Breaking News

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the love

ಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ ಅವರ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್​ಗೆ ತಲಾ 10 ವರ್ಷಗಳವರೆಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಪ್ರಕರಣ ಹಿನ್ನೆಲೆ: 11 ಜೂನ್ 2021 ರಂದು ರಾತ್ರಿ ಅಂಕುಶ್​ ಕೊಲೆಗೆ ಯತ್ನ ನಡೆದಿತ್ತು‌. ಅಂಕುಶ್​ ಪತ್ನಿ ಗಣೇಶ್ ಎಂಬಾತನಿಗೆ 30 ಸಾವಿರ ಹಣ ನೀಡುವುದಾಗಿ ಹೇಳಿ ಪತಿಯ ಕೊಲೆಗೆ ಸುಪಾರಿ ನೀಡಿದ್ದಳು. ಗಣೇಶ್ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ, ಗಾಂವಠಾಣದಲ್ಲಿನ ಅಂಕುಶ್​ ಸುತಾರ ಮನೆಯನ್ನು ಹಿಂಬಾಗಿಲಿನಿಂದ ಪ್ರವೇಶಿಸಿ, ಅಂಕುಶ್​ ಅವರ ಎದೆಯ ಮೇಲೆ ಕುಳಿತು ಕುತ್ತಿಗೆಗೆ ಕೈ ಹಾಕಿ, ಸಾಯಿಸಲು ಪ್ರಯತ್ನಿಸಿದ್ದ.

ಆಗ ಎಚ್ಚರವಾದ ಅಂಕುಶ್​ ಗಣೇಶ್​​ನನ್ನು ತಳ್ಳಿ, ಬೊಬ್ಬೆ ಹಾಕಿದ್ದರು. ಆಗ ಗಣೇಶ್ ಪರಾರಿಯಾಗಿದ್ದ. ಆರೋಪಿಗಳನ್ನು ನಾಕಾಬಂಧಿ ಮಾಡಿ ಹಿಡಿಯಲಾಗಿತ್ತು. ಕೋರ್ಟ್​ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆ ಮೊದಲ ಆರೋಪಿ ಗಣೇಶ್ ಶಾಂತಾರಾಮ ಪಾಟೀಲ್ ಹಾಗೂ ಸುಪಾರಿ ಕೊಟ್ಟ ಪತ್ನಿ ತೇಜಸ್ವಿನಿಗೆ ತಲಾ ಹತ್ತು ವರ್ಷ ಶಿಕ್ಷೆ ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶ ಕಿರಣ್ ಕಿಣಿ ಆದೇಶ ಹೊರಡಿಸಿದ್ದಾರೆ.ಪಿಎಸ್​ಐ ಗಡ್ಡೇಕರ್ ಪ್ರಕರಣ ದಾಖಲಿಸಿ, ತನಿಖೆ ಮಾಡಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗೀಕರ್ ವಾದಿಸಿದ್ದರು‌.


Spread the love

About Laxminews 24x7

Check Also

ರಾಜ್ಯದಲ್ಲಿ ಬಾಲ್ಯ ವಿವಾಹ ಕಡಿವಾಣಕ್ಕೆ ಕಠಿಣ ಮಸೂದೆ: ಬಾಲ್ಯ ವಿವಾಹಕ್ಕೆ ಪ್ರಯತ್ನ, ನಿಶ್ಚಿತಾರ್ಥವೂ ಅಪರಾಧ; ಏನೆಲ್ಲಾ ಶಿಕ್ಷೆ, ದಂಡ?

Spread the loveಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದ ಪ್ರಮಾಣ ವರ್ಷಂಪ್ರತಿ ಹೆಚ್ಚುತ್ತಲೇ ಇದೆ.‌ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ