Home / Uncategorized / ಚಹಾ, ಯೋಗದ ಮೇಲೂ ಸಂಚು: ನರೇಂದ್ರ ಮೋದಿ ಟೀಕೆ

ಚಹಾ, ಯೋಗದ ಮೇಲೂ ಸಂಚು: ನರೇಂದ್ರ ಮೋದಿ ಟೀಕೆ

Spread the love

ಸೋನಿತ್‌ಪುರ : ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾ, ಯೋಗವನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.

ಈ ಮೂಲಕ ಸ್ವೀಡಿಶ್‌ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಟ್ವೀಟ್‌ ಮಾಡಿದ್ದ ವಿವಾದಿತ ಟೂಲ್‌ಕಿಟ್‌ ಬಗ್ಗೆ ಪ್ರಧಾನಿ ಇದೇ ಮೊದಲ ಬಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ಸೋನಿತ್‌ಪುರದಲ್ಲಿ ಮಾತನಾಡಿ, ವಿವಾದಿತ ಟೂಲ್‌ಕಿಟ್‌ನಲ್ಲಿ ನಮ್ಮ ಚಹಾ, ಯೋಗಾ ವಿರುದ್ಧವೂ ಅಪಪ್ರಚಾರ ಮಾಡುವ ಸಂಚಿತ್ತು ಎನ್ನುವುದನ್ನು ದಿಲ್ಲಿ ಪೊಲೀಸರು ಇತ್ತೀಚೆಗಷ್ಟೇ ಹೇಳಿದ್ದರು ಎಂದರು.

ಗ್ರೆಟಾ ಹೆಸರು ಪ್ರಸ್ತಾವಿಸದೆಯೇ ಭಾರತೀಯ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿರುವ ಚಹಾಕ್ಕೂ ಕಪ್ಪು ಮಸಿ ಬಳಿಯಲು ಪಿತೂರಿ ನಡೆದಿದೆ. ಚಹಾ ತೋಟದ ಕಾರ್ಮಿಕರು ಈ ಅಸಹಿಷ್ಣು ದಾಳಿಯನ್ನು ಸಹಿಸಿಕೊಳ್ಳಲಾರರು. ಅವರು ಖಂಡಿತ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ಚಹಾದಲ್ಲಿ ಕೀಟನಾಶಕದ ಅಂಶ ಅಧಿಕವಿದೆ ಎಂದು ಗ್ರೀನ್‌ಪೀಸ್‌ ಎನ್ಜಿಒ ಇತ್ತೀಚೆಗೆ ಮಾಡಿದ್ದ ಆರೋಪಕ್ಕೂ ಪ್ರಧಾನಿ ಈ ಮಾತುಗಳಿಂದ ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಗಾಯಕ್ಕೆ ನಮ್ಮಿಂದ್ಲೆ ಬ್ಯಾಂಡೇಜ್‌ ಮಾಡಿಸ್ತಾರ್ರೀ…

Spread the love ಹುಬ್ಬಳ್ಳಿ: ರಕ್ತ ಪರೀಕ್ಷೆಗೆ ಹಣ ಕೇಳ್ತಾರ, ನಮ್ಮಿಂದ್ಲೆ ಗಾಯಕ್ಕೆ ಬ್ಯಾಂಡೇಜ್‌ ಮಾಡಿಸ್ತಾರ, ಔಷಧಿಗಳನ್ನು ಹೊರಗಡೆಯಿಂದ ತರಾಕ ಹೇಳ್ತಾರ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ