Breaking News
Home / Uncategorized / ನರೇಗಾ ಯೋಜನೆ ಲೇವಡಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

ನರೇಗಾ ಯೋಜನೆ ಲೇವಡಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

Spread the love

ವಯನಾಡು: ಪ್ರಧಾನಿ ಮೋದಿ ಅವರು, 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ ನರೇಗಾ ಯೋಜನೆಯನ್ನು ಅಪಹಾಸ್ಯ ಮಾಡಿದ್ದರು. ಯುಪಿಎ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೋವಿಡ್ ಸಮಯದಲ್ಲಿ ದೇಶದ ಜನರ ‘ಸಂರಕ್ಷಕ’ ಪಾತ್ರವನ್ನು ವಹಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ತಮ್ಮ ಕ್ಷೇತ್ರದಲ್ಲಿನ ಪುಥಡಿ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಶ್ರೀ ಸಂಗಮಮ್‌ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಬಡವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಆಡಳಿತಾರೂಢ ಬಿಜೆಪಿಯ ಆಲೋಚನೆಯು ಅತ್ಯಂತ ಶಕ್ತಿಶಾಲಿಗಳನ್ನೇ ಇನ್ನಷ್ಟು ಬಲಗೊಳಿಸುವುದಾಗಿದೆ ಎಂದು ಆರೋಪಿಸಿದರು.

‘ಮೋದಿ ಪ್ರಧಾನಿಯಾದಾಗ ಸಂಸತ್ತಿನಲ್ಲಿ ನಮ್ಮೆಲ್ಲರ ಮುಂದೆ ನರೇಗಾವನ್ನು ಲೇವಡಿ ಮಾಡಿದ್ದರು. ನರೇಗಾ (ಒಉಓಖಇಉಂ) ಜಾರಿಯು ಭಾರತೀಯ ಜನರಿಗೆ ಮಾಡಿದ ಅವಮಾನ ಎಂದಿದ್ದರು’. ಆದರೆ ‘ದೇಶದಲ್ಲಿ ಕೊರೊನಾ ವೈರಸ್ ಹರಡುವ ಸಂದರ್ಭದಲ್ಲಿ ಯೋಜನೆಯು ಕೆಲಸ ಮತ್ತು ಹಣವನ್ನು ಹೆಚ್ಚಿಸಲು ನೆರವಾಯಿತು ಮತ್ತು ಕೋವಿಡ್ ಸಮಯದಲ್ಲಿ ನರೇಗಾ ಮಾತ್ರ ಜನರನ್ನು ರಕ್ಷಿಸುವ ಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಅವರು ಒಪ್ಪಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೋವಿಡ್ ಸಮಯದಲ್ಲಿ ಬೆಲೆ ‘ಗಗನಕ್ಕೇರಿತು’, ಕೂಲಿ ಉದ್ಯೋಗಾವಕಾಶಗಳನ್ನು ಖಾತರಿಪಡಿಸುವ ಮೂಲಕ ಗ್ರಾಮೀಣ ಭಾರತದಲ್ಲಿ ವಾಸಿಸುವ ಅತ್ಯಂತ ದುರ್ಬಲ ಜನರಿಗೆ ಸಾಮಾಜಿಕ ರಕ್ಷಣೆ ನೀಡುವ ನರೇಗಾಗೆ ಬೇಡಿಕೆ ಹೆಚ್ಚಾಯಿತು. ಸ್ವಸಹಾಯ ಸಂಘಗಳು ಮತ್ತು ಎಂಜಿಎನ್‌ಆರ್‌ಇಜಿಎ ಎರಡನ್ನೂ ಯುಪಿಎ ಸರ್ಕಾರ ‘ಉಡುಗೊರೆಯಾಗಿ’ ತಂದಿಲ್ಲ. ಬದಲಿಗೆ ‘ನಮ್ಮ ಜನರನ್ನು ಬಲಶಾಲಿಗಳನ್ನಾಗಿ ಮಾಡುವ ಸಬಲೀಕರಣದ ಸಾಧನಗಳಾಗಿವೆ’ ಎಂದು ತಿಳಿಸಿದರು.ಎಂಜಿಎನ್‌ಆರ್‌ಇಜಿಎ ಯೋಜನೆಯ ಅನುಷ್ಠಾನವು ಯುಪಿಎ ಅವಧಿಯಲ್ಲಿ ‘ಭರ್ಜರಿ ಆರ್ಥಿಕ ಬೆಳವಣಿಗೆಗೆ’ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.


Spread the love

About Laxminews 24x7

Check Also

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Spread the love ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ