ನವದೆಹಲಿ, ಮೇ 21: ಜಗತ್ತಿನ ಮುಂದೆ ಪಾಕಿಸ್ತಾನ(Pakistan)ದ ಬಂಡವಾಳ ಬಯಲು ಮಾಡಲು ಕೇಂದ್ರ ಸರ್ಕಾರವು 59 ಸದಸ್ಯರ ನಿಯೋಗವನ್ನು ಇಂದು ಪ್ರಪಂಚದಾದ್ಯಂತ ಕಳುಹಿಸಲಿದೆ. ಸರ್ವಪಕ್ಷ ಸಂಸದರ 7 ನಿಯೋಗಗಳನ್ನು ರಚಿಸಲಾಗಿದೆ. ಇದರಲ್ಲಿ 10 ಮುಸ್ಲಿಂ ನಾಯಕರನ್ನು ಸಹ ಇರಿಸಲಾಗದೆ. ನಿಯೋಗದಲ್ಲಿ 51 ನಾಯಕರು ಮತ್ತು 8 ರಾಯಭಾರಿಗಳು ಸೇರಿದ್ದಾರೆ. ಎನ್‌ಡಿಎ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಅದರಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ನಿಯೋಗ ಬುಧವಾರ (ಮೇ 21) ಹೊರಡಲಿದೆ.
ನಿಯೋಗವನ್ನು 7 ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿಗೆ ಒಬ್ಬ ನಾಯಕನನ್ನು ಆಯ್ಕೆ ಮಾಡಲಾಗಿದೆ. ಮುಖ್ಯವಾದ ವಿಷಯವೆಂದರೆ ಪ್ರತಿಯೊಂದು ಗುಂಪಿನಲ್ಲಿ ಕನಿಷ್ಠ ಒಬ್ಬ ಮುಸ್ಲಿಂ ನಾಯಕರು ಕೂಡ ಇದ್ದಾರೆ. ಬಿಜೆಪಿ ಸಂಸದ ಬೈಜಯಂತ್ ಪಾಂಡ ಅವರಿಗೆ ಗ್ರೂಪ್ 1 ರ ಜವಾಬ್ದಾರಿ ನೀಡಲಾಗಿದೆ.
ಗ್ರೂಪ್ 2 ರ ಜವಾಬ್ದಾರಿಯನ್ನು ಬಿಜೆಪಿಯ ರವಿಶಂಕರ್ ಪ್ರಸಾದ್ ಅವರಿಗೆ, ಗ್ರೂಪ್ 3 ರ ಜವಾಬ್ದಾರಿಯನ್ನು ಜೆಡಿಯುನ ಸಂಜಯ್ ಕುಮಾರ್ ಝಾ ಅವರಿಗೆ ಮತ್ತು ಗ್ರೂಪ್ 4 ರ ಜವಾಬ್ದಾರಿಯನ್ನು ಶಿವಸೇನೆಯ ಶ್ರೀಕಾಂತ್ ಶಿಂಧೆ ಅವರಿಗೆ ನೀಡಲಾಗಿದೆ. ಗ್ರೂಪ್ 5 ರ ನಾಯಕ ಶಶಿ ತರೂರ್. ಗ್ರೂಪ್ 6 ರ ಜವಾಬ್ದಾರಿಯನ್ನು ಡಿಎಂಕೆ ಸಂಸದ ಕನಿಮೋಳಿಗೆ ಮತ್ತು ಗ್ರೂಪ್ 7 ರ ಜವಾಬ್ದಾರಿಯನ್ನು ಎನ್‌ಸಿಪಿ-ಸಿಎಸ್‌ಪಿ ಸಂಸದೆ ಸುಪ್ರಿಯಾ ಸುಳೆಗೆ ನೀಡಲಾಗಿದೆ.
Laxmi News 24×7