ವಿಜಯಪುರ: “ಯಡಿಯೂರಪ್ಪ ತನ್ನ ಮಗನ ಸ್ವಾರ್ಥಕ್ಕಾಗಿ ಹಿಂದುತ್ವದ ವ್ಯಕ್ತಿಗಳನ್ನು ತುಳಿದುಕೊಂಡು ಬಂದಿದ್ದಾರೆ. ಇವತ್ತು ನನ್ನನ್ನು ಸಹ ಯಡಿಯೂರಪ್ಪ ಹಾಗೂ ವಿಜಯೇಂದ್ರ ರಾಜಕೀಯವಾಗಿ ವಂಶ ಪರಂಪರೆ ಮುಂದುವರೆಯಬೇಕು ಎಂಬ ಕಾರಣಕ್ಕೆ ನನ್ನನ್ನು ತುಳಿಯುವ ಕೆಲಸ ಮಾಡಿದ್ದಾರೆ” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ಗೆ ವಿನಂತಿ ಮಾಡುವೆ. ಈ ತರಹ ವಂಶಪರಂಪರೆ, ಭ್ರಷ್ಟಾಚಾರಿಗಳನ್ನು ತೆಗೆದುಹಾಕದಿದ್ದರೆ ಜನರ ವಿಶ್ವಾಸ ಹೋಗುತ್ತದೆ. ವಿಜಯೇಂದ್ರನೇ ಮುಂದಿನ ಮುಖ್ಯಮಂತ್ರಿ ಎಂದು ನೀವು ಬಿಂಬಿಸುವುದಾದರೆ ರಾಜ್ಯದ ಜನ ರಾಜ್ಯದ ಅಭಿವೃದ್ಧಿಗೆ, ಭ್ರಷ್ಟಾಚಾರ ರಹಿತ, ಸನಾತನ ಧರ್ಮ ರಕ್ಷಣೆ ಮಾಡುವ ನಿರ್ಣಯ ಕೈಗೊಳ್ಳುತ್ತಾರೆ.
ವಿಜಯೇಂದ್ರ ಒಬ್ಬ ಮಹಾಭ್ರಷ್ಟ. ಇವನ ಸಲುವಾಗಿಯೇ ಯಡಿಯೂರಪ್ಪ ಜೈಲಿಗೆ ಹೋದರು. ಇಂತಹ ಕುಟುಂಬವನ್ನು ಮುಂದುವರೆಸುವುದಾದರೆ ಈ ನಾಡಿನ ಹಿಂದೂ ಕಾರ್ಯಕರ್ತರು, ಮಹಾ ಜನತೆ ಒಂದು ನಿರ್ಣಯ ಮಾಡುತ್ತಾರೆ” ಎಂದರು.”ನಾವು ಈ ವಿಚಾರವಾಗಿ ಇವತ್ತಿನಿಂದಲೇ ಜನ ಜಾಗೃತಿ ಪ್ರಾರಂಭ ಮಾಡುತ್ತೇವೆ. ನನಗೆ ಬಹಳ ಜನ ಹೇಳುತ್ತಿದ್ದಾರೆ,
ರಾಜ್ಯದಲ್ಲೊಂದು ಹಿಂದು ರಕ್ಷಣೆಗಾಗಿ ಪಕ್ಷ ಕಟ್ಟಬೇಕು ಎನ್ನುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬಕ್ಕೆ ನೀವು ನೇತೃತ್ವ ಕೊಟ್ಟರೆ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತದೆ. ಹಿಂದುಗಳ ರಕ್ಷಣೆ ಬಿಜೆಪಿ ಪಕ್ಷದಿಂದ ಆಗತ್ತೆ ಎಂಬ ಕಾರಣಕ್ಕೆ ಹಿಂದುಗಳು ಬಿಜೆಪಿಗೆ ಮತ ಹಾಕುತ್ತಾರೆ. ಅಭಿವೃದ್ಧಿ ಮಾಡುತ್ತಾರೆ, ಪ್ರಾಮಾಣಿಕರಿದ್ದಾರೆ ಬಿಜೆಪಿಯವರು ಎಂಬ ಕಾರಣಕ್ಕೆ ಮತ ಹಾಕುತ್ತಾರೆ. ಆದರೆ ಯಡಿಯೂರಪ್ಪ ಕುಟುಂಬ ಯಾವುದೂ ಇಲ್ಲ. ವಿಜಯಪುರ ನಗರದ ಅಭಿವೃದ್ಧಿಗೆ ಬಂದ 125 ಕೋಟಿ ರೂ. ಹಣವನ್ನು ಕೂಡ ಯಡಿಯೂರಪ್ಪ ವಾಪಸ್ ತಗೊಂಡರು” ಎಂದು ಅವರು ದೂರಿದರು.
Laxmi News 24×7