ಬೆಂಗಳೂರು: ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದಕ್ಕೆ ಗೆಳೆಯನನ್ನು ಕೊಲೆಗೈದಿದ್ದ ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು ತಗುಲಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡೇಟು ಸದ್ದು ಕೇಳಿದೆ.
ಪಬ್ ಜಿ ಆಡುವ ವೇಳೆ ಡಿಸ್ಟರ್ಬ್ ಮಾಡಿದ್ದ ಅನ್ನೋ ಕಾರಣಕ್ಕೆ ಕರಣ್ ಸಿಂಗ್ ಎಂಬವನ್ನ ರೌಡಿ ಶೀಟರ್ ಪ್ರಭು ಕೊಲೆ ಮಾಡಿದ್ದನು. ಇಂದು ಪೊಲೀಸರು ಆಚಾರ್ಯ ಕಾಲೇಜ್ ಬಳಿಯ ಸಾಸಿವೆಘಟ್ಟದಲ್ಲಿ ಪ್ರಭು ಬಂಧನಕ್ಕೆ ಮುಂದಾಗಿದ್ದರು. ಈ ವೇಳೆ ಪೇದೆ ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಭು ಪ್ರಯತ್ನಿಸಿದ್ದನು.

ಕೊನೆಗೆ ಆತ್ಮರಕ್ಷಣೆಗಾಗಿ ಬಾಗಲಗುಂಟೆಯ ಸಬ್ ಇನ್‍ಸ್ಪೆಕ್ಟರ್ ಶ್ರೀಕಂಠೇಗೌಡರು ಫೈರಿಂಗ್ ಮಾಡಿದ್ದಾರೆ. ಪ್ರಭು ಕಾಲಿಗೆ ಗುಂಡು ತಗುಲಿದ್ದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕರಣ್ ಸಿಂಗ್ ಕೊಲೆ ಸಂಬಂಧ ಬಾಗಲಗುಂಟೆಯಲ್ಲಿ ಪ್ರಕರಣ ದಾಖಲಾಗಿತ್ತು.
Laxmi News 24×7