ದೆಹಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸೌಜನ್ಯ ಪ್ರಕರಣ ವಿಚಾರಣೆ ನಡೆಯಿತು. ಪ್ರಮುಖ ಅಂಶಗಳು :
1. ಸೌಜನ್ಯ ಪ್ರಕಾರಣದ ಎಲ್ಲ ಸಾಕ್ಷಿಗಳಿಗೆ ತಕ್ಷಣದಿಂದ ರಕ್ಷಣೆ ನೀಡಬೇಕು. ಈ ಹಿಂದೆ ಕೆಲವು ಪ್ರಮುಖ ಸಾಕ್ಷಿಗಳು ಸಂಶಯ ಸಾವು ಹೊಂದಿರುವ ಆಧಾರದ ಮೇಲೆ ಈ ನಿರ್ದೇಶನ ನೀಡಿದೆ
2. ಮರು ತನಿಖೆ ಕುರಿತ ತಮ್ಮ ನಿಲುವನ್ನು CBI ಮತ್ತು ರಾಜ್ಯ ಸರ್ಕಾರ 2 ವಾರದಲ್ಲಿ ಲಿಖಿತ ರೂಪದಲ್ಲಿ ನೀಡಬೇಕು ಮರು ತನಿಖೆ ಯಾವ ತನಿಖ ಸಂಸ್ಥೆ ನಡೆಸಬಹುದು ಎನ್ನುವುದನ್ನು ತಿಳಿಸಬೇಕು.
3. ಇಂತಹ ಗಂಭೀರ ಪ್ರಕರಣದಲ್ಲಿ ನೀವು ಇಷ್ಟೊಂದು ನಿರಾಸಕ್ತಿ ತೋರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಕೀಲರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಪ್ರಮುಖ ಸಾಕ್ಷಿ ಮತ್ತು ದಾಖಲೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಮಾನ್ಯ ನ್ಯಾಯಾಲಯ ಗಮನಕ್ಕೆ ಅರ್ಜಿದಾರರ ಹಿರಿಯ ನ್ಯಾಯವಾದಿಗಳು ತಂದಿದ್ದಾರೆ. ಮತ್ತು ಆ ಅಂಶಗಳಿಗೆ ಮನ್ನಣೆ ನೀಡಿ ಪ್ರಮುಖ ಸಾಕ್ಷಿಗಳಿಗೆ ರಕ್ಷಣೆ ನಿರ್ದೇಶನ ಮಾಡಲಾಯಿತು
ಈ ಬೆಳವಣಿಗೆ ವಿಶೇಷವಾಗಿ ಸೌಜನ್ಯ ಪ್ರಕಾರಣದ ಎಲ್ಲ ಪ್ರಮುಖ ಸಾಕ್ಷಿಗಳಿಗೆ ರಕ್ಷಣೆಗೆ ಆದೇಶ ಮಾಡಿರುವುದು ಅತೀ ದೊಡ್ಡ ಆಶಾದಾಯಕ ಬೆಳವಣಿಗೆ. 13 ವರ್ಷದಲ್ಲಿ ಸೌಜನ್ಯ ಪ್ರಕಾರಣದ ಸಾಕ್ಷಿಗಳಿಗೆ ದೇಶದ ಸರ್ವೋಚ್ಚ ನ್ಯಾಯಾಲಯ ರಕ್ಷಣೆ ನೀಡಿರುವುದು ನ್ಯಾಯಾಲಯ ಮೇಲೆ ನಂಬಿಕೆ ಬರುವಂತೆ ಆಗಿದೆ. ಇದು ಸಾಮಾಜಿಕ ಅದೋಲನ ಆಗಿರುವ ಸೌಜನ್ಯ ಹೋರಾಟಕ್ಕೆ ಸಿಕ್ಕ ಮನ್ನಣೆ ಆಗಿದೆ. ಮಹೇಶ ಶೆಟ್ಟಿ ತಿಮರೋಡಿ ಸೌಜನ್ಯ ತಾಯಿ ಕುಸುಮಾವತಿ ಮತ್ತು ನಮ್ಮೆಲ್ಲ ಹೋರಾಟಗಾರರು ಎತ್ತಿದ ನ್ಯಾಯದ ಧ್ವನಿಯಲ್ಲಿ ನೈತಿಕತೆ, ಸತ್ಯ ಅಡಗಿದೆ ಎಂದು ಇಂದಿನ ನ್ಯಾಯಾಲಯದ ಬೆಳವಣಿಗೆ ತಿಳಿಸುತ್ತದೆ.
ಅರ್ಜಿದಾರ ಪರವಾಗಿ ಹಿರಿಯ ನ್ಯಾಯ ವಾದಿಗಳಾದ ಶ್ರೀಮತಿ ಶೋಭಾ ಗುಪ್ತ, ಶ್ರೀ ಶೇಖರ ದೇವಸ, ಶ್ರೀ ನೂಲವಿ, ಶ್ರೀ ಮತ್ತು ಶ್ರೀಮತಿ ಅಶುತೋಷ ದುಬೇ ಅನೇಕ ಹಿರಿಯ ಕಿರಿಯ ಸುಪ್ರೀಂ ಕೋರ್ಟ್ ನ್ಯಾಯವಾದಿಗಳು, ಸಂತೋಷ ರಾವ್ ಪರವಾಗಿ ಹಿರಿಯ ನ್ಯಾಯಾವಾದಿ ಶ್ರೀ ಗುರುರಾಜ್ ಹಾಜರಿದ್ದರು. ಜುಲೈ 14 ಕ್ಕೆ ಮುಂದಿನ ವಿಚಾರಣೆ.
ಸೌಜನ್ಯ ಹೋರಾಟಕ್ಕೆ ಎಲ್ಲರ ಬೆಂಬಲ ಇರಲಿ
Laxmi News 24×7