Breaking News

ಆನ್ ಲೈನ್ ಜೂಜಾಟ: ಸಂಪುಟ ನಿರ್ಧಾರ ಕೇಳಿದ ಹೈಕೋರ್ಟ್

Spread the love

ಬೆಂಗಳೂರು: ಆನ್ ಲೈನ್ ಜೂಜಾಟ ನಿಲ್ಲಿಸಬೇಕು ಎಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಈ ಬಗ್ಗೆ ರಾಜ್ಯ ಸಚಿವ ಸಂಪುಟ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಶ್ನಿಸಿದೆ.

ಸಚಿವ ಸಂಪುಟವು ತೆಗೆದುಕೊಳ್ಳುವ ನಿರ್ಧಾರವನ್ನು ಕೋರ್ಟ್ ಮುಂದೆ ದಾಖಲಿಸಬೇಕು ಎಂದು ಆನ್ ಲೈನ್ ಬೆಟ್ಟಿಂಗ್ ವಿಷಯವನ್ನು ಸಂಪುಟದ ಮುಂದೆ ಇಡಲಾಗಿದೆ ಮತ್ತು ಇದರ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ನ್ಯಾಯಪೀಠಕ್ಕೆ ಸರ್ಕಾರ ಪರ ವಕೀಲರು ತಿಳಿಸಿದರು.

ಸೂಕ್ತ ನಿಯಮಾವಳಿ ರೂಪಿಸುವ ತನಕ ಆನ್ ಲೈನ್ ಜೂಜಾಟ ನಿಲ್ಲಿಸಬೇಕು ಎಂದು ದಾವಣಗೆರೆ ನಿವಾಸಿ ಡಿ.ಆರ್. ಶಾರದಾ ಅವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.


Spread the love

About Laxminews 24x7

Check Also

ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಪರ್ಸ್ ಸಿಕ್ಕಿದೆ

Spread the loveಕುಮಟಾ: ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನದ ಉಂಗುರ ಹಾಗೂ ಹಣವಿರುವ ಪರ್ಸ್ ಒಂದು ಸಾರಿಗೆ ಸಂಸ್ಥೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ