಿ ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ ಗೌರಾಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ ಕಳಸಣ್ಣವರ ಮಾತನಾಡಿ, ಗಿಡ-ಮರಗಳು ಮಾನವ ಜೀವನದ ಜೀವನಾಡಿಯಾಗಿದ್ದು, ಭವಿಷ್ಯದ ಪೀಳಿಗೆಗಾಗಿ ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆ ಎಂದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಶೋಕ, ಗಿರೀಶ ಬಾಣದ ಹಾಗೂ ಸಮಿತಿಯ ಸರಳಾ ಹೇರೇಕರ, ರತ್ನಕ್ಕಾ ಬೆಲ್ಲದ, ರಕ್ಷಾ, ಬಸವರಾಜ ಗಣಾಚಾರಿ, ಶಿವಾಜಿರಾವ್ ಕಾಗಣೇಕರ, ಪ್ರಕಾಶ್ ಬಾಳೇಕುಂದಿ, ಗಿರೀಶ ಬಾಗಿ, ಸತೀಶ ಪಾಟೀಲ, ಮಂಜುನಾಥ ಮತ್ತಿಕೊಪ್ಪ, ಆನಂದ ಗುಡಸ, ಸಂಜಯ ಕೋಟಗಿ, ಆನಂದ ಗೋಕಾಪ, ಸುಭಾಷ ಕತ್ತಿ, ನಿಖಿಲ ಝೋಂಡ, ಸೇರಿದಂತೆ ಅನೇಕ ಮುಖಂಡರು ಹಾಗೂ ಸಮಾಜದ ಬಂಧು-ಬಾಂಧವರು ಉಪಸ್ಥಿತರಿದ್ದರು.
Laxmi News 24×7