Breaking News

ಬುಧವಾರ ವಾರ್ ರೂಂ ನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ.

Spread the love

ಬೆಳಗಾವಿ – ಇಲ್ಲಿಯ ಸ್ಮಾರ್ಟ್ ಸಿಟಿಯ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕೊರೋನಾ ವಾರ್ ರೂಂ ಆಗಿ ಪರಿವರ್ತನೆಯಾಗಿದೆ.

ಬುಧವಾರ ವಾರ್ ರೂಂ ನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ.

ಕೊರೋನಾ ಸಂಬಂಧಿಸಿದ ಎಲ್ಲ ನಿಯಂತ್ರಣ ಇನ್ನು ಮುಂದೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಿಂದ ನಡೆಯಲಿದೆ. 14 ದ್ರೋಣ್ ಕ್ಯಾಮೆರಾ ಸಹಾಯದಿಂದ ಇಡೀ ನಗರದ ಆಗು ಹೋಗುಗಳ ಮೇಲೆ ನಿಗಾ ಇಡಲಿದೆ. ಎಷ್ಟು ಜನ ಹೊರಗೆ ಬಂದಿದ್ದಾರೆ. ಎಷ್ಟು ವಾಹನಗಳು ಸಂಚರಿಸುತ್ತಿವೆ. ಪಾಸ್ ಇಲ್ಲದೆ ಹೊರ ಬಂದ ವಾಹನಗಳ ಮಾಹಿತಿ ಕೂಡ ಇಲ್ಲಿ ದಾಖಲಾಗಲಿದೆ.

ಸುಮಾರು 40 ತಾಂತ್ರಿಕ ಸಿಬ್ಬಂದಿ ಜೊತೆಗೆ ಪೊಲೀಸ್ ಟೀಮ್ ಸಹ ಇಲ್ಲಿ ಇರಲಿದೆ. ಹಿರಿಯ ಅಧಿಕಾರಿಗಳು ಸಹ ಇಲ್ಲಿಂದಲೇ ಕೆಲಸ ನಿರ್ವಹಿಸುವರು. ಈಗಾಗಲೆ ಆರೋಗ್ಯ ಇಲಾಖೆ ಇದೇ ಕಟ್ಟಡದ ಕೆಳ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.

ವಾರ್ ರೂಂ ನಲ್ಲಿ ಈಗಾಗಲೆ ಕೊರೋನಾ ದೃಢಪಟ್ಟಿರುವ 42 ಜನರ ಮ್ಯಾಪಿಂಗ್ ಕೆಲಸ ನಡೆಯಲಿದೆ. ಇವರೊಂದಿಗೆ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಕ್ಕೆ ಬಂದವರ ವಿವರ ದಾಖಲಾಗಲಿದೆ. ಹಾಟ್ ಸ್ಪಾಟ್ ವಿವರ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಕೊರೋನಾ ಸಂಬಂಧಿತ ಸಂಪೂರ್ಣ ವಿವರ ಇಲ್ಲಿ ಇರಲಿದೆ.

ಹಿರಿಯ ಅಧಿಕಾರಿ ರಾಜೇಂದ್ರ ಚೋಳನ್ ಅವರು ಬೆಳಗಾವಿಗೆ ಕೊರೋನಾ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಸಹ ಈ ಕಚೇರಿಯಿಂದ ಕಾರ್ಯನಿರ್ವಹಿಸಲಿದ್ದಾರೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ