ಉಡುಪಿ: ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕಳ್ಳರು ಮೃತ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ. ಮೇ 17ರಂದು ತಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕೊಲ್ಲೂರಿನ ದಳಿ ಎಂಬಲ್ಲಿ ಕೇರಳಂ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟ ಇನ್ಸುಲೇಟರ್ ವಾಹನವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಫ್ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. …
Read More »ಕಪ್ಪೆ ಚಿಪ್ಪಿಗಾಗಿ ಸಾಗರಕ್ಕಿಳಿದ 8 ಮಂದಿ ಸಾವು; 5 ಲಕ್ಷ ಪರಿಹಾರ ಘೋಷಿಸಿದ ಸಿದ್ದರಾಮಯ್ಯ
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಪ್ಪೆ ಚಿಪ್ಪುಗಳ ತರಲು ಸಮುದ್ರಕ್ಕೆ ಇಳಿದಿದ್ದ ಒಂದೇ ಕುಟುಂಬದ 08 ಮಂದಿ ಸಾವನ್ನಪ್ಪಿದ ಧಾರುಣ ಘಟನೆ ತಟ್ಟೆಹಕ್ಕಲು ಕಡಲ ತೀರದಲ್ಲಿ ಜರುಗಿದೆ. ಸಾಗರ ಅಲೆಗೆ ಕೊಚ್ಚಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನುಳಿದವರಿಗಾಗಿ ಹುಟುಕಾಟ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಮುದ್ರ ಮಟ್ಟದಲ್ಲಿ ನಿರಂತರ ಬಿರುಗಾಳಿ, ಹವಾಮಾನ ಬದಲಾವಣೆಗಳು ಸಂಭವಿಸುತ್ತಿದ್ದು, …
Read More »ಅಥಣಿ : ಈಜಲು ಹೋದ ಬಾಲಕ ನೀರುಪಾಲು, ಮುಂದುವರಿದ ಶೋಧಕಾರ್ಯ..!
ಅಥಣಿ : ಕಲ್ಲಿನ ಕಣಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ಅಥಣಿ ಪಟ್ಟಣದ ಸುಣಗಾರ ಭಟಿ ಹತ್ತಿರ ಶನಿವಾರ ಮುಂಜಾನೆ ನಡೆದಿದೆ. ಸಮರ್ಥ ಅಮೃತ ಪನಾಳಕರ (16) ನೀರುಪಾಲಾದ ಬಾಲಕ. ಗಡದೆ ಎಂಬವರ ಒಡೆತನದ ಕಲ್ಲಿನ ಕಣಿಯಲ್ಲಿ ಸಂಗ್ರಹವಾಗಿದ್ದು ನೀರಿನ ಆಳವನ್ನು ಅರಿಯದೆ ಈಜಲು ಹೋದ ಸಮರ್ಥ ಕಾಲು ಜಾರಿ ನೀರಿಗೆ ಬಿದ್ದು ಅಲ್ಲಿಗೆ ಮುಳುಗಿದ್ದಾನೆ. ಇದನ್ನು ಕಂಡು ಇನ್ನಿಬ್ಬರು ಬಾಲಕರು ಅಲ್ಲಿಂದ ಓಡಿ ಹೋಗಿ ತಮ್ಮ ಸಂಬಂಧಿಕರಿಗೆ …
Read More »ಮುಂಗಾರು ಆಗಮನಕ್ಕೆ ದಿನಗಣನೆ : ರಾಜ್ಯದಲ್ಲಿ ಇನ್ನೆರಡು ದಿನ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು-ನೈಋತ್ಯ ಮುಂಗಾರು ಆರಂಭಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಚೇತರಿಕೆ ಕಂಡಿದೆ. ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಗಳ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಇಂದು ಮತ್ತು ನಾಳೆ ಆರೇಂಜ್ ಅಲರ್ಟ್ ಘೋಷಣೆ ಮಾಡಿದೆ. ಮೇ 26 ಮತ್ತು 27ರಂದು ಯೆಲ್ಲೋ …
Read More »ಬಾಂಗ್ಲಾ ವಲಸಿಗರು ಎಂಬ ಶಂಕೆ: ತನಿಖೆ ನಡೆಸಿ 20 ಜನರನ್ನು ಬಿಟ್ಟು ಕಳುಹಿಸಿದ ಬೆಳಗಾವಿ ಪೊಲೀಸರು
ಬೆಳಗಾವಿ: ಬೆಳಗಾವಿ ನಗರದಲ್ಲಿ ಬಾಂಗ್ಲಾ ಅಕ್ರಮ ನಿವಾಸಿಗಳು ಬಂದಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು 20 ಜನರ ವಿಚಾರಣೆ ನಡೆಸಿದ್ದಾರೆ. ಹುಬ್ಬಳ್ಳಿಯ ಮಾರ್ಗವಾಗಿ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ ಎಂಬ ಮಾಹಿತಿ ಮೇರೆಗೆ 20 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಕಾರ್ಮಿಕರು ತಾವು ಬಾಂಗ್ಲಾದೇಶದವರಲ್ಲ ಎಂದು ಸ್ಪಷ್ಟಪಡಿಸಿದ್ದು, ಭಾರತದ ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದು ಇಲ್ಲಿನ ಶಹಾಪುರದಲ್ಲಿ ಚಿನ್ನದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. …
Read More »ಬಕ್ರೀದ್ ಸಂದರ್ಭದಲ್ಲಿ ಗೋ ಹತ್ಯೆ ತಡೆಯುವಂತೆ ಕಮಿಷನರ್ ಗೆ ಮನವಿ
ಮೇ 28ರಂದು ಬಕ್ರೀದ್ ಹಬ್ಬವಿದ್ದು ಅಂದು ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋ ಹತ್ಯೆ ನಡೆಯುವ ಸಾಧ್ಯತೆ ಇದೆ. ಬೆಳಗಾವಿಯ ಕಂಜರಗಲ್ಲಿ, ಕ್ಯಾಂಪ್ ,ಕಸಾಯಿಗಲ್ಲಿ ಮುಂತಾದ ಕಡೆ ಇವು ಹೆಚ್ಚಾಗಿ ನಡೆಯುತ್ತದೆ. 33 ಕೋಟಿ ದೇವತೆಗಳಿವೆ ಎಂದು ನಂಬಿ ನಾವು ಗೋಮಾತೆಯನ್ನು ಪೂಜಿಸುತ್ತೇವೆ .ಭಾರತವು ಗೋ ಆಧಾರಿತ ಕೃಷಿ ದೇಶವಾಗಿದ್ದು ಗೋ ಹತ್ಯೆಯನ್ನು ತಡೆಯುವುದು ತಡೆಯುವುದು ನಮ್ಮ ಎಲ್ಲರ ಕರ್ತವ್ಯ ಆಗಿದೆ. ಸುಪ್ರೀಮ್ ಕೋರ್ಟಿನ ಆದೇಶ ಸಹಿತ ಇದೆ. ತಮ್ಮ ಸರಹದ್ದಿನಲ್ಲಿ …
Read More »ಸಾಯುವ ಮೊದಲು ಪ್ರಭಾಕರ್ ಕೋರೆಗೆ ವೈದ್ಯ ಕಳುಹಿಸಿದ್ದ ಕೊನೆಯ ಸಂದೇಶ ಏನು..?
ಬೆಳಗಾವಿ : ಕೆಎಲ್‌ಇ ಆಸ್ಪತ್ರೆಯಲ್ಲಿ ಕಳೆದ 40 ವರ್ಷಗಳಿಂದ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ. ದಿನೇಶ್ ಭಟ್ಕಳ್ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿ ನಂತರ ಬೆಳಗಾವಿಯಲ್ಲಿ ನೆಲೆಸಿದ್ದರು. ವಿಪರ್ಯಾಸವೆಂದರೆ ಸಾಯುವ ಮೊದಲು ವೈದ್ಯ ಕೆಎಲ್ಇ ಮಾಜಿ …
Read More »ಸಾಕು ತಾಯಿಯನ್ನೇ ಓಡಿಸಿಕೊಂಡು ಹೋದ ಮಗ ಕಲಿಯುಗದ ಘೋರ ದುರಂತ: ಹೆತ್ತ ತಂದೆಗೆ ದ್ರೋಹ ಬಗೆದು, ಸಾಕು ತಾಯಿಯನ್ನೇ ಮದುವೆಯಾದ ಮಗ!
“ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ” ಅಂತಾರೆ. ಆದರೆ ಹರಿಯಾಣದಲ್ಲಿ ನಡೆದಿರೋ ಈ ಘಟನೆಯನ್ನು ಕೇಳಿದ್ರೆ, ಪ್ರೀತಿಯ ಹೆಸರಲ್ಲಿ ಮನುಷ್ಯ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಲು ಸಾಧ್ಯವೇ? ಸಂಬಂಧಗಳ ಪವಿತ್ರತೆಯೇ ಮಣ್ಣು ಪಾಲಾಯಿತೇ? ಅನಿಸುವುದು ಗ್ಯಾರಂಟಿ. ಇಲ್ಲೊಬ್ಬ ಮಗ, ತನ್ನ ಹೆತ್ತ ತಂದೆಯ ಎರಡನೇ ಪತ್ನಿಯನ್ನೇ (ಸಾಕು ತಾಯಿಯನ್ನು) ಪ್ರೀತಿಸಿ, ಆಕೆಯೊಂದಿಗೆ ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗಿ ಕೋರ್ಟ್‌ನಲ್ಲಿ ಮದುವೆಯಾಗಿದ್ದಾನೆ! ಘಟನೆಯ ಶಾಕಿಂಗ್ ಹಿನ್ನೆಲೆ ಇಲ್ಲಿದೆ: ಈ ಕಟು ಸತ್ಯ ನಡೆದಿರುವುದು ಹರಿಯಾಣದ …
Read More »ಬಾದಾಮಿ ಅಗಸ್ತ್ಯ ಹೊಂಡದಲ್ಲಿ ಈಜಲು ಹೋದ ಯುವಕ ನಾಪತ್ತೆ
ಬಾಗಲಕೋಟೆ: ಜಿಲ್ಲೆಯ ಬಾದಾಮಿ ಪಟ್ಟಣದ ಐತಿಹಾಸಿಕ ಅಗಸ್ತ್ಯ ಹೊಂಡದಲ್ಲಿ ಈಜಲು ಹೋಗಿ 19 ವರ್ಷದ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಾದಾಮಿಯ ಜಯನಗರ ನಿವಾಸಿ ಮನೋಜ್ ಪ್ರಕಾಶ್ ಕಂಬ್ಳೇಕರ್ (19) ನಾಪತ್ತೆಯಾದ ಯುವಕ. ಮನೋಜ್ ಹೊಂಡದ ಬದಿ ತನ್ನ ಬಟ್ಟೆಗಳನ್ನು ಕಳಚಿಟ್ಟು, ಈಜಲು ಹೊಂಡಕ್ಕೆ ಹಾರಿದ್ದಾನೆ ಎನ್ನಲಾಗಿದೆ. ಮನೋಜ್ ನೀರಿನಿಂದ ಮೇಲಕ್ಕೆ ಬರದೇ ಇದ್ದಾಗ ಸಾರ್ವಜನಿಕರು 112 ಪೊಲೀಸ್ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. …
Read More »ವರದಕ್ಷಿಣೆ ಕಿರುಕುಳ ಆರೋಪ – ನೇಣು ಬಿಗಿದು ಕಾನ್‌ಸ್ಟೇಬಲ್ ಪತ್ನಿ ಆತ್ಮಹತ್ಯೆ
ಬೆಂಗಳೂರು: ಪೊಲೀಸ್ ಕ್ವಾರ್ಟಸ್‌ನಲ್ಲೇ ನೇಣುಬಿಗಿದುಕೊಂಡು ಕಾನ್‌ಸ್ಪೇಬಲ್ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ಲಕ್ಷ್ಮೀ ಪ್ರಿಯಾ (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತಳ ತಂದೆ ಕುಮಾರ್ ಆರಾಧ್ಯ ಅವರು ನೀಡಿದ ದೂರಿನ ಮೇರೆಗೆ ಹೆಚ್‌ಎಎಲ್ ಠಾಣೆಯ ಕಾನ್‌ಸ್ಟೇಬಲ್ ರಾಜೇಶ್ ಹಾಗೂ ತಂದೆ-ತಾಯಿ ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. …
Read More »
Laxmi News 24×7