Breaking News

ದಿವಂಗತ ನಿಶಾ ಛಾಬ್ರಿಯಾ ಅವರ ಪ್ರೇರಣಾದಾಯಿ ಜೀವನದ ಆದರ್ಶಗಳನ್ನು ಮುಂದಿಟ್ಟುಕೊಂಡು, ಅವರ ಜನ್ಮದಿನದ ಅಂಗವಾಗಿ ಬಡ ಪ್ರತಿಭಾನ್ವಿತ ಮಕ್ಕಳ ಕನಸನ್ನು ನನಸಾಗಿಸಲು ಸಹಾಯ ಹಸ್ತವನ್ನು ಚಾಚುವ ಉಪಕ್ರಮವನ್ನು ಇಂದು ಕೈಗೊಳ್ಳಲಾಯಿತು.

Spread the love

ದಿವಂಗತ ನಿಶಾ ಛಾಬ್ರಿಯಾ ಅವರ ಪ್ರೇರಣಾದಾಯಿ ಜೀವನದ ಆದರ್ಶಗಳನ್ನು ಮುಂದಿಟ್ಟುಕೊಂಡು, ಅವರ ಜನ್ಮದಿನದ ಅಂಗವಾಗಿ ಬಡ ಪ್ರತಿಭಾನ್ವಿತ ಮಕ್ಕಳ ಕನಸನ್ನು ನನಸಾಗಿಸಲು ಸಹಾಯ ಹಸ್ತವನ್ನು ಚಾಚುವ ಉಪಕ್ರಮವನ್ನು ಇಂದು ಕೈಗೊಳ್ಳಲಾಯಿತು.
ಬೆಳಗಾವಿಯ ಅನಗೋಳದಲ್ಲಿರುವ ಸಂತ ಮೀರಾ ಶಾಲೆಯಲ್ಲಿ ಬೆಲಗಾಮ್ ಟ್ಯಾಜೆಂಟ್, ಫ್ರೋಟಿ ವನ್ನರ್ಸ್ ಕ್ಲಬ್ ಆಫ್ ಬೆಲಗಾಮ್-125 ಬೆಲಗಾಮ್ ರೌಂಡ್ ಟೇಬಲ್ -119, ಬೆಲಗಾಮ್ ಚಾಲೆಂಜರ್ಸ್ ಲೇಡಿಜ್ ಸರ್ಕಲ್- 208 ಸಹಯೋಗದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಶೈಕ್ಷಣಿಕ ವಸ್ತುಗಳನ್ನು ವಿತರಿಸಲಾಯಿತು.
ಚೇರಪರ್ಸನ ರೇಷ್ಮಾ ತಲ್ರೇಜಾ ಮತ್ತು ಅಧ್ಯಕ್ಷ ಮನೋಜ್ ತಲರೇಜಾ ಮುಖ್ಯ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಹೆಡ ಮಾಸ್ಟರ್ ಸುಜಾತಾ ದಫ್ತರದಾರ, ವೈಸ್ ಹೆಡ ಮಾಸ್ಟರ್ ಋತುಜಾ ಜಾಧವ್, ಪ್ರೇರಣಾ ಘಾಟಗೆ, ಮೀನಲ್ ರಾಯಬಾಗ, ತೇಜಸ್ವೀನಿ ಸಾಹೂಕಾರ, ಸಂಗೀತಾ ಚಿಂಡಕ್, ನಿಕೀತಾ ದೇಸಾಯಿ, ಇನ್ನುಳಿದವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಶೈಕ್ಷಣಿಕ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚೇರಪರ್ಸನ ರೇಷ್ಮಾ ತಲ್ರೇಜಾ ಅವರು ಇಂದು ನಿಶಾ ಛಾಬ್ರಿಯಾ ಅವರ ಜನ್ಮದಿನವನ್ನು ಅವರು ಕನಸಿನ ಯೋಜನೆಗಳನ್ನು ಪೂರ್ಣಗೊಳಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಿಶಾ ಛಾಬ್ರಿಯಾ ಸದಾ ಬಡ ಪ್ರತಿಭಾನ್ವಿತ ಮಕ್ಕಳಿಗೆ ಸಹಾಯವನ್ನು ಮಾಡುತ್ತಿದ್ದರು. ಅವರ ಈ ಉಪಕ್ರಮವನ್ನು ಮುಂದುವರೆಸಲಾಗುತ್ತಿದೆ ಎಂದರು.
ಇನ್ನು ಪ್ರಾಚಾರ್ಯರಾದ ಸುಜಾತಾ ಧಪ್ತರದಾರ ಅವರು, ತ್ರಿಪುರಾದಲ್ಲಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬೆಳಗಾವಿ ಆರ್ಷ ಕೇಂದ್ರದಲ್ಲಿ ಉಳಿದು, ಬೆಳಗಾವಿ ಸಂತ ಮೀರಾ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇವರಿಗೆ ಸಹಾಯದ ಹಸ್ತವನ್ನು ಚಾಚಲು ಕೈಗೊಂಡ ಈ ಉಪಕ್ರಮ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ದಾನಿಗಳು ನೀಡಿದ ಸಹಾಯದ ಸದುಪಯೋಗ ಪಡೆದು, ಉತ್ತಮ ಶಿಕ್ಷಣ ಪಡೆದು, ಸಮೃದ್ಧ ಭಾರತ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ