Breaking News

ಇಂಡಿಯನ್ ಎಕ್ಸ್ ಪ್ರೆಸ್: ಎನ್ ಜಿ ಓಗೆ ಆಯಂಬುಲೆನ್ಸ್ ದಾನ ನೀಡಿದ ಶಾಸಕ ಅನಿಲ್ ಬೆನಕೆ

ಬೆಳಗಾವಿ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹೆಲ್ಪ್ ಫಾರ್ ನೀಡಿ ಎಂಬ ಎನ್ ಜಿ ಓಗೆ ಆಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಆಗಸ್ಟ್ 31 ರಂದು ಕೋವಿಡ್ ಸ್ಪೆಷಲ್ ವರ್ಕರ್, ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ವೇಳೆ ಎನ್ ಜಿ ಕಾರ್ಯಕರ್ತ ಸುರೇಂದತ್ರ ಅಂಗೋಲ್ಕರ್ ಆಯಂಬುಲೆನ್ಸ್ ಬೇಕೆಂದು ಮನವಿ ಮಾಡಿದ್ದರು. ಶಾಸಕ ಅನಿಲ್ ಬೆನಕೆ ಶಾಸಕರ ನಿಧಿಯನ್ನು …

Read More »

ಗೋಕಾಕ ತಾಲೂಕು ಆಸ್ಪತ್ರೆ ವರ್ತನೆಯ ಖಂಡಿಸಿ : ಕರ್ನಾಟಕ ರಕ್ಷಣಾ ವೇದಿಕೆಯಿಂದ ಮುಷ್ಕರ.

ಗೋಕಾಕನಲ್ಲಿರುವ ಜನ ಪ್ರಸಿದ್ಧ ಆಸ್ಪತ್ರೆ ಅಂದರೆ ಅದು ಗೋಕಾಕ ಸರಕಾರಿ ತಾಲೂಕ ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಕೆಲವು ಡಾಕ್ಟರಗಳು ಮತ್ತು ನರ್ಸಗಳಿಂದ ಅಮಾನವೀಯ ವರ್ತನೆಯಿಂದ ಕಪ್ಪು ಚುಕ್ಕಿ ಆಗಿದೆ ಎಂದರೆ ತಪ್ಪಾಗಲಾರದು. ಅದು ಹೇಗೆಂದರೆ ಕೆಲವು ದಿನಗಳಿಂದ ತಾಲೂಕ ಆಸ್ಪತ್ರೆಯಲ್ಲಿ ಬರುವಂತಹ ತುಂಬು ಗರ್ಭಿಣಿಯರು ತೋರಿಸಿಕೊಳ್ಳಲಿಕ್ಕೆ ಬಂದರೆ ಈ ಡಾಕ್ಟರಗಳು ಮತ್ತು ನರ್ಸಗಳಿಂದ ಅವರಿಗೆ ನರಕಯಾತನೆ ಆಗುವ ಹಾಗೆ ಮಾಡುತ್ತಾರೆ ಎಂದರೆ ತಪ್ಪಾಗಲಾರದು ಮತ್ತು ಆಸ್ಪತ್ರೆಗೆ ಬಂದ ತಕ್ಷಣ …

Read More »

ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊರೊನಾ ಸೋಂಕು

ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆಯಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.  ಇಂದು ಸಚಿವ ಕೆ.ಎಸ್ ಈಶ್ವರಪ್ಪಗೂ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ನನಗೆ ಇಂದು ಕೊರೊನಾ ಸೋಂಕು ದೃಢ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ.  ಸಧ್ಯಕ್ಕೆ ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ …

Read More »

ಅವಧಿ ಮುಗಿದರೂ ಜಾಗ ಖಾಲಿ ಮಾಡದೇ ಜಾಂಡಾ ಹೂಡಿ ಕುಳಿತ ಅಧಿಕಾರಿಗಳು

ಬೆಂಗಳೂರು, ಸೆ.2- ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಮುಗಿದಿದ್ದರೂ ಮಾತೃ ಹುದ್ದೆಗೆ ತೆರಳದೆ ಇನ್ನೂ ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿ ವಿವಿಧ ಇಲಾಖೆಗಳಲ್ಲಿ ಅವಧಿ ಮುಗಿದಿದ್ದರೂ ಐದಾರು ವರ್ಷಗಳಿಂದ ಅದೇ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರಂತೂ ರಾಜಕೀಯ ಪ್ರಭಾವ ಬಳಸಿ ಅದೇ ಹುದ್ದೆಯಲ್ಲಿ ಬಲವಾಗಿ ಬೇರೂರಿರುವ ನಿದರ್ಶನಗಳು ಕೂಡ ಇವೆ. 2013ರ ಸೆಕ್ಷನ್-6ರನ್ವಯ ನಿಯೋಜನೆ ಮೇರೆಗೆ …

Read More »

ಕಾಲಕ್ಕೆ ತಕ್ಕಂತೆ ಆರೋಪ ಮಾಡ್ತಾರೆ ಹೆಚ್.​ಡಿ.ಕೆ; ಜಗದೀಶ್ ಶೆಟ್ಟರ್

ಯಾದಗಿರಿ: ಕಾಲಕ್ಕೆ ತಕ್ಕಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆರೋಪ ಮಾಡ್ತಿದ್ದು, ಇದಕ್ಕೆ ಅರ್ಥವಿಲ್ಲ. ಅವರ ಸರ್ಕಾರ ಡ್ರಗ್ಸ್​ ಮಾಫಿಯಾದಿಂದ ಉರುಳಿದೆ ಎಂದು ಅಂದೇ ಹೇಳಬೇಕಿತ್ತಲ್ಲ, ಇವಾಗ ನೆನಪಾಯ್ತಾ ಅವ್ರಿಗೆ ಎಂದು ಸಚಿವ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ. ಜಿಲ್ಲೆಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಬಣ ಮತ್ತು ಕಾಂಗ್ರೆಸ್​ನ ಕೆಲ ಗುಂಪುಗಳು ತಂತ್ರಗಾರಿಕೆ …

Read More »

ಸಾರ್ವಜನಿಕ ಅಸ್ತಿ ನಾಶ ಮಾಡಿದ ಪಿಎಫ್‌ಐ ಸದಸ್ಯರ ಸ್ವತ್ತು ಮುಟ್ಟುಗೋಲಿಗೆ ಯುಪಿ ಸರ್ಕಾರ ಕ್ರಮ

ಮುಜಪ್ಫರ್‌ನಗರ: ಸಿಎಎ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಸಾರ್ವಜಕ ಅಸ್ತಿ ನಾಶ ಮಾಡಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ನಾಲ್ವರು ಸದಸ್ಯರಿಂದ ನಷ್ಟ ಭರ್ತಿ ಮಾಡಲು ಉತ್ತರಪ್ರದೇಶ ಸರಕಾರ ಕ್ರಮ ಕೈಗೊಂಡಿದೆ. ಡಿಸೆಂಬರ್‌ ತಿಂಗಳಲ್ಲಿ ಉತ್ತರಪ್ರದೇಶದ ಕೈರಾನದಲ್ಲಿ ಸಿಎಎ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಇದರಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟಗೊಂಡಿತ್ತು. ಇದರ ಸಂಪೂರ್ಣ ಮಾಹಿತಿ ಕಲೆಹಾಕಿದ ಪೊಲೀಸರು, ಈಗ ದೊಂಬಿ ಪ್ರಚೋದಕರಿಂದ ನಷ್ಟ ಭರ್ತಿಗೆ ಕ್ರಮ ಕೈಗೊಂಡಿದ್ದಾರೆ. …

Read More »

ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಆತನ ಮೊಬೈಲ್ ತೆಗೆದುಕೊಂಡು ನಾಪತ್ತೆ

ಚಿಕ್ಕಮಗಳೂರು: ಬೆಂಗಳೂರಿನಿಂದ ಬಂದಿದ್ದ ಸ್ನೇಹಿತರ ಜೊತೆ ಈಜಲು ಹೋದ ಯುವಕ ನೀರು ಪಾಲಾಗಿದ್ದಾನೆ. ಆದರೆ ಯುವಕ ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ನೇಹಿತರು ಆತನ ಮೊಬೈಲ್ ತೆಗೆದುಕೊಂಡು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರಿನ ಗ್ರಾಮದಲ್ಲಿ ನಡೆದಿದೆ.   ಅನ್ವಿತ್ (18) ಮೃತ ಯುವಕ. ತಂದೆಯನ್ನ ಕಳೆದುಕೊಂಡಿದ್ದ ಅನ್ವಿತ್ ಅಮ್ಮ-ಅಕ್ಕನಿಗೆ ಆಸರೆಯಾಗಿದ್ದನು. ಅಕ್ಕನನ್ನು ಈತನೇ ಓದಿಸುತ್ತಿದ್ದು, ಬೆಂಗಳೂರಲ್ಲಿ ಬೇಕರಿ ಕೆಲಸ ಮಾಡಿಕೊಂಡಿದ್ದನು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದ ಅನ್ವಿತ್ ಮತ್ತೆ …

Read More »

ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!

ಬೆಂಗಳೂರು  : ರಾಜ್ಯ ಸರ್ಕಾರ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಬಗ್ಗೆ ಮತ್ತೆ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಅಧ್ಯಯನ ನಡೆಸಲು ಹಿರಿಯ ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಖುದ್ದು ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರೇ ಈ ವಿಷಯ ತಿಳಿಸಿದ್ದಾರೆ. ಕಳೆದ ವರ್ಷ ನಾಗೇಶ್‌ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹೊಸ್ತಿಲಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಅದರ ಬಗ್ಗೆ ಸಾಕಷ್ಟುಟೀಕೆ ಟಿಪ್ಪಣಿ ಕೇಳಿಬಂದಿದ್ದರಿಂದ …

Read More »

ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ

ಬೆಳಗಾವಿ: ಕೊರೊನಾ ಬಗ್ಗೆ ಭಯ ಬೇಡ. ಆದರೆ, ಮುಂಜಾಗ್ರತೆ ವಹಿಸಬೇಕು. ಸೋಂಕು ಬಂತೆಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. – ಕೋವಿಡ್‌ನಿಂದ ಗುಣಮುಖರಾದ ರಾಮದುರ್ಗ ತಾಲ್ಲೂಕು ಕಟಕೋಳದ ಯುವಕ ಆನಂದ ಸಿದ್ನಾಳ ಅವರ ಸಲಹೆ ಇದು. ಕೋವಿಡ್ ಗೆದ್ದ ಕಥೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನಾನು ಚಾಲಕ. ಟ್ರಕ್ ಇದೆ. ಲಾಕ್‌ಡೌನ್‌ ಆದ ಸಮಯದಲ್ಲಿ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿತ್ತು. ಲಾಕ್‌ಡೌನ್‌ ತೆರವಾದ ನಂತರ ಕೆಲವು ದಿನ ಊರು ಸುತ್ತಿದೆ. ಹೋದ ಕಡೆಯಲ್ಲಿ …

Read More »

ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …

Read More »