Breaking News

ನಾಳೆ ಆರ್ ಅಶೋಕ್ ನೇತೃತ್ವದಲ್ಲಿ ಸಭೆ ಲಾಕ್ ಆಗತ್ತಾ ಬೆಂಗಳೂರು …?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಕೂಡ ಸಿಗದ ದುಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಂತೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.   ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ಮಹಾನಗರದ ಎಲ್ಲಾ ಶಾಸಕರು, ಸಂಸದರು, ರಾಜ್ಯ ಸಭಾ ಸದಸ್ಯರು ಹಾಗೂ ಸಚಿವರುಗಳ …

Read More »

ಸತೀಶ್ ಜಾರಕಿಹೊಳಿ ಒಂದು ಲಕ್ಷದಷ್ಟು ಗೆಲುವಿನ ಅಂತರ ಕಾಯ್ದುಕೊಳ್ಳಲಿದ್ದಾರೆ: ಹೆಬ್ಬಾಳಕರ್

ಬೆಳಗಾವಿ – ಶನಿವಾರ ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಕನಿಷ್ಠ 80 ಸಾವಿರದಿಂದ 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಭವಿಷ್ಯ ಹೆಳುವುದಿಲ್ಲ. ಆದರೆ ಕ್ಷೇತ್ರದ ಎಲ್ಲ ಕಡೆಯಿಂದ ಮಾಹಿತಿ ಪಡೆದು ಹೇಳುತ್ತಿದ್ದೇನೆ. ಸತೀಶ್ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೆ ಸಂಶಯವಿಲ್ಲ. ಒಂದು ಲಕ್ಷದಷ್ಟು ಗೆಲುವಿನ ಅಂತರ ಕಾಯ್ದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮತದಾನ …

Read More »

ಮಂಗಳಾ ಅಂಗಡಿ ಗೆಲವು ನಿಶ್ಚಿತ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದೇವೆ. ಮತದಾರರು ಸಹ ಬಿಜೆಪಿ ಜನೋಪಯೋಗಿ …

Read More »

ಎರಡು ಸಲ ವ್ಯಾಕ್ಸಿನ್ ಪಡೆದರೂ ಬಂತು ಕೊರೋನಾ

ಬೆಂಗಳೂರು, ಏಪ್ರಿಲ್ 17: ಕೋವಿಡ್19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮೊದಲ ಸಾಲಿನಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕಾನೂನು ಕ್ರಮ ಜರುಗಿಸುವ ಮೂಲಕ ಕೊರೋನಾ ತಡೆಗಟ್ಟಲು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ, ಪೊಲೀಸರೇ ಕೊರೋನಾ ಸೋಂಕಿನಿಂದ ಬಳಲುವಂತಾಗಿದೆ. ಬೆಂಗಳೂರು ನಗರದ ಎಂಟು ಪೊಲೀಸ್ ವಲಯಗಳಲ್ಲಿ 90 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ …

Read More »

ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ: ಸುನೇತ್ರಾ ಪಂಡಿತ್

ಬೆಂಗಳೂರು: ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಅಂತ ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ. ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಕ್ಕ ಕೋವಿಡ್ ನಿಂದ ಸತ್ತೋದ್ಳು. ಒಂದು ದಿನ ಕೇರ್‍ಲೆಸ್ ಹಾಗೂ ಮಿಸ್ ಗೈಡ್ ಆಗಿದ್ದಕ್ಕೆ ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು. ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ …

Read More »

ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ

ಬೆಂಗಳೂರು: ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಮಲ್ಲಿಕಾರ್ಜುನ್ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ಮತದಾನ ಅರ್ಧ ಮುಗಿದ ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ …

Read More »

ಅಂಚೆ ಮತದಾನ ಮಾಡಿದ ರಮೇಶ್ ಜಾರಕಿಹೊಳಿ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ವೋಟಿಂಗ್

ಬೆಳಗಾವಿ; ಕೊರೊನಾ ಸೋಂಕು ಹಿನ್ನಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಉಪಚುನಾವನೆಯಲ್ಲಿ ಅಂಚೆ ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗ ಕೊರೊನಾ ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಎರಡು ದಿನಗಳ ಹಿಂದೆಯೇ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರಿ ಗೋಕಾಕ್ ನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಮತದಾನ ಮಾಡಿದರು.

Read More »

ನಟ ನಿಖಿಲ್ ಕುಮಾರಸ್ವಾಮಿಗೂ ಕೊರೊನಾ ಪಾಸಿಟಿವ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ನಿಖಿಲ್, ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು …

Read More »

ಸಾಂಸ್ಕೃತಿಕ ನಗರದಲ್ಲಿ ಮೊಳಗಿದ ವಿಜಯ್‌ ಪ್ರಕಾಶ್‌ ʼಜೈ ಹೋʼ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ʻಜೈ ಹೋ. ಜೈ ಹೋ.ʼ, ʻಬೊಂಬೆ ಹೇಳುತೈತೆ. ಮತ್ತೆ ಹೇಳುತೈತೆ.. ನೀನೆ ರಾಜಕುಮಾರʼ ಹಾಡುಗಳು ಮಾರ್ದನಿಸಿದವು. ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ ತಮ್ಮ ಕಂಚಿನ ಕಂಠದಿಂದ ಸುಮಧುರ ಗಾಯನಗಳೊಂದಿಗೆ ಸಂತ ಫಿಲೋಮಿನಾ ಕಾಲೇಜಿನ ಯುವ ಮನಸ್ಸುಗಳನ್ನು ಸಂಗೀತ ಅಲೆಯಲ್ಲಿ ತೇಲಿಸಿದರು. ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎಡಿನ್‌ ಕ್ರಿಕೆಟ್‌ ಪಂದ್ಯಾವಳಿಗಾಗಿ ರೂಪಿಸಿರುವ ವೇದಿಕೆಯು ಈ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಯಿತು. ಕ್ರೀಡೆ ಮತ್ತು …

Read More »

ಬಿಜೆಪಿ ನಾಯಕರು ಆಡಳಿತಕ್ಕಿಂತಲೂ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ,ಕೊರೋನಾ 2ನೇ ಅಲೆಗೆ ಬಿಜೆಪಿ ನಾಯಕರೇ ಕಾರಣ : ಸಿದ್ದರಾಮಯ್

ಬೆಂಗಳೂರು, ಏ.17- ಕೋವಿಡ್ ನಿಯಂತ್ರಣದ ಸಲುವಾಗಿ ಜನರಿಗೆ ಶಿಷ್ಠಾಚಾರವನ್ನು ಬೋಧಿಸುವ ಬಿಜೆಪಿ ನಾಯಕರು ಸಾರ್ವಜನಿಕವಾಗಿ ನಿಯಮಗಳನ್ನು ಏಕೆ ಉಲ್ಲಂಘಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರು ಆಡಳಿತಕ್ಕಿಂತಲೂ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೋವಿಡ್ 2ನೆ ಅಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಪಲ್ಯವನ್ನು ಬಹಿರಂಗಗೊಳಿಸಿದೆ ಎಂದು ಹೇಳಿದ್ದಾರೆ. ಜನ ಕೋವಿಡ್‍ಗೆ ಚಿಕಿತ್ಸೆ ಸಿಗದೆ ಅಸಹಾಯಕರಾಗಿದ್ದಾರೆ. ಮೊದಲ ಹಂತದ ಅಲೆಯಲ್ಲಾದ ಭಾರೀ ಅನಾವುತಗಳಿಂದ ಕೇಂದ್ರ, ರಾಜ್ಯ …

Read More »