ಕಿತ್ತೂರಿನಲ್ಲಿ ಮಹಿಳಾ ದಿನಾಚರಣೆ; ಸಾಧಕಿಯರ ಸನ್ಮಾನ
ಅಧಿವಕ್ತಾ ಪರಿಷದ್ ಮತ್ತು ಕಿತ್ತೂರು ಬಾರ್ ಅಸೋಸಿಯೇಷನ ವತಿಯಿಂದ ಆಯೋಜನೆ
ಅಧಿವಕ್ತಾ ಪರಿಷದ್ ಉತ್ತರ ಕರ್ನಾಟಕ, ಬೆಳಗಾವಿ ಶಾಲೆ ಮತ್ತು ಕಿತ್ತೂರು ಬಾರ್ ಅಸೋಸಿಯೇಷನನ ವತಿಯಿಂದ ಬೆಳಗಾವಿ ತಾಲೂಕಿನ ಕಿತ್ತೂರಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಭಾನುವಾರದಂದು ಚೆನ್ನಮ್ಮನ ಕಿತ್ತೂರಿನ ರಾಜಗುರು ಪ್ರತಿಷ್ಠಾನ ಸಂಸ್ಥಾನ ಕಲ್ಮಠದಲ್ಲಿ ಮುಖ್ಯ ಅತಿಥಿಗಳಾಗಿ ಮೀನಾಕ್ಷಿ ಸವದಿ ಅವರು ಉಪಸ್ಥಿತರಿದ್ದರು. ಈ ವೇಳೆ ಅವರು ರಾಣಿ ಚೆನ್ನಮ್ಮನ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ತಿಳಿಸಿದರು. ಈ ವೇಳೆ ರಾಜಗುರು ಶ್ರೀ ಮಡಿವಾಳ ರಾಜಯೋಗಿಮದ್ರ ಸ್ವಾಮೀಜಿ ಅವರು ಆರ್ಶೀವಚನವನ್ನು ನೀಡಿದರು. ಜಯಶ್ರೀ ಮಂಡ್ರೋಳಿ ಮತ್ತು ರೂಪಾ ಧವಳಗಿ ಅವರು ಭಾರತೀಯ ಮಹಿಳಾ ಕಾನೂನುಗಳ ಕುರಿತು ಅರಿವನ್ನು ಮೂಡಿಸಿದರು
.
ಈ ವೇಳೆ ಸಾಧಕ ಮಹಿಳೆಯರನ್ನು ಗಣ್ಯರು ಸನ್ಮಾನಿಸಿದರು. ನ್ಯಾಯವಾದಿಗಳಾದ ಶಿವಾನಂದ ಬೋಗುರ್, ಸಚೀನ್ ಶಿವಣ್ಣವರ, ಎಸ್. ವೈ ಸಿದ್ಧಮನಿ, ಸದಾಶಿವ ಹೇರಿಮಠ, ಎನ್.ಬಿ. ತೇರದಾಳ, ವೀಣಾ ಘಸ್ತಿ, ಲಕ್ಷ್ಮೀ ಮಗದುಮ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
Laxmi News 24×7