30 ವರ್ಷದ ಬಳಿಕ ನಡೆಯಲಿರುವ ಮುಚ್ಚಂಡಿ ದೇವಿಯರ ಜಾತ್ರೆ
ದೇವಿಯರನ್ನು ಬಣಗಾರರ ಮನೆಗೆ ಕಳುಹಿಸಲು ವಿಜೃಂಭಣೆಯ ಮೆರವಣಿಗೆ
30 ವರ್ಷದ ಬಳಿಕ ನಡೆಯಲಿರುವ ಮುಚ್ಚಂಡಿ ದೇವಿಯರ ಜಾತ್ರೆ
ದೇವಿಯರನ್ನು ಬಣಗಾರರ ಮನೆಗೆ ಕಳುಹಿಸಲು ವಿಜೃಂಭಣೆಯ ಮೆರವಣಿಗೆ
ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿ ದೇವಿಯ ಜಾತ್ರೆ
ಧಾರ್ಮಿಕ ವಿಧಾನಗಳೊಂದಿಗೆ ತುಂಬಲಾಯಿತು ದೇವಿಯರ ಉಡಿ
ಸುಮಾರು 30 ವರ್ಷಗಳ ಬಳಿಕ ಮೇ 12, 2026 ರಂದು ನಡೆಯಲಿರುವ ಬೆಳಗಾವಿ ತಾಲೂಕಿನ ಮುಚ್ಚಂಡಿಯ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಹಿನ್ನೆಲೆ ಮೆರವಣಿಗೆಯ ಮೂಲಕ ಶ್ರೀದೇವಿಯ ಮೂರ್ತಿಗಳನ್ನು ಬಣ್ಣಕ್ಕಾಗಿ ಬಣಗಾರರ ಮನೆಗೆ ಕಳುಹಿಸುವ ಕಾರ್ಯಕ್ರಮ ನಡೆಯಿತು.
ಬೆಳಗಾವಿ ತಾಲೂಕಿನ ಮುಚ್ಚಂಡಿಯ ಗ್ರಾಮದೇವಿಯರಾದ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿದೇವಿಯ ಜಾತ್ರಾ ಮಹೋತ್ಸವವು ಸುಮಾರು 30 ವರ್ಷಗಳ ಬಳಿಕ ಮೇ.12 ರಿಂದ ಆರಂಭಗೊಳ್ಳಲಿದೆ. 9 ದಿನಗಳ ಕಾಲ ನಡೆಯುವ ಈ ಉತ್ಸವವು ಸಂಪೂರ್ಣ ಶಾಕಾಹಾರಿಯಾಗಿರಲಿದೆ. ಈ ಹಿನ್ನೆಲೆ ದೇವಿಯ ಮೂರ್ತಿಗಳ ಬಣ್ಣದ ಕಾರ್ಯಕ್ಕಾಗಿ ಬಣಗಾರರ ಮನೆಗೆ ಕಳುಹಿಸುವ ಕಾರ್ಯ ಅತ್ಯಂತ ಭಕ್ತಿಭಾವದಲ್ಲಿ ನಡೆಯಿತು. ಗ್ರಾಮದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಿತು.
ಸುಮಾರು 30 ವರ್ಷದ ಬಳಿಕ ಮುಚ್ಚಂಡಿಯ ಗ್ರಾಮದೇವತೆಯರಾದ ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಮರಗಾಯಿ ದೇವಿಯ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದೀಪಾವಳಿಯ ನಿಮಿತ್ಯ ದೇವಿಯರ ಮೂರ್ತಿಯನ್ನು ಬಣ್ಣಕ್ಕಾಗಿ ಕಳುಹಿಸಲಾಯಿತು. ಈ ಹಿನ್ನೆಲೆ ಹಕ್ಕುದಾರರಿಂದ ಉಡಿ ತುಂಬುವ ಕಾರ್ಯಕ್ರಮ, ಭವ್ಯ ಮೆರವಣಿಗೆ ನಡೆಸಲಾಯಿತು ಎಂದು ಗ್ರಾಮದ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಿದ್ಧರು.
Laxmi News 24×7