Breaking News

ಯುಗಾದಿಯ ದಿನದಂದೇ ಬಾಗಲಕೋಟೆಯಲ್ಲಿ ದುರಂತ… ಈಜಲೂ ಹೋದ ಮೂವರು ಬಾಲಕರು ನೀರು ಪಾಲು…

Spread the love

ಯುಗಾದಿಯ ದಿನದಂದೇ ಬಾಗಲಕೋಟೆಯಲ್ಲಿ ದುರಂತ…
ಈಜಲೂ ಹೋದ ಮೂವರು ಬಾಲಕರು ನೀರು ಪಾಲು…

ಒಬ್ಬನ ಮೃತದೇಹ ಪತ್ತೆ…ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ
ಯುಗಾದಿ ಹಬ್ಬದಂದು ನದಿಯಲ್ಲಿ ಈಜಲು ಹೋಗಿ ಮೂರು ಬಾಲಕರು ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಸೀತಿಮನಿಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಸೀತಿಮನಿಯಲ್ಲಿ ಯುಗಾದಿ ಹಬ್ಬದ ದಿನವೇ ದುರಂತವೊಂದು ನಡೆದಿದೆ. ನಿನ್ನೆ ಸೀತಿಮನಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ, ಇಲಾಳದ ಮಲ್ಲಪ್ಪ (16) ಪರನಗೌಡ (17) ಮತ್ತು ಸೋಮಶೇಖರ್(15) ನೀರು ಪಾಲಾಗಿದ್ದಾರೆ.

ಮೂವರಲ್ಲಿ ನಿನ್ನೆ ಬಾಲಕ ಸೋಮಶೇಖರನ ಮೃತದೇಹ ಪತ್ತೆಯಾಗಿದೆ. ಎರಡನೇ ದಿನವು ಇಬ್ಬರ ಮೃತದೇಹ ಶೋಧ ಕಾರ್ಯವನ್ನು ಅಗ್ನಿಶಾಮಕ ದಳ ಮುಂದುವರೆಸಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ