Breaking News

ಟ್ರೋಲಿಗರಿಗೆ ಆಹಾರವಾದ ರಾಯುಡು

Spread the love

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ 50 ರನ್​ಗಳ ಬೃಹತ್ ಜಯ ಸಾಧಿಸಿದೆ.

ಆರ್​ಸಿಬಿ ನೀಡಿದ 196 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​​ಕೆ 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಆರ್​ಸಿಬಿ 18 ಆವೃತ್ತಿಗಳ ಐಪಿಎಲ್ (IPL 2025) ಇತಿಹಾಸದಲ್ಲಿ ಎರಡನೇ ಬಾರಿಗೆ ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಜಯಗಳಿಸಿದ ಸಾಧನೆ ಮಾಡಿದೆ.

ಅಲ್ಲದೆ, ಬೆಂಗಳೂರು ಈ ಸೀಸನ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇತ್ತ ಆರ್​ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅತ್ತ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸಿಎಸ್​ಕೆ ಆಟಗಾರ ಅಂಬಟಿ ರಾಯುಡುರನ್ನು (Ambati Rayudu) ಆರ್​ಸಿಬಿ ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ರೋಲಿಗರಿಗೆ ಆಹಾರವಾದ ರಾಯುಡು

ವಾಸ್ತವವಾಗಿ ಆರ್​​ಸಿಬಿ ತಂಡವನ್ನು ಬಹಿರಂಗವಾಗಿಯೇ ಟೀಕಿಸುವ ಆಟಗಾರರ ಪಟ್ಟಿಯಲ್ಲಿ ಸದಾ ಅಗ್ರಸ್ಥಾನದಲ್ಲಿರುವ ಅಂಬಟಿ ರಾಯುಡು, ಆರ್​ಸಿಬಿ ಟ್ರೋಫಿ ಗೆಲ್ಲದಿರುವುದನ್ನು ಯಾವಾಗಲೂ ಗೇಲಿ ಮಾಡುತ್ತಿರುತ್ತಾರೆ. ಆರ್​ಸಿಬಿ ಫ್ರಾಂಚೈಸಿಯ ಜೊತೆಗೆ ಅಭಿಮಾನಿಗಳನ್ನು ತನ್ನ ಹೇಳಿಕೆಗಳಿಂದ ಕೆರಳಿಸುವ ರಾಯುಡು, ವಿಶ್ವ ಕ್ರಿಕೆಟ್​ನ ದಿಗ್ಗಜ ಬ್ಯಾಟರ್​ ಕೊಹ್ಲಿಯನ್ನು ಟಿ20 ಕ್ರಿಕೆಟ್​ಗೆ ಅಸಮರ್ಥ ಆಟಗಾರ ಎಂಬಂತೆಯೂ ಮಾತನಾಡುತ್ತಾರೆ. ಇದೀಗ ಚೆನ್ನೈ ತಂಡವನ್ನು ಅವರ ನೆಲದಲ್ಲೇ ಆರ್​ಸಿಬಿ ಮಣಿಸಿರುವ ಖುಷಿಯಲ್ಲಿರುವ ಆರ್​ಸಿಬಿ ಫ್ಯಾನ್ಸ್, ಅಂಬಟಿ ರಾಯುಡು ಇನ್ನೊಂದು ವಾರ ಸೋಶಿಯಲ್ ಮೀಡಿಯಾವನ್ನು ನೋಡದಂತೆ ಟ್ರೋಲ್ ಮಾಡುತ್ತಿದ್ದಾರೆ


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ