Breaking News

ಹರಿದ ಜೀನ್ಸ್’ ಸಿಎಂ ತಿರತ್ ಹೇಳಿಕೆಗೆ ಬಿಗ್‍ಬಿ ಮೊಮ್ಮಗಳ ಖಡಕ್ ತಿರುಗೇಟು

ಮುಂಬೈ : ಹರಿದ ಜೀನ್ಸ್ ಪ್ಯಾಂಟ್ ಧರಿಸಬೇಡಿ ಎಂದಿದ್ದ ಉತ್ತರಾಖಂಡ್​ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಅವರಿಗೆ ಬಾಲಿವುಡ್ ಹಿರಿಯ ನಟ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಉತ್ತರಾಖಂಡ್ ಸಿಎಂ ತಿರತ್​ ಸಿಂಗ್​ ರಾವತ್​ ಅವರು ‘ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್​ ಧರಿಸಿ ಮೊಣಕಾಲು ತೋರಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ …

Read More »

ಬಾಲಚಂದ್ರ ಜಾರಕಿಹೊಳಿ‌ಗೆ ಉಸ್ತುವಾರಿ ನೀಡುವಂತೆ ಕೆಲ ಮೂಲ ಬಿಜೆಪಿ ಮುಖಂಡರು ಸಲಹೆ

ಬೆಳಗಾವಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಬೈ ಎಲೆಕಗಷನ್​ ಘೋಷಣೆಯಾಗಿದೆ. ಬೆಳಗಾವಿಯಲ್ಲಿ ಸಂಸದೀಯ ಕ್ಷೇತ್ರವೊಂದಕ್ಕೆ ಉಪಚುನಾವಣೆ ನಡೆಯಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆ ಅಂದರೆ ರಮೇಶ್​ ಜಾರಕಿಹೊಳಿ ಹೆಗಲಿಗೆ ಜವಾಬ್ದಾರಿ ವಹಿಸುತ್ತಿತ್ತು ಆಡಳಿತಾರೂಢ ಬಿಜೆಪಿ ಪಕ್ಷ. ರಮೇಶ್ ಸಹ ತಣ್ಣಗೆ ತಮ್ಮ ಕಾರ್ಯಭಾರವನ್ನು ನಿರ್ವಹಿಸುತ್ತಿದ್ದರು. ಆದರೆ ಈ ಚಿತ್ರಣ ಬದಲಾಗಿದೆ. ರಾಜಕೀಯವಾಗಿ ಜಾರಕಿಹೊಳಿ ವರ್ಜ್ಯ, ಅಪಥ್ಯ ಅನ್ನುವಂತಾಗಿದೆ ಬಿಜೆಪಿಗೆ. ಇದಕ್ಕೆ ಕಾರಣ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದುವೇ ರಮೇಶ್ ಜಾರಕಿಹೊಳಿ‌ ಸಿಡಿ‌ …

Read More »

ಮುಂದುವರಿದ ಕೋಲಾಹಲ: ವಿಧಾನ ಪರಿಷತ್ ಕಲಾಪ‌ ಸೋಮವಾರಕ್ಕೆ ಮುಂದೂಡಿಕೆ

ಬೆಂಗಳೂರು: ಸಭಾಪತಿ‌ ನೇತೃತ್ವದಲ್ಲಿ ನಡೆದ ಸಂಧಾನ‌ ಸಭೆ ಸಫಲವಾಗಿಲ್ಲ. ಸದನ ಸಮಿತಿ ರಚನೆಗೆ ಸರ್ಕಾರ ನಿರಾಕರಿಸಿದ್ದು, ಜೆಡಿಎಸ್ ಧರಣಿಯಿಂದ ಸದನದಲ್ಲಿ ಕೋಲಾಹಲ‌ ಮುಂದುವರಿಯಿತು. ಕಲಾಪವನ್ನು ಮತ್ತೆ ಸೋಮವಾರಕ್ಕೆ ಮುಂದೂಡಲಾಯಿತು. ಸಂಧಾನ ಸಭೆಯ ಬಳಿಕ‌ ಮತ್ತೆ ಕಲಾಪ ಆರಂಭವಾದಾಗ ಸ್ಪಷ್ಟನೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ನಮ್ಮ ಅವಧಿಯಲ್ಲಿ ಯಾವುದೇ ಲೋಪ ಆಗಿಲ್ಲ.‌ 2002ರಲ್ಲಿ ಒಂದೇ ಬಾರಿಗೆ 300 ಕಾಲೇಜುಗಳಿಗೆ ಅನುಮತಿ ನೀಡಲಾಗಿತ್ತು. ಆಗ ಯಾರೂ …

Read More »

ದಾರಿತಪ್ಪಿದ ತಾಯಿ-ಮಗಳು: ದೈಹಿಕ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ – ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ

ದಾವಣಗೆರೆ: ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ ತಾಯಿ-ಮಗಳು ಬುದ್ಧಿವಾದ ಹೇಳಿದ ತಂದೆಯನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಮಂಜಪ್ಪ ಕೊಲೆಯಾದ ವ್ಯಕ್ತಿ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಮಂಜಪ್ಪ ಅವರ ಪುತ್ರಿ ಉಷಾ ಗಂಡನ ತೊರೆದು ಮಗಳು ಸಿಂಧು ಜೊತೆಗೆ ತಂದೆಯ ಮನೆಯಲ್ಲಿ ವಾಸವಾಗಿದ್ದಳು. ಈ ನಡುವೆ ಉಷಾ ಅದೇ ಊರಿನ ದೈಹಿಕ ಶಿಕ್ಷಕನಾಗಿರುವ ಇಬ್ಬರು ಮಕ್ಕಳ ತಂದೆಯೊಂದಿಗೆ …

Read More »

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಭರ್ಜರಿ ಸಿಹಿ ಸುದ್ದಿ: 3.5 ಲಕ್ಷ ಸಬ್ಸಿಡಿ, ಸುಲಭ ದರದಲ್ಲಿ ಸಾಲ

ಬೆಂಗಳೂರು: ರಾಜ್ಯದಲ್ಲಿ 3.24 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಬಡವರಿಗೆ ವಸತಿಗೆ ಶೇಕಡ 6 ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದನ್ನು ಶೇಕಡ 5 ಕ್ಕೆ ಇಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಕರ್ನಾಟಕ ಗೃಹಮಂಡಳಿ ಮತ್ತು ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿ ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ವಸತಿ ಕಲ್ಪಿಸಲಾಗುವುದು. ಬ್ಯಾಂಕ್ ಮೂಲಕ ಶೇ. 6 ಬಡ್ಡಿದರದಲ್ಲಿ 2.25 …

Read More »

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ವಾಹನಗಳ ಆರ್​ಸಿ ರಿನ್ಯೂ ಮಾಡಲು ಕಟ್ಟಬೇಕು 8 ಪಟ್ಟು ಹೆಚ್ಚು ಹಣ..!

ಕೇಂದ್ರ ಸಾರಿಗೆ ಸಚಿವಾಲಯ ಒಂದು ಡ್ರಾಫ್ಟ್​ ನೋಟಿಫಿಕೇಶನ್​ ಜಾರಿ ಮಾಡಿದೆ. ಇದರನ್ವಯ ಹಳೆಯ ವಾಹನಗಳ ಸಂಬಂಧ ಕೆಲ ಶುಲ್ಕಗಳನ್ನ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ವಾಹನ ಸ್ಕ್ರಾಪೇಜ್​ ಪಾಲಿಸಿಯಡಿಯಲ್ಲಿ ಈ ಮಹತ್ವದ ಹೆಜ್ಜೆಯನ್ನ ಕೈಗೊಳ್ಳಲು ಸಚಿವಾಲಯ ಪ್ಲಾನ್​ ಮಾಡಿದೆ. ಇದರ ಅಡಿಯಲ್ಲಿ ನಿಮ್ಮ ಬಳಿ 15 ವರ್ಷಕ್ಕೂ ಹಳೆಯ ಗಾಡಿ ಇದೆ ಅಂದಾದರೆ ಅದರ ರಿಜಿಸ್ಟ್ರೇಷನ್​ ಸರ್ಟಿಫಿಕೇಟ್​​ ಅಥವಾ ಆರ್​ಸಿ ರಿನ್ಯೂ ಮಾಡಲು ನೀವು 5 ಸಾವಿರ ರೂಪಾಯಿವರೆಗೆ ಪಾವತಿ ಮಾಡಬೇಕಾಗಿ …

Read More »

ಹಳೆ ವಾಹನಗಳು ಗುಜರಿಗೆ! ನೂತನ ಗುಜರಿ ನೀತಿ ಪ್ರಕಟಿಸಿದ ಸಚಿವ ನಿತಿನ್‌ ಗಡ್ಕರಿ

ಹೊಸದಿಲ್ಲಿ : ಹದಿನೈದು ವರ್ಷ ಹಳೆಯ ವಾಣಿಜ್ಯ ಮತ್ತು 20 ವರ್ಷ ಹಳೆಯ ವೈಯಕ್ತಿಕ ಬಳಕೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿ ವೇಳೆ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಇದು ಕೇಂದ್ರ ಸರಕಾರದ ಹೊಸ ಗುಜರಿ ನೀತಿಯ ಪ್ರಮುಖ ಅಂಶ. ಗುರುವಾರ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೊಸ ಗುಜರಿ ನೀತಿ ಪ್ರಕಟಿಸಿದ್ದಾರೆ. ಗುಜರಿ ನೀತಿಯಂತೆ, 20 ವರ್ಷ ಪೂರೈಸಿದ ವೈಯಕ್ತಿಕ ಬಳಕೆಯ ವಾಹನಗಳು …

Read More »

ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಎಂದು ಗೊತ್ತಾಗಲಿದೆ: S.T.ಸೋಮಶೇಖರ್

ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮನೆ ಹಾಳು ಮಾಡಿದ ಮಹಾನ್ ನಾಯಕ‌ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಅದರಲ್ಲಿ ನಾನು ಸಹಾ ಒಬ್ಬ. ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಎಂದು ಗೊತ್ತಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ಮಹಾನ್ ನಾಯಕ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ …

Read More »

ಸಾಹುಕಾರ್ ಸಿಡಿ ಪ್ರಕರಣ; ಪತ್ರಕರ್ತನ ವಿಡಿಯೋ ಮೂಲ ಪತ್ತೆ ಹಚ್ಚಿದ ಎಸ್‌ಐಟಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕಿಂಗ್ ಪಿನ್ ಎಂದೇ ಹೇಳಲಾಗುತ್ತಿರುವ ಮಾಜಿ ಪತ್ರಕರ್ತ ನರೇಶ್ ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋ ಹೇಳಿಕೆಯ ಮೂಲ ಇದೀಗ ಪತ್ತೆಯಾಗಿದೆ. ನಿನ್ನೆ ನರೇಶ್, ಸಿಡಿ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದಲ್ಲಿ ಅನಗತ್ಯವಾಗಿ ನನ್ನನ್ನು ಸಿಲುಕಿಸುವ ಯತ್ನ ನಡೆದಿದೆ ಎಂದು 8 ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿದ್ದರು. ಅಲ್ಲದೇ ರಮೇಶ್ ಜಾರಕಿಹೊಳಿ ಮಾಡಬಾರದ ತಪ್ಪು ಮಾಡಿದ್ದಾರೆ. ಯುವತಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದರು. ಇದೀಗ …

Read More »

ಫೋನೂ ಇಲ್ಲ, ಮೆಸೇಜ್​ ಇಲ್ಲ! ಎಲ್ಲಿರುವೆ?: S.I.T…

ಬೆಂಗಳೂರು: ಫೋನೂ ಇಲ್ಲ; ಮೆಸೇಜ್​ ಇಲ್ಲ! ಎಲ್ಲಿರುವೆ? ಎಂಬಂತಾಗಿದೆ ರಾಜ್ಯ ಪೊಲೀಸರ ಅಸಹಾಯಕತೆ. ಏಕೆಂದರೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಸಚಿವರೊಬ್ಬರ ಲೈಂಗಿಕ ಸಿಡಿ ಪ್ರಕರಣದಲ್ಲಿ ಪ್ರಧಾನ ಪಾತ್ರಧಾರಿ ಎನ್ನಲಾಗಿರುವ ಯುವತಿಯ ಬೆನ್ನು ಹತ್ತಿದ ಎಸ್​ಐಟಿ ಹೈರಾಣಗೊಂಡಿದೆ.. ನೋಟಿಸ್ ಮೇಲೆ ನೋಟಿಸ್ ನೀಡುತ್ತಲೇ ಆ ಕಡೆಯಿಂದ ಮಾತ್ರ ಫೋನೂ ಇಲ್ಲ; ಮೆಸೇಜ್​ ಇಲ್ಲ- ಈ ಮೈಲ್​ ಸಹ ಇಲ್ಲ! ಹಾಗಾಗಿ ಎಸ್​ಐಟಿ ಪೊಲೀಸರು ಎಲ್ಲಿರುವೆ? ಎಂದು ಕುಂತ್ರೂ ನಿಂತ್ರೂ …

Read More »