Breaking News

ಗಂದಿಗವಾಡ ಕೆರೆದಂಡೆಯ ರಸ್ತೆ ದುರಸ್ತಿಗೆ ಆಗ್ರಹ ಖಾನಾಪೂರ ತಾಲೂಕು ಗಂದಿಗವಾಡ ಗ್ರಾಮ

Spread the love

ಹಾಳಾಗಿರುವ ಕೆರೆ ದಂಡೆಯ ರಸ್ತೆ ದುರಸ್ತಿಗೆ ಆಗ್ರಹ
ದೊಡ್ಡ ಕೆರೆಯ ದಂಡೆ ಕೊರೆದು ಕಿರಿದಾಗಿರುವ ರಸ್ತೆ
ಅಪಾಯದ ಅಂಚಿನಲ್ಲಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆ
ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾಮದ ದೊಡ್ಡ ಕೆರ ದಂಡೆಯ ಮಣ್ಣು ಕುಸಿದು ಗ್ರಾಮವನ್ನು ಸಂಪರ್ಕಿಸುವ ಮುಖ್ಯರಸ್ತೆ ಹಾಳಾಗಿದ್ದು ದೋಸ್ತಿಗೊಳಿಸಲು ಗ್ರಾಮಸ್ಥರು ಹಾಗೂ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ
ನೀರಿನ ರಭಸಕ್ಕೆ ಕೊರೆದು ಮಣ್ಣು ಕುಸಿದು ದಂಡೆಗಳು ಹಾಳಾಗಿದ್ದು ರಸ್ತೆ ಕಿರಿದಾಗಿದೆ ಇದರಿಂದ ಅಪಾಯಕ್ಕೆ ಅವ್ಹಾನ ನೀಡುವಂತಾಗಿದೆ. ಡಾಂಬರ್ ರಸ್ತೆಯ ಎರಡೂ ಪಕ್ಕಕ್ಕೂ ಕೆರೆ ನೀರು ಕೊರೆದು ಕಿರಿದಾಗಿದ್ದರಿಂದ ದಾರಿ ಹೋಕರಿಗೆ, ವಾಹನ ಸವಾರರಿಗೆ ಭಯ ಹುಟ್ಟಿಸುತ್ತಿದೆ ಕಾರಣ ಸಂಬಂಧ ಪಟ್ಟ ಇಲಾಖೆಯವರು ಈ ಕಡೆಗೆ ಗಮನಹರಿಸಿ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣ ವೇದಿಕೆಯ ಅಧ್ಯಕ್ಷ ಬಸವರಾಜ ಬಂಗಿ, ಎಂ ಎಂ ರಾಜೀಬಾಯಿ ಅಶೋಕ್ ಪಾಟೀಲ್ ಅವರು ಆಗ್ರಹಿಸಿದ್ದಾರೆ
ಗಂದಿಗವಾಡ ಮುಗಳಿಹಾಳ ಹಾಗೂ ಬಿಡಿ ಖಾನಾಪುರ್ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದ್ದು ಇದರ ಮೇಲೆ ದಿನ ನಿತ್ಯ ಪ್ರಯಾಣಿಸುವ ಸರಕಾರಿ ಬಸ್ಸುಗಳು ಶಾಲಾ ವಿದ್ಯಾರ್ಥಿಗಳ ವಾಹನಗಳು ಹಾಗೂ ರೈತರ ಜಮೀನುಗಳಿಗೆ ಹೋಗುವ ಟ್ಯಾಕ್ಟರ್ ಗಳು ಸೇರಿದಂತೆ ದ್ವಿಚಕ್ರ ನೂರಾರು ವಾಹಗಳು ದಿನಂಪ್ರತಿ ಹಾದು ಹೋಗುತ್ತವೆ ಈ ಭಾಗದ ಬಹುಮುಖ್ಯರಸ್ತೆ ಇದಾಗಿದ್ದು ಕೂಡಲೇ ಈ ರಸ್ತೆಯನ್ನು ಅಗಲೀಕರಣ ಗೊಳಿಸಿ ತಡೆಗೋಡೆಗಳನ್ನು ನಿರ್ಮಿಸಬೇಕು ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ ಅಪಾಯ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಇಲ್ಲವಾದರೆ ತಹಶೀಲ್ದಾರ್ ಕಚೇರಿ ಎದುರಿಗೆ ಪ್ರತಿಭಟನೆ ನಡೆಸುವುದಾಗಿ ಬಸವರಾಜ್ ಬಂಗಿ ಎಚ್ಚರಿಸಿದ್ದಾರೆ

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ