Breaking News
Home / ಜಿಲ್ಲೆ / ಬೆಂಗಳೂರು / ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

Spread the love

ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗ್ತಿಲ್ಲ. ದೇಶಾದ್ಯಂತ 3 ದಿನದಲ್ಲಿ 4,54,049 ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ. 580 ಜನರಲ್ಲಿ ಅಡ್ಡಪರಿಣಾಮವಾಗಿದ್ದು, 7 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇವತ್ತು 32,205 ಗುರಿ ಪೈಕಿ 15,223 ಹೆಲ್ತ್ ವರ್ಕರ್ಸ್ ಗೆ ಲಸಿಕೆ ನೀಡಲಾಗಿದೆ. ಹೀಗಾಗಿ 4 ದಿನದಲ್ಲಿ ಒಟ್ಟು 70,723 ಮಂದಿಗೆ ಲಸಿಕೆ ಚುಚ್ಚುಮದ್ದು ನೀಡಲಾಗಿದೆ. ಆದರೆ 1,08,922 ಲಕ್ಷ ಗುರಿ ರೀಚ್ ಕಷ್ಟವಾಗ್ತಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರೋ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಸಹಜ. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಕೋವಿಡ್ ಲಸಿಕೆ ವಿತರಣೆ ಆಗಿದೆ ಆಗಿದೆ ಅಂತ ಹೇಳಿದ್ದಾರೆ.

3 ದಿನಗಳಿಂದ ಟಾರ್ಗೆಟ್ ರೀಚ್ ಆಗದ ಕಾರಣ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಟಾರ್ಗೆಟ್ ತಲುಪಲು, ತಜ್ಞರು 2 ತಿಂಗಳ ಡೆಡ್‍ಲೈನ್ ಸಲಹೆ ನೀಡಿದ್ದಾರೆ. 2ನೇ ಅಲೆಯ ಹೆಚ್ಚಾಗೋಕೆ ಮುನ್ನ ದೇಶದ ಅರ್ಧದಷ್ಟು ಜನರಿಗೆ ವ್ಯಾಕ್ಸಿನ್ ಕೊಡೋದು ಕ್ಷೇಮ ಅಂದಿದ್ದಾರೆ.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ