Breaking News

ಎಲ್ಲೆಂದರಲ್ಲಿ ಎಸೆಯಬೇಡಿ ದೇವರ ಫೋಟೋ: ಬೆಳಗಾವಿಯಲ್ಲಿ ಹಳೆಯ ಭಾವಚಿತ್ರಗಳ ಸಂಗ್ರಹಿಸಿ ವಿಧಿಪೂರ್ವಕ ವಿಸರ್ಜನೆ

Spread the love

ಮನೆಗಳಲ್ಲಿ ಹಳೆಯದಾದ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಎಸೆಯುವ ಮೂಲಕ ದೈವನಿಂದನೆ ಮಾಡುವುದನ್ನು ತಡೆಯಲು ಬೆಳಗಾವಿಯ ಸರ್ವ ಲೋಕ ಸೇವಾ ಫೌಂಡೇಶನ್ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಶಿವಬಸವ ನಗರದಲ್ಲಿ ರಾಶಿಗಟ್ಟಲೆ ಬಿದ್ದಿದ್ದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ, ಹುಕ್ಕೇರಿ ಶ್ರೀಗಳ ಸಾನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸುವ ಮೂಲಕ ವಿರೇಶ್ ಹಿರೇಮಠ ತಂಡ ಮಾದರಿಯಾಗಿದೆ.

ಬೆಳಗಾವಿಯ ಶಿವಬಸವ ನಗರದ ಶ್ರೀ ಜ್ಯೋತಿರ್ಲಿಂಗ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ತಂದು ಹಾಕಿದ್ದ ರಾಶಿಗಟ್ಟಲೆ ದೇವರ ಹಳೆಯ ಫೋಟೋಗಳನ್ನು ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಇಂದು ಸಂಗ್ರಹಿಸಲಾಯಿತು. ಫೌಂಡೇಶನ್‌ನ ವಿರೇಶ್ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಧೂಳು ಹಿಡಿದು ಅನಾಥವಾಗಿ ಬಿದ್ದಿದ್ದ ಭಾವಚಿತ್ರಗಳನ್ನು ಭಕ್ತಿಯಿಂದ ಒಟ್ಟುಗೂಡಿಸಲಾಯಿತು. ಈ ಭಾವಚಿತ್ರಗಳನ್ನು ಎಲ್ಲೆಂದರಲ್ಲಿ ಎಸೆಯುವುದು ದೈವ ಶ್ರದ್ಧೆಗೆ ಧಕ್ಕೆ ತರುತ್ತದೆ ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಸಂಗ್ರಹಿಸಲಾದ ಈ ಎಲ್ಲಾ ಭಾವಚಿತ್ರಗಳನ್ನು ನಂತರ ಹುಕ್ಕೇರಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿಧಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ವಿರೇಶ್ ಹಿರೇಮಠ ಅವರು, “ದೇವರ ಫೋಟೋಗಳು ಹಳೆಯದಾದಾಗ ಅವುಗಳನ್ನು ರಸ್ತೆ ಬದಿಯಲ್ಲಿ, ಮರದ ಕೆಳಗೆ ಅಥವಾ ಚರಂಡಿ ಪಕ್ಕದಲ್ಲಿ ಎಸೆಯುವುದು ಸರಿಯಲ್ಲ. ಶ್ರದ್ಧಾ ಕೇಂದ್ರಗಳ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಬೈಟ್
ಈ ಸಂದರ್ಭದಲ್ಲಿ ಪ್ರಶಾಂತ್ ದೇವನ, ಸುಭಾಷ್ ಪಾಟೀಲ್, ದೇವಪ್ಪ ಕಾಂಬಳೆ ಸೇರಿದಂತೆ ಫೌಂಡೇಶನ್‌ನ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೌರಿಂಗ್ ಆಸ್ಪತ್ರೆ ದುರಂತ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಎ ಆಯುಕ್ತರುಗಳ ಸಭೆ

Spread the loveಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ