Breaking News

ಭತ್ತ ಬೆಳೆಯುವ ಕೃಷಿಕರಿಗೆ ಯೂರಿಯಾ ಅಲಭ್ಯ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತ ಮುಖಂಡ ರಾಜು ಮರವೆ ನೇತೃತ್ವದಲ್ಲಿ ರೈತರ ಪ್ರತಿಭಟನೆ!!

Spread the love

ಭತ್ತ ಬೆಳೆಯುವ ಕೃಷಿಕರಿಗೆ ಯೂರಿಯಾ ಅಲಭ್ಯ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತ ಮುಖಂಡ ರಾಜು ಮರವೆ ನೇತೃತ್ವದಲ್ಲಿ ರೈತರ ಪ್ರತಿಭಟನೆ!!
ಭತ್ತ ಬೆಳೆಯುವ ಕೃಷಿಕರಿಗೆ ಯೂರಿಯಾ ಅಲಭ್ಯ ರೈತರ ಸಂಕಷ್ಟ
ಗೊಬ್ಬರ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟದ ಆರೋಪ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತರ ಪ್ರತಿಭಟನೆ
ಬೆಳಗಾವಿ ಶಹರ ಮತ್ತು ಸುತ್ತ ಮುತ್ತಲ್ಲಿನ ಗ್ರಾಮೀಣ ಭಾಗದ ರೈತರು ಭಾಗಿ
ಭತ್ತ ಬೆಳೆಯುವ ಕೃಷಿಕರಿಗೆ ಮಾರುಕಟ್ಟೆಯಲ್ಲಿ ಯೂರಿಯಾ ಅಲಭ್ಯವಾದ ಹಿನ್ನಲ್ಲೆಯಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಮಾರುಕಟ್ಟೆಯಲ್ಲಿ ಯೂರಿಯಾ ಕೃಷಿಕರಿಗೆ ದೊರೆಯುತ್ತಿಲ್ಲ. ಗೊಬ್ಬರ ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ್ದ ರೈತರಿಗೆ ಹೊರೆಯಾಗುತ್ತಿದೆ. ಭತ್ತ ಬೆಳೆಯುವ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ ಸೋಮವಾರ ಬೆಳಗಾವಿ ಶಹರ ಮತ್ತು ಸುತ್ತ ಮುತ್ತಲ್ಲಿನ ಗ್ರಾಮೀಣ ಭಾಗದ ರೈತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಸಕಾಲದಲ್ಲಿ ಯೂರಿಯಾ ಲಭ್ಯವಾಗುವಂತ್ತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ರಾಜು ಮರವೆ ಮಾತನಾಡಿ, ಬೆಳಗಾವಿ ಶಹರ ಮತ್ತು ಸುತ್ತ ಮುತ್ತಲ್ಲಿನ ಗ್ರಾಮೀಣ ಭಾಗದಲ್ಲಿ ರೈತರು ಮೇ ತಿಂಗಳಲ್ಲಿ ಭತ್ತ ನಾಟಿ ಮಾಡಿದ್ದರು, ನಂತರ ಅತಿವೃಷ್ಠಿಯಿಂದಾಗಿ ನಾಟಿ ಮಾಡಿದ ಭತ್ತ ಹಾಳಾಗಿ ಹೋಗಿದೆ. ಮತ್ತೆ ಪುನಃ ಭತ್ತ ನಾಟಿ ಮಾಡಲಾಗಿದೆ. ಈಗ ಭತ್ತ ಎತ್ತರವಾಗಿ ಬೆಳೆಯಲು ಯೂರಿಯಾ ಅವಶ್ಯಕತೆವಿದೆ.
ಆದರೆ ಮಾರುಕಟ್ಟೆಯಲ್ಲಿ ಯೂರಿಯಾ ಅಲಭ್ಯಯತೆಯಿಂದ ಕೆಲವೊಂದು ಗೊಬ್ಬರ ಮಾರಾಟಗಾರರು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ್ದ ರೈತರಿಗೆ ಹೊರೆಯಾಗುತ್ತಿದೆ. ಭತ್ತ ಬೆಳೆಯುವ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ