Breaking News
Home / ರಾಜ್ಯ / ಐಪಿಎಲ್ ಹರಾಜು: ದುಬಾರಿ ಮೊತ್ತಕ್ಕೆ ಆರ್ ಸಿಬಿಗೆ ಮಾರಾಟವಾದ ಮ್ಯಾಕ್ಸ್ ವೆಲ್

ಐಪಿಎಲ್ ಹರಾಜು: ದುಬಾರಿ ಮೊತ್ತಕ್ಕೆ ಆರ್ ಸಿಬಿಗೆ ಮಾರಾಟವಾದ ಮ್ಯಾಕ್ಸ್ ವೆಲ್

Spread the love

ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಗಾಗಿ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ತಂಡದಲ್ಲಿ ಖಾಲಿ ಇರುವ ಕೆಲ ಸ್ಥಾನಗಳಿಗಾಗಿ ಎಂಟು ತಂಡಗಳು ಆಟಗಾರರನ್ನು ಆಯ್ಕೆ ಮಾಡುತ್ತಿವೆ.

ಕಳೆದ ಕೆಲವು ಸೀಸನ್ ನಲ್ಲಿ ಪಂಜಾಬ್ ವಿರುದ್ಧ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಭಾರಿ ಮೊತ್ತಕ್ಕೆ ಹರಾಜಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲಿ ಬಿಡ್ಡಿಂಗ್ ಆರಂಭಿಸಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿಗಿಳಿದವು.

ಎರಡು ಕೋಟಿ ರೂ. ಮೂಲ ಬೆಲೆಯ ಮ್ಯಾಕ್ಸ್ ವೆಲ್ ಅಂತಿಮವಾಗಿ ವಿರಾಟ್ ನಾಯಕತ್ವದ ಆರ್ ಸಿಬಿ ಗೆ ಬರೋಬ್ಬರಿ 14.25 ಕೋಟಿ ರೂ. ಗೆ ಮಾರಾಟವಾದರು.

ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ರೂ. ಗೆ ಖರೀದಿಸಿತು.

ಉಳಿದಂತೆ ಶಕೀಬ್ ಅಲ್ ಹಸನ್ ಅವರು 3.2 ಕೋಟಿ. ರೂ ಗೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾದರು.

ಕಳೆದ ಬಾರಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಅವರನ್ನು 2.20 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.

ಆರೋನ್ ಫಿಂಚ್, ಕರುಣ್ ನಾಯರ್, ಜೇಸನ್ ರಾಯ್, ಅಲೆಕ್ಸ್ ಹೇಲ್ಸ್ ಮೊದಲ ಹಂತದಲ್ಲಿ ಮಾರಾಟವಾಗದೆ ಉಳಿದರು.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ