Breaking News

ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಮರೆ ಮಾಚುತ್ತಿದೆ:ಸತೀಶ್ ಜಾರಕಿಹೊಳಿ‌

Spread the love

ಬೆಳಗಾವಿ:  ಕೊರೊನಾ ನಿರ್ವಹಣೆ ಬಗ್ಗೆ ಲೆಕ್ಕ ಕೊಡುವ ವಿಚಾರದಲ್ಲಿ ಸರ್ಕಾರ ಮರೆ ಮಾಚುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ‌ ಹೇಳಿದರು.

ಕೋವಿಡ್ ನಿರ್ವಹಣೆಗೆ ಕಾಂಗ್ರೆಸ್ ಕೊಡುಗೆ ಶುನ್ಯ ಎಂಬ ಸಚಿವ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಕೊಡುಗೆ ಏನಿದೆ ಎಂಬುದಕ್ಕೆ ಉದಾಹರಣೆ ನಾನೂ ಸೇರಿ ನಮ್ಮ ಶಾಸಕರೇ ಇದ್ದಾರೆ. ಕೆಪಿಸಿಸಿ ಕೊವಿಡ ನಿರ್ವಹಣೆಯಲ್ಲಿ ತೊಡಗಿಕೊಂಡಿದೆ. ಇದೆಲ್ಲ ಅವರು ಹೇಳುವುದು ಅವಶ್ಯಕತೆಯಿಲ್ಲ. ಲೆಕ್ಕ ಕೊಡಡುವುದನ್ನು ತಪ್ಪಿಸಿಕೊಳ್ಳಲು ಇದೆಲ್ಲಾ ಗಿಮ್ಮಿಕ ಎಂದು ತಿರುಗೇಟು ನೀಡಿದರು. 

ಕೊವಿಡ್ ನಿರ್ವಹಣೆಗೆ ಒಂದೆಡೆ 4 ಸಾವಿರ ಕೋಟಿ ಖರ್ಚಾಗಿದೆ ಅಂತಾರೆ.  ಲೆಕ್ಕ ಕಡಿಮೆ ಕೊಡ್ತಾರೆ, ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.

ಕೋವಿಡ್ ರೋಗಿಗಳಿಗೆ ಕೆಲವು ಜಿಲ್ಲೆಗಳಿಗೆ ಬೆಡ್ ಕೊರತೆವಿದ್ದು ಕಾಂಗ್ರೆಸ್ ಪಕ್ಷ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ, ಇನ್ನೂ ಮಾಡಬೇಕಾಗಿದೆ ಎಂದ ಅವರು ಖಾಸಗಿ ಆಸ್ಪತ್ರೆಗಳ ಮೇಲೆ ನಾವು ಡಿಪೆಂಡ್ ಆಗೋದೇ ಬೇಡ ನಮ್ಮಲ್ಲಿ ಸಾಕಷ್ಟು ಹಾಸ್ಟೆಲ್‌ಗಳಿವೆ ಇದನ್ನ ಬಳಸಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಕೆಲವೆಡೆ ಹೋಬಳಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿದ್ದಾರೆ.ಈಗ ಬೆಳಗಾವಿಯಲ್ಲಿ ಸ್ವಲ್ಪ ರಶ್ ಕಡಿಮೆ ಆಗಿದೆ.  ಬೆಳಗಾವಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೋವಿಡ್ ನಿಂದಲೇ ಮೃತಪಡುತ್ತಿದ್ದಾರೆ ಎಂದು ಹೇಳಕ್ಕಾಗಲ್ಲ..ಕೋವಿಡ್ ಡೆತ್ ರೆಷಿಯೋ ಕಡಿಮೆಯೇ ಇದೆ. ಹೃದಯ ಸಂಬಂಧಿ ಸೇರಿ ಇತರೆ ರೋಗಗಳಿಂದಲೂ ಸಾವನ್ನಪ್ಪುತ್ತಿದ್ದಾರೆ ಎಂದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ