ಟಿಎಪಿಸಿಎಂಎಸ್ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಶ್ರೀಶೈಲ ಮಾಟೋಳ್ಳಿ ಆಯ್ಕೆ
ಖಾನಾಪುರ ಟಿ ಎ ಪಿ ಸಿ ಎಂ ಎಸ್
ಶ್ರೀಶೈಲ ಮಾಟೋಳ್ಳಿ ಅಧ್ಯಕ್ಷ, ಸಂಗಪ್ಪ ಬಾಚೋಳ್ಕರ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಲಿಂಗನಮಠದ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮಾಟೋಳ್ಳಿಗೆ ನಂದಗಡ ಟಿಎಪಿಸಿಎಂಎಸ್ ಜವಾಬ್ದಾರಿ.
ನೂತನ ಅಧ್ಯಕ್ಷ-ಉಪಾಧ್ಯಕ್ಷರೊಂದಿಗೆ ಸಹಕರಿಸುವ ಭರವಸೆ ನೀಡಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ.
ಖಾನಾಪೂರ ತಾಲೂಕಿನ ನಂದಗಡದಲ್ಲಿ ಇರುವ ಟಿಎಪಿಸಿಎಂಎಸ್ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾಗಿ ಶ್ರೀಶೈಲ ಮಾಟೋಳ್ಳಿ ಮತ್ತು ಉಪಾಧ್ಯಕ್ಷರಾಗಿ ಸಂಗಪ್ಪ ಬಾಚೋಳ್ಕರ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ
ಈ ಸಂದರ್ಭದಲ್ಲಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಜಿ ಶಾಸಕ ಅರವಿಂದ ಪಾಟೀಲರು ಲಿಂಗನಮಠ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಶ್ರೀಶೈಲ ಮಾಟೋಳ್ಳಿ ಮತ್ತು ಉಪಾಧ್ಯಕ್ಷರಾಗಿ ಸಂಗಪ್ಪ ಬಾಚೋಳ್ಕರ್ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಲ್ಲರೊಂದಿಗೆ ಸಹಕರಿಸಿ ವಿಶ್ವಾಸದೊಂದಿಗೆ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯನ್ನು ಮುನ್ನಡೆಸಿಕೊಂಡು ಹೋಗುವ ವಿಶ್ವಾಸ ವ್ಯಕ್ತಪಡಿಸಿ ತಾವು ಕೂಡಾ ಅವರೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಸರ್ವ ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾದ ಜಿತೇಂದ್ರ ಮಾದಾರ, ರಫೀಕ್ ನಜೀರ್ ಸಾಬ್ ಹಲಶೀಕರ,ಉದಯ ಪಾಟೀಲ್, ಜ್ಯೋತಿಬಾ ಭರಮಪ್ಪನ್ನವರ, ದಾಮೋದರ್ ನಾಖಾಡಿ,ತೇಜಸ್ವಿನಿ ಹೊಸಮನಿ, ಪಾರ್ವತಿ ಪಾಟೀಲ್, ಮಹಾರುದ್ರಯ್ಯ ಹಿರೇಮಠ, ಪ್ರಕಾಶ್ ಗಾವಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Laxmi News 24×7