Breaking News

ಗಾಂಜಾ ಪೆಡ್ಲರ್ ಮೇಲೆ ಅತ್ತಿಬೆಲೆ ಪೊಲೀಸರಿಂದ ಫೈರಿಂಗ್; 7 ಕೆ.ಜಿ ಗಾಂಜಾ ಜಪ್ತಿ

Spread the love

ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ’ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​ ಬಂಧಿತ ಆರೋಪಿ ಮಾಲೂರಿನಿಂದ ಆನೇಕಲ್ ಕಡೆ ಗಾಂಜಾ ಸಾಗಿಸುತ್ತಿರುವ ಬಗ್ಗೆ ಬಾತ್ಮೀದಾರರೊಬ್ಬರಿಂದ ಅತ್ತಿಬೆಲೆ ಪೊಲೀಸರಿಗೆ ಖಚಿತ ಮಾಹಿತಿ ದೊರೆಯುತ್ತದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ ಇನ್ಸ್ಪೆಕ್ಟರ್ ಸತೀಶ್ ಪಿಎಸ್‌ಐ ಹರೀಶ್ ರೆಡ್ಡಿ ಮತ್ತು ಮುರುಳಿ ಜೊತೆ ಕಾರ್ಯಾಚರಣೆಗಿಳಿಯುತ್ತಾರೆ. ಮಾಲೂರುನಿಂದ ಸರ್ಜಾಪುರ ಮಾರ್ಗವಾಗಿ ಬಿದರಗುಪ್ಪೆ ಬಳಿ ಅತ್ತಿಬೆಲೆ ಕಡೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಯೂಬ್ ಖಾನ್ ಮೇಲೆ ದಾಳಿ ನಡೆಸುತ್ತಾರೆ.

ಈ ವೇಳೆ ಅಯೂಬ್ ಖಾನ್ ತಪ್ಪಿಸಿಕೊಳ್ಳಲು ಸರ್ಜಾಪುರ ಪಿಎಸ್‌ಐ ಹರೀಶ್ ರೆಡ್ಡಿ ಮತ್ತು ಹೆಡ್ ಕಾನ್ಸ್‌ಟೇಬಲ್ ರವಿ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಾನೆ.

ಶರಣಾಗುವಂತೆ ಇನ್ಸ್ಪೆಕ್ಟರ್ ಸತೀಶ್ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಎಚ್ಚರಿಕೆಗೂ ಜಗ್ಗದೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಬಂಧಿಸಲಾಗಿದ್ದು, 7 ಕೆ ಜಿ ಗಾಂಜಾ ಜಫ್ತಿ ಮಾಡಲಾಗಿದೆ. ಗುಂಡೇಟಿನಿಂದ ಗಾಯಗೊಂಡ ಆಯೂಬ್ ಖಾನ್ ಮತ್ತು ಗಾಯಾಳು ಪಿಎಸ್‌ಐ ಹರೀಶ್ ರೆಡ್ಡಿ, ಹೆಡ್ ಕಾನ್ಸ್‌ಟೇಬಲ್ ರವಿ ಕುಮಾರ್ ಗೆ ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಸದ್ಯ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಯೂಬ್ ಖಾನ್ ಸಹಚರರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.


Spread the love

About Laxminews 24x7

Check Also

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲು ತೂರಾಟ

Spread the loveಕಾರವಾರ: ತಾಲೂಕಿನ ತಲಾಂದ ಸಾರ್ವಜನಿಕ ಗಣೇಶೋತ್ಸವ  ಸಮಿತಿಯ ವತಿಯಿಂದ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಣೇಶ ವಿಸರ್ಜನಾ ಮೆರವಣಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ