ಬೆಳಗಾವಿಯಲ್ಲಿ ಆಷಾಢ ಏಕಾದಶಿ ಸಂಭ್ರಮ…
ವಿಠ್ಠಲನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಇಂದು ದೇವಶಯನಿ ಆಷಾಢ ಏಕಾದಶಿ ಈ ಹಿನ್ನೆಲೆ ಬೆಳಗಾವಿಯ ಪಾಂಡುರಂಗನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಇಂದು ಆಷಾಢ ಏಕಾದಶಿ ಪಾಂಡುರಂಗನ ಭಕ್ತರಿಗೆ ಇದು ವಿಶೇಷ ದಿನ. ಬೆಳಗಾವಿಯ ಬಾಪಟ್ ಗಲ್ಲಿಯ ಕಾರ್ ಪಾರ್ಕೀಂಗ್’ನಲ್ಲಿರುವ ಶ್ರೀ ವಿಠ್ಠಲ-ರಕುಮಾಯಿಯ ಮಂದಿರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಬೆಳಿಗ್ಗೆಯೇ ಶ್ರೀ ವಿಠ್ಠಲ-ರುಕ್ಮೀಣಿಯ ಮೂರ್ತಿಗೆ ಅಭಿಷೇಕ ನೆರವೇರಿಸಲಾಯಿತು.

ನಂತರ ಅಲಂಕಾರ, ಮಹಾ ಆರತಿ, ನೈವೈದ್ಯ ಅರ್ಪಣೆ ನಡೆಯಿತು. ಬೆಳ್ಳಿಗೆಯಿಂದಲೇ ಏಕಾದಶಿ ಉಪವಾಸ ಕೈಗೊಂಡ ವಿಠ್ಠಲನ ಭಕ್ತರು ದೇವರ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.
ಶ್ರೀರಾಮಸೇನೆ ಹಿಂದೂಸ್ಥಾನ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ಮತ್ತು ಇನ್ನುಳಿದ ಗಣ್ಯರು ವಿಠ್ಠಲನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನದ ವತಿಯಿಂದ ಗಣ್ಯರನ್ನು ಸನ್ಮಾನಿಸಲಾಯಿತು.
ವಾರಕರಿಗಳು ಮತ್ತು ಪಂಢರಿನಾಥನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.