ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ತಿಂದ ನಂತರ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಇದು ಆಹಾರ ವಿಷಾಹಾರ (Food Poisoning) ಎಂದು ಶಂಕಿಸಲಾಗಿತ್ತು, ಆದರೆ ಮರಣೋತ್ತರ ಪರೀಕ್ಷೆಯ ವರದಿ ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿದೆ.
ಎನ್ಡಿಟಿವಿ ವರದಿಯ ಪ್ರಕಾರ, ಮೃತರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಪ್ರಮುಖ ಅಂಗಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಪತ್ತೆಯಾಗಿದೆ.
ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ (Morphine) ಎಂಬ ಶಕ್ತಿಶಾಲಿ ನೋವು ನಿವಾರಕ ವಿಷಕಾರಿ ಅಂಶ ಪತ್ತೆಯಾಗಿದೆ. ಇದು ಕೇವಲ ವಿಷಾಹಾರದ ಪ್ರಕರಣವಲ್ಲ ಎಂಬ ಸಂಶಯವನ್ನು ಬಲಪಡಿಸಿದೆ.
ಮುಂಬೈನ ಪೈಧೋನಿ ಪ್ರದೇಶದ ಅಬ್ದುಲ್ಲಾ ಡೊಕಾಡಿಯಾ (40), ನಸ್ರೀನ್ (35), ಮತ್ತು ಅವರ ಪುತ್ರಿಯರಾದ ಆಯಿಶಾ (16) ಹಾಗೂ ಜೈನಬ್ (13) ಸಾವನ್ನಪ್ಪಿದ ದುರ್ದೈವಿಗಳು.
ಏಪ್ರಿಲ್ 25 ರಂದು ರಾತ್ರಿ 10:30ಕ್ಕೆ ಈ ಕುಟುಂಬ ಸಂಬಂಧಿಕರೊಂದಿಗೆ ಊಟ ಮಾಡಿತ್ತು. ನಂತರ ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ಹಣ್ಣನ್ನು ಸೇವಿಸಿತ್ತು. ಏಪ್ರಿಲ್ 26 ರ ಬೆಳಗಿನ ಜಾವ 5:30 ರ ಸುಮಾರಿಗೆ ನಾಲ್ವರಿಗೂ ವಾಂತಿ ಮತ್ತು ಭೇದಿ ಶುರುವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಕಲ್ಲಂಗಡಿ ಹಣ್ಣಿನಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಪುರಾವೆಗಳಿಲ್ಲ ಎಂದು ಎಫ್ಡಿಎ (FDA) ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Laxmi News 24×7